ಲಖನೌ : ದೇಶದಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ಹರಡುವಿಕೆ ನಿಯಂತ್ರಿಸಲು ಗೋಮೂತ್ರ ಕುಡಿಯುವಂತೆ ಉತ್ತರಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಗೋಮೂತ್ರ(Cow Urine)ವನ್ನು ಹೇಗೆ ಸೇವಿಸಬೇಕು ಎಂಬ ವಿಧಾನಗಳ ಕುರಿತಾದಂತೆ ಸುರೇಂದ್ರ ಸಿಂಗ್‌ ವೀಡಿಯೋ ಮೂಲಕ ತಿಳಿಸಿದ್ದಾರೆ. ವಿಡಿಯೋದಲ್ಲಿ ಜನರಿಗೆ ಗೋಮೂತ್ರ ಹೇಗೆ ಸೇವಿಸಬೇಕು ಎಂದು ತಿಳಿಸುವುದರೊಂದಿಗೆ ತಾವೂ ಗೋಮೂತ್ರ ಕುಡಿದಿರುವುದು ಕಂಡು ಬಂದಿದೆ.


ಇದನ್ನೂ ಓದಿ : ಕಂಪ್ಲೀಟ್ ಲಾಕ್ ಡೌನ್ ಅನುಷ್ಠಾನಕ್ಕೆ ಬರುತ್ತಾ..? ಐಎಂಎ ಹೇಳಿದ್ದೇನು..?


ಪ್ರತೀನಿತ್ಯ 18 ಗಂಟೆಗಳ ಕಾಲ ನಾನು ಜನಸೇವೆ ಮಾಡುತ್ತಿದ್ದು, ಇದಕ್ಕೆ ಗೋಮೂತ್ರ ಸೇವನೆಯಿಂದ ದೊರಕಿದ ಆರೋಗ್ಯವೇ ಕಾರಣ ಎಂದು ಅವರು ಸುರೇಂದ್ರ ಸಿಂಗ್(MLA Surendra Singh) ಅವರು ಹೇಳಿದ್ದಾರೆ.


Vehicle Re-Registration : ಕೇಂದ್ರ ಸಾರಿಗೆ ಇಲಾಖೆಯಿಂದ ಸಿಹಿ ಸುದ್ದಿ : ವಾಹನ ಮಾಲೀಕತ್ವದ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆ!


ಬೆಳಗ್ಗೆ ಖಾಲಿ ಹೊಟ್ಟೆ(Empty Stomach)ಯಲ್ಲಿ ಮೂರು ಮುಚ್ಚಳದಷ್ಟು ಗೋಮೂತ್ರವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಸೇವಿಸಬೇಕು ಎಂದ ಅವರು, ತಾನು ವಿಜ್ಞಾನವನ್ನು ನಂಬದಿದ್ದರೂ ಗೋಮೂತ್ರವನ್ನು ನಂಬುತ್ತೇನೆ. ಒಂದು ಲೋಟ ನೀರಿಗೆ ಗೋಮೂತ್ರ ಬೆರೆಸಿ ಕುಡಿದ ಬಳಿಕ ಅರ್ಧ ಗಂಟೆ ಏನನ್ನೂ ಸೇವಿಸಬಾರದು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.


ಇದನ್ನೂ ಓದಿ : ನಾಳೆಯಿಂದ ಮನೆ ಬಾಗಿಲಿಗೆ ವಿತರಣೆಯಾಗಲಿದೆ ಮದ್ಯ ; 'ಎಣ್ಣೆ' Home deliveryಗೂ ಇದೆ App


ಬಿಜೆಪಿ ಶಾಸಕರ ಈ ವಿಡಿಯೋ(Video) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹೇಳಿಕೆ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.