ಚಳಿಗಾಲದಲ್ಲಿ ಈ ಕಾರಣಕ್ಕಾಗಿ ತಿನ್ನಬೇಕು ಬೇಯಿಸಿದ ಮೊಟ್ಟೆ

Boiled Eggs Benefits In Winter:ಬೆಳಗಿನ ಉಪಹಾರದಲ್ಲಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವಂತೆ ಸೂಚಿಸಲಾಗುತ್ತದೆ. ಮೊಟ್ಟೆಯನ್ನು ಬೇರೆ ಬೇರೆ ರೀತಿಯಲ್ಲಿ ತಿನ್ನಬಹುದಾದರೂ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ತುಸು ಹೆಚ್ಚೇ ಪ್ರಯೋಜನವಾಗುತ್ತದೆ.  

Written by - Ranjitha R K | Last Updated : Dec 5, 2022, 04:09 PM IST
  • ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
  • ಚಳಿಗಾಲದಲ್ಲಿ ಸೇವಿಸುವ ಆಹಾರ ಬಹಳ ಮುಖ್ಯವಾಗಿರುತ್ತದೆ.
  • ಚಳಿಗಾಲದಲ್ಲಿ ಸೇವಿಸುವ ಆಹಾರ ಪದ್ಧತಿ ಕೂಡಾ ಬದಲಾಗುತ್ತದೆ.
ಚಳಿಗಾಲದಲ್ಲಿ ಈ ಕಾರಣಕ್ಕಾಗಿ ತಿನ್ನಬೇಕು ಬೇಯಿಸಿದ ಮೊಟ್ಟೆ  title=
Boiled egg benefits in winter

Boiled Eggs Benefits In Winter : ಚಳಿಗಾಲದಲ್ಲಿ  ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಚಳಿಗಾಲದಲ್ಲಿ ಸೇವಿಸುವ ಆಹಾರ ಬಹಳ ಮುಖ್ಯವಾಗಿರುತ್ತದೆ. ಈ ಕಾರಣಕ್ಕಾಗಿಯೇ ಚಳಿಗಾಲದಲ್ಲಿ ಸೇವಿಸುವ ಆಹಾರ ಪದ್ಧತಿ ಕೂಡಾ ಬದಲಾಗುತ್ತದೆ. ದೇಹವನ್ನು  ಬೆಚ್ಚಗಿಡುವ ಆಹಾರವನ್ನು ಚಳಿಗಾಲದಲ್ಲಿ ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮೊಟ್ಟೆಯನ್ನು ಸೇವಿಸುವಂತೆ ತಜ್ಞರು ಹೇಳುತ್ತಾರೆ. ಮೊಟ್ಟೆ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪೂರೈಸುತ್ತದೆ. ಮೊಟ್ಟೆಯ ಸೇವನೆಯು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಈ ಕಾರಣಕ್ಕಾಗಿಯೇ ಬೆಳಗಿನ ಉಪಹಾರದಲ್ಲಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವಂತೆ ಸೂಚಿಸಲಾಗುತ್ತದೆ. ಮೊಟ್ಟೆಯನ್ನು ಬೇರೆ ಬೇರೆ ರೀತಿಯಲ್ಲಿ ತಿನ್ನಬಹುದಾದರೂ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ತುಸು ಹೆಚ್ಚೇ ಪ್ರಯೋಜನವಾಗುತ್ತದೆ.

ಚಳಿಗಾಲದಲ್ಲಿ ಬೇಯಿಸಿದ ಮೊಟ್ಟೆಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು :
ದೇಹವು ಒಳಗಿನಿಂದ ಬೆಚ್ಚಗಿರುತ್ತದೆ :  
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವಂಥಹ ಆಹಾರವನ್ನು ಸೇವಿಸಬೇಕಾಗುತ್ತದೆ. ಚಳಿಗಾಲದಲ್ಲಿ ದೇಹಕ್ಕೆ ಪ್ರೋಟೀನ್, ಕ್ಯಾಲ್ಸಿಯಂ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ  ಪ್ರತಿದಿನ ಮೊಟ್ಟೆಗಳನ್ನು ಸೇವಿಸಿದರೆ, ದೇಹವು ಒಳಗಿನಿಂದ ಬೆಚ್ಚಗಿರುತ್ತದೆ. ಇದಕ್ಕಾಗಿ ಪ್ರತಿದಿನ ಒಂದು ಬೇಯಿಸಿದ ಮೊಟ್ಟೆಯನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ದೇಹವು ಸದೃಢವಾಗುತ್ತದೆ.   ಪ್ರತಿದಿನ ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ರೋಗನಿರೋಧ  ಶಕ್ತಿಯೂ ಬಲವಾಗಿರುತ್ತದೆ.

ಇದನ್ನೂ ಓದಿ : Lotus Flower: ಮನಸ್ಸಿನ ಒತ್ತಡ ಕಡಿಮೆ ಮಾಡಲು ಮನೆಯಲ್ಲಿ ಈ ಹೂವನ್ನು ಬೆಳೆಯಿರಿ

ಐರನ್ ಕೊರತೆ ನೀಗುತ್ತದೆ :
ಮೊಟ್ಟೆಗಳಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುತ್ತದೆ. ಅದೇ ಸಮಯದಲ್ಲಿ, ಮೊಟ್ಟೆಯ ಸೇವನೆಯು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಪದೇ ಪದೇ ತಲೆಸುತ್ತು ಬರುತ್ತಿದ್ದರೆ, ನಿತ್ಯ ಒಂದು ಬೇಯಿಸಿದ ಮೊಟ್ಟೆಯನ್ನು ಸೇವಿಸಬೇಕು. 

ಮೆದುಳು ಚುರುಕುಗೊಳಿಸುತ್ತದೆ : 
ಮೊಟ್ಟೆಯಲ್ಲಿರುವ ಒಮೆಗಾ 3 ಮತ್ತು ಕೊಬ್ಬಿನಾಮ್ಲಗಳು ಮೆದುಳಿಣ ಬೆಳವಣಿಗೆಗೆ ಮತ್ತು ಮೆದುಳಿನ ಕಾರ್ಯನಿರ್ವಹಣೆಗೆ ಬಹಳ ಪ್ರಯೋಜನಕಾರಿಯಾಗಿದೆ. ಮೆದುಳನ್ನು ಚುರುಕುಗೊಳಿಸಲು ಅಗತ್ಯವಿರುವ ಅಂಶಗಳು ಕೋಳಿ ಮೊಟ್ಟೆಗಳಲ್ಲಿ ಕಂಡುಬರುತ್ತದೆ.  ನಿತ್ಯ ಬೇಯಿಸಿದ ಮೊಟ್ಟೆಯನ್ನು ತಿನ್ನುತ್ತಾ ಬಂದರೆ ಮೆದುಳು  ಚುರುಕಾಗಿ, ಉತ್ತಮವಾಗಿ  ಕೆಲಸ ಮಾಡುತ್ತದೆ. 

ಇದನ್ನೂ ಓದಿ : ಮುಂದಿನ ಹತ್ತು ವರ್ಷಗಳಲ್ಲಿ ಹೃದಯಾಘಾತ ಯಾವಾಗ ಆಗುತ್ತದೆ ಎನ್ನುವುದನ್ನು ನಿಖರವಾಗಿ ಹೇಳುತ್ತದೆ ಈ ಎಕ್ಸ್-ರೇ

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

Trending News