ಹೈದರಾಬಾದ್:  ಎನ್ದಿಎ ಮೈತ್ರಿ ತ್ಯಜಿಸಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪತ್ರ ಬರೆದ ಕೆಲವೇ ಗಂಟೆಗಳ ಬಳಿಕ ನಾಯ್ಡು, ಶಾ ಪತ್ರಕ್ಕೆ ತಿರುಗೇಟು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಆಂಧ್ರ ವಿಧಾನಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ಮುಖ್ಯಸ್ಥರು ಸತ್ಯವನ್ನು ತಪ್ಪಾಗಿ ಪ್ರತಿನಿಧಿಸಲು ಪ್ರಯತ್ನಿಸುತ್ತಿದ್ದಾರೆ, ವಾಸ್ತವ ಅಂಶಗಳನ್ನು ಮರೆಮಾಚುತ್ತಿದ್ದಾರೆ. ತೆಲುಗು ಜನರ ಭಾವನೆಗಳನ್ನು ನೋಯಿಸುತ್ತಿದ್ದಾರೆ ಎಂದು ನಾಯ್ಡು ಆರೋಪಿಸಿದ್ದಾರೆ.


"ಟಿಡಿಪಿಯು ವಿಭಜನೆಗೆ ಮುಂಚಿತವಾಗಿ ಸ್ಥಳೀಯ ಶಾಸನಸಭೆ ಚುನಾವಣೆಯನ್ನು ಗೆದ್ದುಕೊಂಡಿದ್ದು, ಜನತೆಯು ಅಸುರಕ್ಷಿತ ಸ್ಥಾನದಲ್ಲಿದ್ದರು, ಆದ್ದರಿಂದ ನಾವು ರಾಜ್ಯದ ಕಲ್ಯಾಣಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಿದ್ದೆವು. ಅಮಿತ್ ಶಾ ಅವರ ಪತ್ರದಲ್ಲಿ ನಾವು ರಾಜಕೀಯ ಕಾರಣಗಳಿಂದಾಗಿ ಎನ್ಡಿಎ ತೊರೆದಿದ್ದೇವೆ ಎಂದು ಬಿಂಬಿಸಿದ್ದಾರೆ. ಆದರೆ ನಾವು ಜನರ ಆಶಯಕ್ಕೆ ಅನುಗುಣವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ" ನಾಯ್ಡು ಹೇಳಿದರು.


ಎನ್ಡಿಎ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಮೈತ್ರಿ ತ್ಯಜಿಸಿರುವ ಟಿಡಿಪಿಯ ನಿರ್ಧಾರವನ್ನು ಸಮರ್ಥಿಸಿರುವ ನಾಯ್ಡು, ಕೇಂದ್ರ ಸರ್ಕಾರದಿಂದ ಉಂಟಾದ ದ್ರೋಹದ ವಿರುದ್ದ, ಜನರ ಭಾವನೆಗಳನ್ನು ಗೌರವಿಸಲು ಮೈತ್ರಿಯಿಂದ ಹೊರಬಂದಿರುವುದಾಗಿ ಹೇಳಿದರು. ಎನ್ಡಿಎ ಆಂಧ್ರ ಪ್ರದೇಶದ ಪುನರ್ ವಿಂಗಡಣೆ ಕಾಯ್ದೆಯಲ್ಲಿನ ಬದ್ಧತೆಗಳನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ ಎಂದು ಅವರು ಇದೇ ವೇಳೆ ವಾಗ್ದಾಳಿ ನಡೆಸಿದರು.


ಕೇಂದ್ರ ಸರ್ಕಾರದಿಂದ ಪಡೆದ ಹಣವನ್ನು ಮರೆಮಾಚಲು ಅವರು ಹುಡುಕುತ್ತಿದ್ದಾರೆ ಎಂಬ ಬಿಜೆಪಿ ಅಧ್ಯಕ್ಷರ ಹೇಳಿಕೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ ನಾಯ್ಡು, "ನೀವು ಆ ಅಭ್ಯಾಸ ಹೊಂದಿರಬಹುದು, ಆದರೆ ನನಗೆ ಅಂತಹ ಅಭ್ಯಾಸ ಇಲ್ಲ" ಎಂದು ಹಿಟ್ ಮಾಡಿದ್ದಾರೆ.