ನವದೆಹಲಿ: ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ ನಡ್ಡಾ ಪಶ್ಚಿಮ ಬಂಗಾಳದಲ್ಲಿ ಜಂಗಲ್ ರಾಜ್ ಅಸ್ತಿತ್ವದಲ್ಲಿದೆ ಎಂದು ಹೇಳಿದ್ದಕ್ಕೆ ಪ್ರತ್ಯುತ್ತರ ನೀಡಿರುವ ಟಿಎಂಸಿ, ಅವರು ಜಂಗಲ್ ನಿಂದ ಬಂದಿರುವುದರಿಂದ ಎಲ್ಲ ಕಡೆ ಬರಿ ಜಂಗಲ್ ನ್ನೇ ಕಾಣುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.


COMMERCIAL BREAK
SCROLL TO CONTINUE READING

ಬಿಜೆಪಿ ಸರ್ಕಾರದ ದೋಷಯುಕ್ತ ನೀತಿಗಳು ದೇಶಾದ್ಯಂತ ಆರ್ಥಿಕತೆ ದುರ್ಬಲಗೊಳ್ಳಲು ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಗಿದ್ದರಿಂದ ನಡ್ಡಾ ಕೇಂದ್ರ ಸರ್ಕಾರದಲ್ಲಿ ಜಂಗಲ್ ರಾಜ್ ಅನ್ನು ಏಕೆ ಕಾಣಲಿಲ್ಲ ಎಂದು ಹಿರಿಯ ಟಿಎಂಸಿ ಮುಖಂಡ ಫಿರ್ಹಾದ್ ಹಕೀಮ್ ವ್ಯಂಗವಾಡಿದರು.


'ಅವರು (ನಡ್ಡಾ) ಸ್ವತಃ ಕಾಡಿನಿಂದ ಬಂದಿದ್ದಾರೆ ಮತ್ತು ಅದಕ್ಕಾಗಿಯೇ ಅವರು ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ದಾಖಲೆ ನಿರ್ಮಿಸಿರುವ ಬಂಗಾಳ ರಾಜ್ಯದಲ್ಲಿಯೂ ಸಹ ಎಲ್ಲೆಡೆ ಜಂಗಲ್ ರಾಜ್ ಅನ್ನು .ಕಾಣುತ್ತಾರೆ. ಇದು ದುರದೃಷ್ಟಕರ ಎಂದು ಸಚಿವ ಹಕೀಮ್ ತಿರುಗೇಟು ನೀಡಿದರು.


ಬಂಗಾಳದಲ್ಲಿನ ಜಂಗಲ್ ರಾಜ್ ಮತ್ತು ಭಯೋತ್ಪಾದನೆಯ ಆಳ್ವಿಕೆಗೆ ಬ್ಯಾನರ್ಜಿ ಕಾರಣ ಎಂದು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದರು.