Pension Scheme : ಅಂಗಡಿಕಾರರಿಗೆ ಸಿಗಲಿದೆ ₹3000 ಪಿಂಚಣಿ : ಇಂದೇ ಈ ಸರ್ಕಾರಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಿ!

ಅಂಗಡಿಕಾರರಿಗೆ 60 ವರ್ಷಗಳ ನಂತರ ಪಿಂಚಣಿ ಸಿಗುವ ಯೋಜನೆಯನ್ನು ಜಾರಿಗೆ ತರಲಿದೆ. ಇದರಲ್ಲಿ ನೋಂದಣಿ ಮಾಡುವವರ ಭವಿಷ್ಯ ಸುಭದ್ರವಾಗಿರುತ್ತದೆ.

Written by - Channabasava A Kashinakunti | Last Updated : Feb 17, 2022, 08:14 PM IST
  • ಅಂಗಡಿಕಾರರಿಗೆ 60 ವರ್ಷಗಳ ನಂತರ ಪಿಂಚಣಿ ಸಿಗುವ ಯೋಜನೆ
  • ಮೋದಿ ಸರ್ಕಾರ 2019 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು
  • ಉದ್ಯಮಿ 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ ಕನಿಷ್ಠ 3,000 ಪಿಂಚಣಿ ಸಿಗಲಿದೆ.
Pension Scheme : ಅಂಗಡಿಕಾರರಿಗೆ ಸಿಗಲಿದೆ ₹3000 ಪಿಂಚಣಿ : ಇಂದೇ ಈ ಸರ್ಕಾರಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಿ! title=

ನವದೆಹಲಿ : ಮೋದಿ ಸರ್ಕಾರ ದೇಶದ ನಾಗರಿಕರಿಗಾಗಿ ಎಲ್ಲಾ ರೀತಿಯ ಯೋಜನೆಗಳನ್ನು ತಂದಿದೆ. ಮತ್ತೆ ಆ ರೀತಿಯ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದ್ದು, ಇದರಲ್ಲಿ ಅಂಗಡಿಕಾರರಿಗೆ 60 ವರ್ಷಗಳ ನಂತರ ಪಿಂಚಣಿ ಸಿಗುವ ಯೋಜನೆಯನ್ನು ಜಾರಿಗೆ ತರಲಿದೆ. ಇದರಲ್ಲಿ ನೋಂದಣಿ ಮಾಡುವವರ ಭವಿಷ್ಯ ಸುಭದ್ರವಾಗಿರುತ್ತದೆ.

60 ವರ್ಷ ತುಂಬಿದ ಮೇಲೆ ಸಿಗುತ್ತದೆ ಪಿಂಚಣಿ!

ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (NPS) ಸರ್ಕಾರವು ಸ್ವಂತ ವ್ಯಾಪಾರ ಮಾಡುವ ಜನರಿಗಾಗಿ ತಂದಿದೆ. ಇದರಲ್ಲಿ ನೋಂದಾಯಿಸಲು, ನಿಮ್ಮ ವ್ಯಾಪಾರದ ವಾರ್ಷಿಕ ವಹಿವಾಟು 1.5 ಕೋಟಿ ರೂ. ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಇದು ಸ್ವಯಂಪ್ರೇರಿತ ಯೋಜನೆಯಾಗಿದ್ದು, ಉದ್ಯಮಿ 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ ಕನಿಷ್ಠ 3,000 ಪಿಂಚಣಿ ಸಿಗಲಿದೆ.

ಇದನ್ನೂ ಓದಿ : Invest Karnataka: ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೈವಾನ್ ಕಂಪನಿಗಳಿಗೆ ನಿರಾಣಿ ಆಹ್ವಾನ

2019 ರಲ್ಲಿ ಪ್ರಾರಂಭವಾಗಿದೆ ಯೋಜನೆ

ಮೋದಿ ಸರ್ಕಾರ(Modi Government) 2019 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯಡಿ ನೋಂದಾಯಿಸುವ ವ್ಯಕ್ತಿಯು ಮರಣಹೊಂದಿದರೆ, ಫಲಾನುಭವಿಯ ಪರವಾಗಿ ಮಾಡಿದ ನಾಮಿನಿಗೆ (ಗಂಡ / ಹೆಂಡತಿ) ಅರ್ಜಿದಾರರ ಪಿಂಚಣಿಯ ಶೇ.50 ರಷ್ಟು ಕುಟುಂಬ ಪಿಂಚಣಿಯಾಗಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು Labor.gov.in ಮತ್ತು maandhan.in ಗೆ ಲಾಗಿನ್ ಮಾಡಬಹುದು.

ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹತೆ

ಈ ಯೋಜನೆಯಲ್ಲಿ ನೋಂದಾಯಿಸಿದ ಏಕೈಕ ವ್ಯಾಪಾರಿ(Businessman)ಯ ವಯಸ್ಸು 18 ರಿಂದ 40 ವರ್ಷಗಳ ನಡುವೆ ಇರಬೇಕು. ಅಲ್ಲದೆ, ವ್ಯಾಪಾರ ಮಾಡುವ ವ್ಯಕ್ತಿಯ ವಾರ್ಷಿಕ ವಹಿವಾಟು 1.5 ಕೋಟಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು.

ಬೇಕಾಗುವ ದಾಖಲೆಗಳು

NPS ದಾಖಲಾತಿಗಾಗಿ, ನೀವು ಆಧಾರ್ ಕಾರ್ಡ್(Aadhar Card) ಮತ್ತು ಉಳಿತಾಯ ಬ್ಯಾಂಕ್ ಖಾತೆ, ಜನ್ ಧನ್ ಖಾತೆ ಸಂಖ್ಯೆಯನ್ನು ಹೊಂದಿರಬೇಕು.

ಇದನ್ನೂ ಓದಿ : LIC IPO:ವಿಮಾ ಪಾಲಿಸಿಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಕಡ್ಡಾಯ! ಹೇಗೆ ಮಾಡುವುದು? ನೇರ ಲಿಂಕ್ ಇಲ್ಲಿದೆ

ಕೊಡುಗೆ

ಯೋಜನೆಯಲ್ಲಿ, ನೋಂದಣಿ ಮಾಡಿದ ವ್ಯಕ್ತಿಯ ಖಾತೆಗೆ ಕೇಂದ್ರ ಸರ್ಕಾರ(Central Government)ದಿಂದ ಕೊಡುಗೆಯನ್ನು ಸಹ ನೀಡಲಾಗುತ್ತದೆ. ಯೋಜನೆಗೆ ಸೇರುವವರು 60 ವರ್ಷ ವಯಸ್ಸಿನವರೆಗೆ ಉಳಿತಾಯ ಬ್ಯಾಂಕ್ ಖಾತೆ ಅಥವಾ ಜನ್ ಧನ್ ಖಾತೆಯಿಂದ ಸ್ವಯಂ ಡೆಬಿಟ್ ಮೂಲಕ ಕೊಡುಗೆಗಳನ್ನು ನೀಡಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News