Varun Gandhi : ಆರ್ಥಿಕ ಅಪರಾಧಿಗಳಾಗಿರುವ ವಿಜಯ್ ಮಲ್ಯ (Vijay Malya), ನೀರವ್ ಮೋದಿ (Nirav Modi) ಮತ್ತು ರಿಷಿ ಅಗರ್ವಾಲ್ (Rishi Agarwal) ಅವರ ಹೆಸರುಗಳನ್ನು ಉಲ್ಲೇಖಿಸಿ ವರುಣ್ ಗಾಂಧಿ (Varun Gandhi) ಸರ್ಕಾರದ (Modi Government) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಅವರ ಹೆಸರುಗಳು ಎಲ್ಲರಿಗೂ ತಿಳಿದಿದ್ದರೂ, ಈ ಪಟ್ಟಿಯಲ್ಲಿ ರಿಷಿ ಅಗರ್ವಾಲ್ ಅವರ ಹೆಸರು ಹೊಸದಾಗಿ ಸೇರ್ಪಡೆಯಾಗಿದೆ. ರಿಷಿ ಅಗರ್ವಾಲ್ ಎಬಿಜಿ ಶಿಪ್‌ಯಾರ್ಡ್‌ನ (ABG Shipyard) ಮಾಜಿ ಅಧ್ಯಕ್ಷರಾಗಿದ್ದು, ಅವರು ಪ್ರಸ್ತುತ ವಿವಿಧ ಬ್ಯಾಂಕುಗಳಿಗೆ ಎಸಗಿರುವ ಭಾರಿ ಪ್ರಮಾಣದ ವಂಚನೆಯಿಂದಾಗಿ ತನಿಖೆ ಎದುರಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ತನಿಖಾ ಸಂಸ್ಥೆಗಳು ಅವರುಗಳ ಕಂಪನಿಗಳು ಎಸಗಿರುವ ಬೃಹತ್ ಪ್ರಮಾಣದ ವಂಚನೆಗಳನ್ನು ಬಯಲಿಗೆಳೆದಾಗ ಮಲ್ಯ ಮತ್ತು ನಿರವ್ ಮೋದಿ ದೇಶ ಬಿಟ್ಟು ಪಲಾಯನಗೈದಿದ್ದಾರೆ.  ಮಲ್ಯ ದಾಜು 9,000 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಎಸಗಿದ್ದರೆ, ನೀರವ್ ಮೋದಿ 14,000 ಕೋಟಿ ರೂ. ಮತ್ತು ರಿಷಿ ಅಗರ್ವಾಲ್ ಸುಮಾರು ₹ 23,000 ಗಳಷ್ಟು ವಂಚನೆ ಎಸಗಿದ್ದಾರೆ. ಇದು ಪ್ರಸ್ತುತ ನಮ್ಮ ದೇಶ ಎದುರಿಸುತ್ತಿರುವ ಅತಿದೊಡ್ಡ ಹಗರಣ ಎಂದೇ ಹೇಳಲಾಗುತ್ತಿದೆ.


ಇಂತಹ ಭ್ರಷ್ಟಾಚಾರಗಳ ವಿರುದ್ಧ "ಸದೃಢ ಸರ್ಕಾರ"ದಿಂದ "ಬಲವಾದ ಕ್ರಮ" ವನ್ನು ನಿರೀಕ್ಷಿಸಲಾಗಿದೆ ಎಂದು ವರುಣ್ ಗಾಂಧಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ವರುಣ್, "ದೇಶದಲ್ಲಿ ಸಾಲದ ಸುಳಿಗೆ ಸಿಲುಕಿ ನಿತ್ಯ 14 ಜನರು ಆತ್ಮಹತ್ಯೆಗೆ ಶರನಾಗುತ್ತಿರುವ ಇಂದಿನ ಸಮಯದಲ್ಲಿರುವಾಗ ವಿಜಯ್ ಮಲ್ಯ: 9000 ಕೋಟಿ, ನೀರವ್ ಮೋದಿ: 14000 ಕೋಟಿ, ರಿಷಿ ಅಗರ್ವಾಲ್ ರಂತಹ: 23000 ಕೋಟಿ. ವಂಚನೆ ಎಸಗಿರುವವರು ವೈಭವೋಪೇತ ಜೀವನ ಉತ್ತುಂಗದಲ್ಲಿದ್ದಾರೆ. ಇಂತಹ ಮಹಾಭ್ರಷ್ಟ ವ್ಯವಸ್ಥೆಯ ವಿರುದ್ಧ 'ಸದೃಢ ಸರ್ಕಾರ', 'ಬಲವಾದ ಕ್ರಮ' ಕೈಗೊಳ್ಳುವ ನಿರೀಕ್ಷೆ ಇದೆ" ಎಂದಿದ್ದಾರೆ. 


ಇದನ್ನೂ ಓದಿ-ಪಂಜಾಬಿ ನಟ ದೀಪ್ ಸಿಧು ಸಾವಿನ ಪ್ರಕರಣ : ಆರೋಪಿ ಟ್ರಕ್ ಚಾಲಕ ಬಂಧನ


ಉತ್ತರ ಪ್ರದೇಶದ ಪಿಲಿಭೀತ್ ನಿಂದ ಬಿಜೆಪಿಯ ಸಂಸದರಾಗಿರುವ ವರುಣ್ ಗಾಂಧಿ, ಇತೀಚಿನ ದಿನಗಳಲ್ಲಿ ಹಲವಾರು ವಿಷಯಗಳನ್ನು ಉಲ್ಲೇಖಿಸಿ ತಮ್ಮದೇ ಆದ ಕೇಂದ್ರ ಸರ್ಕಾರದ ನಿಲುವುಗಳನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ರೈತರ ಪ್ರತಿಭಟನೆಯ ಹಿನ್ನೆಲೆ ಅಂತಿಮವಾಗಿ ರದ್ದುಗೊಂಡ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯನ್ನು ನಿಭಾಯಿಸುವ ಕೇಂದ್ರದ ಪರಿಯನ್ನು ಅವರು ಟೀಕಿಸಿದ್ದಾರೆ. 


ಇದನ್ನೂ ಓದಿ-Pension Scheme : ಅಂಗಡಿಕಾರರಿಗೆ ಸಿಗಲಿದೆ ₹3000 ಪಿಂಚಣಿ : ಇಂದೇ ಈ ಸರ್ಕಾರಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಿ!


ವರ್ಷವಿಡೀ ನಡೆದ ಪ್ರತಿಭಟನೆಯಲ್ಲಿ ನಡೆದ ರೈತರ ಸಾವಿಗೆ ಪರಿಹಾರ ನೀಡಬೇಕು ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ರೈತರನ್ನು ಕೊಚ್ಚಿದ ಆರೋಪ ಆಶಿಶ್ ಮಿಶ್ರಾ ಎದುರಿಸುತ್ತಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ-500 ಗ್ರಾಂ ಬೆಳ್ಳಿ ಉಂಗುರಕ್ಕಾಗಿ ಅಜ್ಜಿಯನ್ನು ಕೊಂದು ಕಾಲುಗಳನ್ನೇ ಕತ್ತರಿಸಿದ ಮೊಮ್ಮಗ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.