ಕಂಪ್ಲೀಟ್ ಲಾಕ್ ಡೌನ್ ಅನುಷ್ಠಾನಕ್ಕೆ ಬರುತ್ತಾ..? ಐಎಂಎ ಹೇಳಿದ್ದೇನು..?

ಕರೋನಾ ಉಂಟುಮಾಡಿರುವ ಸವಾಲುಗಳನ್ನು ಎದುರಿಸಲು ಎಲ್ಲಾ ಹೆಜ್ಜೆಗಳನ್ನು ಇಡಬೇಕು.  ಕರೋನಾ ಎರಡನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯ ಯಾವುದೇ ಉಪಯುಕ್ತ ಹೆಜ್ಜೆ ಇಟ್ಟಿಲ್ಲ. ಕರೋನಾವನ್ನು ಎದುರಿಸುವ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಡಲು ಹಿಂಜರಿಯಬಾರದು'' ಎಂದು IMA ಹೇಳಿದೆ.

Written by - Ranjitha R K | Last Updated : May 9, 2021, 10:45 AM IST
  • ಕರೋನಾ ನಿರ್ವಹಣೆಗಾಗಿ ಕಂಪ್ಲೀಟ್ ಲಾಕ್ ಡೌನ್ ಘೋಷಣೆ ಮಾಡಿ ಎಂದಿದೆ ಐಎಂಎ
  • ಕೇಂದ್ರ ಆರೋಗ್ಯ ಸಚಿವಾಲಯ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದಿದೆ ಐಎಂಎ
  • ಆರೋಗ್ಯ ಸಚಿವಾಲಯದ ನಿರ್ಲಕ್ಷ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಐಎಂಎ
ಕಂಪ್ಲೀಟ್ ಲಾಕ್ ಡೌನ್ ಅನುಷ್ಠಾನಕ್ಕೆ ಬರುತ್ತಾ..? ಐಎಂಎ ಹೇಳಿದ್ದೇನು..?

ದೆಹಲಿ : ಕರೋನಾ (Coronavirus) ತಾಂಡವ ನಿಯಂತ್ರಣಕ್ಕೆ ಸಿಗುತ್ತಿಲ್ಲ. ದಿನಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗಲುತ್ತಿದೆ. ರೋಗಿಗಳ ನಿರ್ವಹಣೆಗೆ ಮೆಡಿಕಲ್ ವ್ಯವಸ್ಥೆ ಸಾಕಾಗುತ್ತಿಲ್ಲ. ಬಹುತೇಕ ರಾಜ್ಯಗಳಲ್ಲಿ ಲಾಕ್ ಡೌನ್ (Lockdown) ರೀತಿಯ ಸನ್ನಿವೇಶವೇ ಜಾರಿಯಲ್ಲಿದೆ. ಈ ನಡುವೆ, ಪ್ರಸ್ತುತ ಪರಿಸ್ಥಿತಿಯ ನಿರ್ವಹಣೆಗಾಗಿ ಕಂಪ್ಲೀಟ್ ಲಾಕ್ ಡೌನ್ (Complete lockdown) ಘೋಷಣೆ ಮಾಡಿ ಎಂದು ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ - ಐಎಂಎ ಒತ್ತಾಯ ಮಾಡಿದೆ. 

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ  ಇಂಡಿಯನ್ ಮೆಡಿಕಲ್ ಅಸೋಶಿಯೇಶನ್, '(IMA) 'ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚೆತ್ತುಕೊಳ್ಳಬೇಕು. ಕರೋನಾ ಉಂಟುಮಾಡಿರುವ ಸವಾಲುಗಳನ್ನು ಎದುರಿಸಲು ಎಲ್ಲಾ ಹೆಜ್ಜೆಗಳನ್ನು ಇಡಬೇಕು.  ಕರೋನಾ ಎರಡನೇ ಅಲೆಯನ್ನು (Corona second wave) ಎದುರಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯ ಯಾವುದೇ ಉಪಯುಕ್ತ ಹೆಜ್ಜೆ ಇಟ್ಟಿಲ್ಲ. ಕರೋನಾವನ್ನು (COVID-19) ಎದುರಿಸುವ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಡಲು ಹಿಂಜರಿಯಬಾರದು'' ಎಂದು ಹೇಳಿದೆ. 

ಇದನ್ನೂ ಓದಿ : ನಾಳೆಯಿಂದ ಮನೆ ಬಾಗಿಲಿಗೆ ವಿತರಣೆಯಾಗಲಿದೆ ಮದ್ಯ ; 'ಎಣ್ಣೆ' Home deliveryಗೂ ಇದೆ App

ಕರೋನಾ ಎರಡನೇ ಅಲೆ ಸೃಷ್ಟಿಸಿರುವ  ಉತ್ಪಾತವನ್ನು ಎದುರಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವಾಲಯದ ನಿರ್ಲಕ್ಷ್ಯದ ಬಗ್ಗೆ IMA ಅಚ್ಚರಿ ವ್ಯಕ್ತಪಡಿಸಿದೆ.  ಮೆಡಿಕಲ್ ಮೂಲಸೌಕರ್ಯ ಬಲಪಡಿಸಲು ರಾಷ್ಟ್ರಮಟ್ಟದಲ್ಲಿ ಸಂಪೂರ್ಣ ಲಾಕ್ ಡೌನ್ (Lock down) ಘೋಷಣೆ ಮಾಡಬೇಕು ಎಂದು ಐಎಂಎ ಆರೋಗ್ಯ ಸಚಿವಾಲಯವನ್ನು ಒತ್ತಾಯಿಸಿದೆ. 

ಈ ಹಿಂದೆ ಸುಪ್ರೀಂಕೋರ್ಟ್ (Suprem court) ಕೂಡಾ ಸಂಪೂರ್ಣ ಲಾಕ್ ಡೌನ್ ಬಗ್ಗೆ ವಿಚಾರ ಮಾಡುವಂತೆ ಸಲಹೆ ನೀಡಿತ್ತು. AIIMS ನಿರ್ದೇಶಕ ರಣದೀಪ್ ಗುಲೇರಿಯಾ ಕೂಡಾ ಕಠಿಣ ಲಾಕ್ ಡೌನ್ ಜಾರಿಗೊಳಿಸುವಂತೆ ಹೇಳಿದ್ದರು.  ಜೊತೆ ಕರೋನಾ ರಕ್ಕಸ ಮೂರನೇ ಅಲೆಯ ಭಯ  ಇಡೀ ದೇಶವನ್ನು ಕಾಡುತ್ತಿದೆ.  ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಿಜವಾಗಿಯೂ ರಾಷ್ಟ್ರೀಯಮಟ್ಟದಲ್ಲಿ ಸಂಪೂರ್ಣ ಲಾಕ್ ಡೌನ್ (Complete Lockdown) ಘೋಷಣೆ ಮಾಡಲಿದೆಯಾ ಎಂಬ ಪ್ರಶ್ನೆ  ಎದುರಾಗಿದೆ.

ಇದನ್ನೂ ಓದಿ : ಅಕ್ಟೋಬರ್ ತಿಂಗಳಲ್ಲಿ ಭಾರತಕ್ಕೆ ಅಪ್ಪಳಿಸಲಿದೆ ಕೊರೊನಾ ಮೂರನೇ ಅಲೆ

ಸಂಪೂರ್ಣ ಲಾಕ್ ಡೌನ್ (ಜಾರಿಯ ಬಗ್ಗೆ ನೀತಿಯ ಆಯೋಗದ ಸದಸ್ಯ ಡಾ. ವಿಕೆ ಪೌಲ್  ಅವರನ್ನು ಪ್ರಶ್ನಿಸಿದಾಗ,  ಅವರು ಹೇಳಿದ್ದು ಇಷ್ಟು. ಸೋಂಕಿನ ಸರಪಳಿ ಕತ್ತರಿಸಲು ಎಲ್ಲಾ ರಾಜ್ಯ ಸರ್ಕಾರಗಳಿಗೂ ಲಾಕ್ ಡೌನ್ ಸೇರಿದಂತೆ ಹಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ಅಗತ್ಯ ಬಿದ್ದರೆ ಎಲ್ಲಾ ಆಯ್ಕೆಗಳನ್ನು ಜಾರಿಗೊಳಿಸುವ ಬಗ್ಗೆ ಯೋಚಿಸಲಾಗುವುದು ಎಂದು ಡಾ. ಪೌಲ್ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News