ನವದೆಹಲಿ: ಒಂದು ವೇಳೆ ಕಾಂಗ್ರೆಸ್ ಪಕ್ಷವು ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದಿದ್ದರೆ ನಾನು ನಾಲ್ಕು ಮಕ್ಕಳಿಗೆ ಜನ್ಮ ನೀಡಲು ಹೋಗುತ್ತಿರಲಿಲ್ಲ ಎಂದು ಬಿಜೆಪಿ ಸಂಸದ ರವಿ ಕಿಶನ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಆಜ್ ತಕ್‌ನ ಮಾಧ್ಯಮ ಶೃಂಗಸಭೆಯಲ್ಲಿ ಮಾತನಾಡಿದ ರವಿ ಕಿಶನ್, ಈ ಶೃಂಗಸಭೆ  ನಂತರ ಸಂಸತ್ತಿನಲ್ಲಿ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ಮಂಡಿಸಲು ಸಿದ್ಧವಾಗಿರುವುದಾಗಿ ಹೇಳಿದರು. ಆದರೆ ತಮ್ಮ ನಾಲ್ಕು ಮಕ್ಕಳು ಇರುವುದರ ಬಗ್ಗೆ ಕೇಳಿದಾಗ ಇದಕ್ಕೆ ಉತ್ತರಿಸಿದ ಅವರು “ಕಾಂಗ್ರೆಸ್ ಸರ್ಕಾರವು ಮೊದಲೇ ಮಸೂದೆಯನ್ನು ತಂದಿದ್ದರೆ, ನಾನು ನಿಲ್ಲಿಸುತ್ತಿದ್ದೆ" ಎಂದು ಹೇಳಿದರು.


"ನನಗೆ ನಾಲ್ಕು ಮಕ್ಕಳಿರುವುದು ನಿಜ. ಅವರನ್ನು ಬೆಳೆಸುವ ಕಷ್ಟ ಎಷ್ಟು ಎನ್ನುವುದನ್ನು ನನಗೆ ತಿಳಿದಿದೆ. ಸಾಕಷ್ಟು ಹೋರಾಟದ ನಂತರ ನಾನು ಯಶಸ್ಸನ್ನು ಅನುಭವಿಸಿದೆ. ಆರಂಭದಲ್ಲಿ, ಕೆಲಸ ಅಥವಾ ಹಣವನ್ನು ಆಯ್ಕೆ ಮಾಡಲು ನಮಗೆ ಕೇಳಲಾಯಿತು.ಆಗ ನಾನು ಯಾವಾಗಲು ಕೆಲಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೆ.ಏಕೆಂದರೆ ಹಣ ತಾನಾಗಿಯೇ ಬರುತ್ತದೆ ಎನ್ನುವುದು ನನಗೆ ತಿಳಿದಿತ್ತು" ಎಂದು ಅವರು ಹೇಳಿದರು.ರವಿ ಕಿಶನ್ ಹೇಳಿದರು.


"ಆದರೆ ಈಗ ತಾವು ನಾಲ್ಕು ಮಕ್ಕಳಿಗೆ ತಂದೆಯಾಗಿದ್ದಿರಾ ಮತ್ತು ಈ ಮಸೂದೆಯನ್ನು ತರಲಾಗುತ್ತಿದೆ ಎಂದು ಪತ್ರಕರ್ತೆ ಕೇಳಿದ್ದಕ್ಕೆ ಅವರು ಉತ್ತರಿಸುತ್ತಾ” ಕಾಂಗ್ರೆಸ್ ಪಕ್ಷವು ಈ ಮಸೂದೆಯನ್ನು ಮೊದಲೇ ಜಾರಿಗೆ ತಂದಿದ್ದರೆ ನಾನು ನಾಲ್ಕು ಮಕ್ಕಳಿಗೆ ಜನ್ಮ ನೀಡಲು ಹೋಗುತ್ತಿರಲಿಲ್ಲ” ಎಂದು ರವಿ ಕಿಶನ್ ಕೇಳಿದಾಗ ಸಭೆಯಲ್ಲಿದ್ದವರು ಒಂದು ಕ್ಷಣ ಆಶ್ಚರ್ಯಚಕಿತರಾದರು.


ರವಿ ಕಿಶನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ನಾಯಕಿ ಸುಪ್ರಿಯಾ ಶ್ರಿನಾಟೆ ಅವರು “ಮಕ್ಕಳಿಗೆ ಜನ್ಮ ನೀಡುತ್ತಲೇ ಹೋದಿರಿ ಎನ್ನುವುದರ ಬಗ್ಗೆ ತಮಗೆ ತಿಳಿದಿರಲಿಲ್ಲವೇ! ಕನಿಷ್ಠ ಕಾಂಗ್ರೆಸ್ ಪಕ್ಷದ  ಕೃಪೆಯಿಂದ ನೀವು ಮೂರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನ ತಂದೆಯಾಗಿದ್ದೀರಿ" ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪತ್ನಿಗೆ ಬಾಡಿ ಶೇಮ್ ಮಾಡಿದ್ದಕ್ಕೆ ಅವರು ಕಿಡಿ ಕಾರಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.