ಮಂಗಳೂರು: ಕಾಂಗ್ರೆಸ್ ವಿಧಾನಪರಿಷತ್ ನಲ್ಲಿ ಗೂಂಡಾಗಿರಿ ವರ್ತನೆ ತೋರಿದ್ದು, ಕೂಡಲೇ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್(Congress) ನಾಯಕರು ವಿಧಾನ ಪರಿಷತ್, ವಿಧಾನಸಭೆ ಹೊರಗೆ ಗೂಂಡಾಗಿರಿ ಮಾಡುತ್ತಿತ್ತು. ಇದೀಗ ಒಳಗೂ ಗುಂಡಾಗಿರಿ ಪ್ರದರ್ಶಿಸಿದೆ. ಈ ಮೂಲಕ ರಾಜ್ಯದ ಜನತೆಗೆ ಅವಮಾನ ಮಾಡಿದಂತಾಗಿದೆ ಹೀಗಾಗಿ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾ. ಪಂ. ಚುನಾವಣೆ: ಅಭ್ಯರ್ಥಿಗಳು ಕಡ್ಡಾಯವಾಗಿ 'ಪಾಲಿಸಬೇಕಾದ ನಿಮಯ'ಗಳಿವು!
ಗೋಹತ್ಯೆ ನಿಷೇಧ ಮಸೂದೆಯ ಬಗ್ಗೆ ವಿಧಾನ ಪರಿಷತ್ನಲ್ಲಿ ಚರ್ಚೆಗೆ ಅವಕಾಶ ನೀಡದೆ ಏಕಾಏಕಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಕಾರಣ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಅವಿಶ್ವಾಸ ಗೊತ್ತುವಳಿಯನ್ನು ಚರ್ಚಿಸಲು ಒಂದು ದಿನದ ಕಲಾಪ ನಡೆಸಲು ಅವಕಾಶ ನೀಡುವಂತೆ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಇಂದು ವಿಧಾನ ಪರಿಷತ್ ಕಲಾಪ ನಡೆಯಿತು. ಆದರೆ, ಸಭಾಪತಿಗಳನ್ನು ಪೀಠದಲ್ಲಿ ಕೂರಲು ಬಿಡದೆ ಬಿಜೆಪಿಯವರು ಗಲಾಟೆ ನಡೆಸಿದ್ದರಿಂದ ಹಾಗೂ ಕಲಾಪದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷದವರಿಂದ ಹೈಡ್ರಾಮಾ ನಡೆದಿದ್ದರಿಂದ ಅನಿರ್ದಿಷ್ಟಾವಧಿಗೆ ಇಂದಿನ ಕಲಾಪವನ್ನು ಮುಂದೂಡಲಾಯಿತು.
ದೇಶದೆದುರು 'ರಾಜ್ಯದ ಮಾನ ಹರಾಜು'- ವಿಧಾನ ಪರಿಷತ್'ನಲ್ಲಿ ಕಿತ್ತಾಡಿದ ಬಿಜೆಪಿ-ಕಾಂಗ್ರೆಸ್ ಸದಸ್ಯರು!