Amit Shah: `ಸಾವಿರಾರು ಅಮಾಯಕ ಸಿಖ್ ಸಹೋದರ-ಸಹೋದರಿಯರನ್ನು ಹತ್ಯೆಗೈದರು..`, 84ರ ಗಲಭೆ ಉಲ್ಲೇಖಿಸಿ ಕಾಗ್ರೆಸ್ ವಿರುದ್ದ್ ಅಮಿತ್ ಶಾ ವಾಗ್ದಾಳಿ
Amit Shah In Punjab: ಪ್ರಧಾನಿ ಮೋದಿ ಹೋದಲ್ಲೆಲ್ಲಾ ಮೋದಿ-ಮೋದಿ ಎಂಬ ಘೋಷಣೆಗಳನ್ನು ಕೂಗಲಾಗುತ್ತದೆ ಮತ್ತು ಈ ಘೋಷಣೆಗಳು ಬಿಜೆಪಿ ಅಥವಾ ಪ್ರಧಾನಿ ಮೋದಿಗಾಗಿ ಅಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಈ ಘೋಷಣೆಗಳನ್ನು ದೇಶದ ಗೌರವಾರ್ಥವಾಗಿ ಮೊಳಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ..
Amit Shah In Punjab: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಪಂಜಾಬ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಿಖ್ ದಂಗೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ಪಂಜಾಬ್ ಸಿಎಂ ಭಗವಂತ್ ಮಾನ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಭಗವಂತ್ ಮಾನ್ ಬಳಿ ಕೇಜ್ರಿವಾಲ್ ಗಾಗಿ ಸಮಯವಿದೆ, ಆದರೆ, ಪಂಜಾಬ್‌ನ ಜನತೆಗಾಗಿ ಇಲ್ಲ ಎಂದು ಶಾ ಹೇಳಿದ್ದಾರೆ. ಪಂಜಾಬ್‌ನ ಜನರು ಅಭದ್ರತೆಯ ಭಾವನೆಯಲ್ಲಿ ಬದುಕುತ್ತಿದ್ದಾರೆ ಎಂದು ಮಾನ್ ಹೇಳಿದ್ದಾರೆ..
1984ರಲ್ಲಿ ಕಾಂಗ್ರೆಸ್ ನಾಯಕತ್ವ ನಡೆಸಲಾದ ಹತ್ಯಾಕಾಂಡದಲ್ಲಿ ಸಾವಿರಾರು ಅಮಾಯಕ ಸಿಖ್ ಸಹೋದರ ಸಹೋದರಿಯರು ಸಾವನ್ನಪ್ಪಿದ್ದಾರೆ ಎಂದು ಕಾಂಗ್ರೆಸ್ ಅನ್ನು ಗುರಿಯಾಗಿಸಿ ಅವರು ಮಾತನಾಡಿದ್ದಾರೆ. 1984 ರಿಂದ 2014ರವರೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಸಿಖ್ ದಂಗೆಯ ಅಪರಾಧಿಗಳನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ ಅಂದು ಅವರು ಹೇಳಿದ್ದಾರೆ. ಕೇಂದ್ರದ ಮೋದಿ ಸರ್ಕಾರಕ್ಕೆ 9 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಗುರುದಾಸ್‌ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಗೃಹ ಸಚಿವರು ಮಾತನಾಡಿದ್ದಾರೆ.
ಇದನ್ನೂ ಓದಿ-MP: 'ಮುಸ್ಲಿಂ ಯುವತಿಯರನ್ನು ವಿವಾಹವಾಗುವ ಹಿಂದೂ ಯುವಕರಿಗೆ 11 ಸಾವಿರ ನಗದು ಬಹುಮಾನ'
ತ್ರಿವರ್ಣ ಧ್ವಜ ಕಂಗೊಳಿಸುವ ರಾಜ್ಯ ಪಂಜಾಬ್
ತ್ರಿವರ್ಣ ಧ್ವಜದ ಎಲ್ಲಾ ಮೂರು ಬಣ್ಣಗಳು ಕಾಣುವ ಒಂದು ರಾಜ್ಯ ಎಂದರೆ ಅದು ಪಂಜಾಬ್ ರಾಜ್ಯ ಎಂದು ಗೃಹ ಸಚಿವರು ಹೇಳಿದ್ದಾರೆ. ಹುತಾತ್ಮರ ತ್ಯಾಗದ ಅರ್ಥದಲ್ಲಿ ಕೇಸರಿ ಬಣ್ಣ, ಗುರುಗಳ ಶಾಂತಿ ಸೌಹಾರ್ದತೆಯ ಸಂದೇಶದಲ್ಲಿ ಬಿಳಿ ಬಣ್ಣ ಕಾಣುತ್ತದೆ ಮತ್ತು ಅನ್ನದಾತ ರೈತ ನಾಡಿನ ಗೋದಾಮುಗಳನ್ನು ತುಂಬಿದಾಗ ನಮಗೆ ಹಸಿರು ಬಣ್ಣವೂ ಗೋಚರಿಸುತ್ತದೆ. ಮಹಾನ್ ಸಿಖ್ ಗುರುಗಳು ಪಂಜಾಬ್‌ನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ದೇಶಭಕ್ತಿ, ಸಮಾನತೆ ಮತ್ತು ಸಾಮರಸ್ಯದ ಪಾಠವನ್ನು ನಮಗೆ ಕಳಿಸಿದ್ದಾರೆ. ಅವುಗಳನ್ನು ಅನುಸರಿಸಿ, ಪಂಜಾಬ್ ಸ್ವಾತಂತ್ರ್ಯದ ಮೊದಲು ಮತ್ತು ನಂತರದ ಪ್ರತಿ ಬಿಕ್ಕಟ್ಟಿನಲ್ಲಿ ಇಡೀ ದೇಶವನ್ನು ರಕ್ಷಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Chattisgarh: ಒಗ್ಗೂಡಿ ಭಾರತವನ್ನು 'ಹಿಂದೂ ರಾಷ್ಟ್ರ'ವನ್ನಾಗಿಸಲು ಕರೆ ನೀಡಿದ ಕಾಂಗ್ರೆಸ್ ಶಾಸಕಿ, ಪಕ್ಷ ಹೇಳಿದ್ದೇನು ಗೊತ್ತಾ?
ಪ್ರಧಾನಿ ಮೋದಿ ದೇಶದ ಹೆಮ್ಮೆ ಹೆಚ್ಚಿಸಿದ್ದಾರೆ
ಮೋದಿ ಸರ್ಕಾರವನ್ನು ಶ್ಲಾಘಿಸಿದ ಶಾ, ಈ 9 ವರ್ಷಗಳು ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿವೆ ಎಂದು ಹೇಳಿದ್ದಾರೆ. ಇಂದು ಜಗತ್ತಿನಲ್ಲಿ, ಭಾರತವು ವಿಶ್ವದಲ್ಲಿ ಬೆಳವಣಿಗೆಯ ಎಂಜಿನ್ ಎಂದು ಗುರುತಿಸಲ್ಪಟ್ಟಿದೆ. 9 ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಬಡವರ ಕಲ್ಯಾಣದ ಮೂಲಕ 60 ಕೋಟಿ ಬಡವರಿಗೆ ಹೊಸ ಭರವಸೆಯ ಬದುಕನ್ನು ನೀಡುವ ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿ ದೇಶ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ. ಮೋದಿ ಜಿ-7 ಶೃಂಗಸಭೆಗೆ ಹೋಗಿ ಅಲ್ಲಿಂದ ಆಫ್ರಿಕಾಕ್ಕೆ ಹೋಗಿದ್ದರು. ಕೆಲವರು ಅವರ ಆಟೋಗ್ರಾಫ್ ಕೇಳಿದರೆ , ಕೆಲವರು ಸಮಯ ಕೇಳುತ್ತಾರೆ, ಕೆಲವರು ಅವರ ಪಾದಗಳನ್ನು ಸ್ಪಶಿಸುತ್ತಾರೆ ಎಂದು ಶಾ ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.