UP Politics News: 2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶಕ್ಕಾಗಿ ಬಿಜೆಪಿ ವಿಶೇಷ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದೆ. ರಾಜಕೀಯವಾಗಿ ಪ್ರಮುಖವಾಗಿರುವ ಈ ರಾಜ್ಯದಲ್ಲಿ ಯಾವುದೇ ಸಣ್ಣ ತಪ್ಪು ಆಗಲು ಪಕ್ಷ ಬಯಸುತ್ತಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಪಕ್ಷವು 2019ರಲ್ಲಿ ಸೋತ 14 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಮೊದಲು ಘೋಷಿಸಲಿದೆ. ಈ 14 ಸ್ಥಾನಗಳಲ್ಲಿ ಘಾಜಿಪುರ್, ಘೋಸಿ, ನಗೀನಾ, ಸಹರಾನ್‌ಪುರ, ಬಿಜ್ನೋರ್, ಅಮ್ರೋಹಾ, ಶ್ರಾವಸ್ತಿ, ಅಂಬೇಡ್ಕರ್ ನಗರ, ಲಾಲ್‌ಗಂಜ್, ಜಾನ್‌ಪುರ್, ಮೈನ್‌ಪುರಿ, ಮೊರಾದಾಬಾದ್, ಸಂಭಾಲ್ ಮತ್ತು ರಾಯ್ ಬರೇಲಿ ಸೇರಿವೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರ ಹಲವಾರು ಪ್ರಯೋಜನಗಳು!


ಈ ಸ್ಥಾನಗಳ ಸಮೀಕ್ಷೆಗೆ ಪಕ್ಷವು ಇತ್ತೀಚೆಗೆ ಸಚಿವರು ಮತ್ತು ಅಧಿಕಾರಿಗಳನ್ನು ಕಳುಹಿಸಿದ್ದು, ಗೆಲುವಿಗೆ ಬೇಕಾದ ಸಮೀಕರಣಗಳು ಹಾಗೂ ಸದ್ಯದ ಸ್ಥಿತಿಗತಿ ಕುರಿತು ವರದಿ ನೀಡಿದ್ದಾರೆ.


ಪ್ರತಿ ಸ್ಥಾನಕ್ಕೆ ಮೂವರು ಪ್ರಬಲ ಸ್ಪರ್ಧಿಗಳು


ಪ್ರತಿ ಸ್ಥಾನಕ್ಕೆ ಮೂವರು ಪ್ರಬಲ ಸ್ಪರ್ಧಿಗಳ ಹೆಸರನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದೇ ಸಮಯದಲ್ಲಿ, ವಿರೋಧ ಪಕ್ಷಗಳ ಕೆಲವು ಸಂಸದರನ್ನು ಬಿಜೆಪಿಗೆ ಸೇರಿಸಿಕೊಳ್ಳಬಹುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.


ಇದನ್ನೂ ಓದಿ:  ಸರ್ಫರಾಜ್, ಧ್ರುವ್ ಜುರೆಲ್ ಬೆನ್ನಲ್ಲೇ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಲು ಈ ವೇಗಿ ಸಿದ್ಧ


ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 62 ಸ್ಥಾನಗಳನ್ನು ಗೆದ್ದಿದೆ. ಅದರ ಮಿತ್ರ ಪಕ್ಷವಾದ ಅಪ್ನಾ ದಳ (ಎಸ್) ಎರಡು ಸ್ಥಾನಗಳಲ್ಲಿ ಯಶಸ್ವಿಯಾಗಿದೆ. ಬಿಎಸ್‌’ಪಿ 10, ಎಸ್‌’ಪಿ 5 ಮತ್ತು ಕಾಂಗ್ರೆಸ್‌ 1 ಸ್ಥಾನ ಗೆದ್ದಿದ್ದವು. ನಂತರ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ ರಾಂಪುರ ಮತ್ತು ಅಜಂಗಢ ಕ್ಷೇತ್ರಗಳನ್ನು ಗೆದ್ದಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ