ಪಂಜಾಬ್: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ಆಡಳಿತ ನಡೆಸಿ, ಕೆಲ ತಿಂಗಳ ಹಿಂದಷ್ಟೇ ಮೈತ್ರಿಯನ್ನು ಮುರಿದು ಹೋದ ಶಿರೋಮಣಿ ಅಕಾಲಿ ದಳ (ಎಸ್​ಎಡಿ)ದ ನಾಯಕರು ಇದೀಗ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಲಾರಂಭಿಸಿದ್ದಾರೆ. ದೇಶದಲ್ಲಿ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್​ ಬಿಜೆಪಿಯೇ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ದೂರಿದ್ದಾರೆ.


COMMERCIAL BREAK
SCROLL TO CONTINUE READING

ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಹಾಗೂ ಎಸ್​ಎಟಿ ಪಕ್ಷದ ಹಿರಿಯ ನಾಯಕ ಸುಖಬೀರ್​​ ಸಿಂಗ್​ ಬಾದಲ್(Sukhbir Singh Badal)​ ಇಂತದ್ದೊಂದು ಆರೋಪ ಮಾಡಿದ್ದಾರೆ. 'ಬಿಜೆಪಿ ದೇಶದ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್. ಇದು ರಾಷ್ಟ್ರೀಯ ಐಕ್ಯತೆಯನ್ನು ತುಂಡುಗಳಾಗಿ ಒಡೆದಿದೆ. ಮುಸ್ಲಿಮರ ವಿರುದ್ಧ ನಾಚಿಕೆಯಿಲ್ಲದೆ ಹಿಂದೂಗಳನ್ನು ಪ್ರಚೋದಿಸುತ್ತದೆ. ಈಗ ಶಾಂತಿ ಪ್ರಿಯ ಪಂಜಾಬಿ ಹಿಂದೂಗಳನ್ನು ನಮ್ಮ ಸಿಖ್ ಸಹೋದರರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ. ದೇಶಭಕ್ತ ಪಂಜಾಬ್​ನ್ನು ಬಿಜೆಪಿ ಕೋಮು ಜ್ವಾಲೆಗೆ ತಳ್ಳಲು ಪ್ರಯತ್ನಿಸುತ್ತಿದೆ' ಎಂದು ಬಾದಲ್ ಅವರು ಟ್ವೀಟ್ ಮಾಡಿದ್ದಾರೆ.


'ಕಾಂಗ್ರೆಸ್ ಈಗ ಸದನದ ಒಳಗೂ ಗುಂಡಾಗಿರಿ ಮಾಡುತ್ತಿದೆ'


ಬಿಜೆಪಿ ನೇತೃತ್ವದ ಸರ್ಕಾರ ತನ್ನ 'ಅಹಂ' ಅನ್ನು ಬದಿಗಿಟ್ಟು ಪ್ರತಿಭಟನೆ ನಡೆಸುತ್ತಿರುವ ರೈತರ ಮಾತುಗಳನ್ನು ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಗ್ರಾ. ಪಂ. ಚುನಾವಣೆ: ಅಭ್ಯರ್ಥಿಗಳು ಕಡ್ಡಾಯವಾಗಿ 'ಪಾಲಿಸಬೇಕಾದ ನಿಮಯ'ಗಳಿವು!