Congress ಚೀನಾಗೆ 43000 ಕಿ.ಮೀ ಭೂಭಾಗವನ್ನು ಬಿಟ್ಟುಕೊಟ್ಟಿದೆ: ಜೆ.ಪಿ ನಡ್ದಾ
ಈ ಕುರಿತು ಹೇಳಿಕೆ ನೀಡಿರುವ ನಡ್ದಾ, `ಕಾಂಗ್ರೆಸ್ ಸರ್ಜಿಕಲ್ ಹಾಗೂ ವಾಯುದಾಳಿಯ ಮೇಲೂ ಕೂಡ ಇದೆ ರೀತಿ ಮಾಡಿತ್ತು. ಭಾರತೀಯ ಸೇನೆಯನ್ನು ಗೌರವಿಸಿ, ಇನ್ನೂ ಟೈಮ್ ಮಿಂಚಿಲ್ಲ` ಎಂದು ಹೇಳಿದ್ದಾರೆ.
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ದಾ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, "ಕಾಂಗ್ರೆಸ್ ಸರ್ಜಿಕಲ್ ಹಾಗೂ ವಾಯುದಾಳಿಯ ಮೇಲೂ ಕೂಡ ಇದೆ ರೀತಿ ಮಾಡಿತ್ತು. ಭಾರತೀಯ ಸೇನೆಯನ್ನು ಗೌರವಿಸಿ, ಇನ್ನೂ ಟೈಮ್ ಮಿಂಚಿಲ್ಲ" ಎಂದು ಹೇಳಿದ್ದಾರೆ.
"130 ಕೋಟಿ ಭಾರತೀಯರಿಗೆ ಪ್ರಧಾನಿ ಮೋದಿ ಅವರ ಮೇಲೆ ವಿಶ್ವಾಸವಿದೆ" ಎಂದಿರುವ ನಡ್ದಾ. "201೦ ರಿಂದ 2013ರ ಅವಧಿಯಲ್ಲಿ LAC ಬಳಿ ಒಟ್ಟು 600 ಬಾರಿ ಚೀನಾ ಒಳನುಸುಳುವಿಕೆ ನಡೆಸಿದ್ದು, ಕಾಂಗ್ರೆಸ್ ಚೀನಾ ಎದುರು ಸರೆಂಡರ್ ಮಾಡಿತ್ತು" ಎಂದು ಅವರು ಆರೋಪಿಸಿದ್ದಾರೆ.
"ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆ ಕೇವಲ ಒಂದು ಶಾಬ್ದಿಕ ಆಟವಾಗಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ಹಿರಿಯ ಮುಖಂಡರ ವರ್ತನೆಯ ಕಾರಣ ಯಾವುದೇ ಭಾರತೀಯ ಅವರ ಯಾವುದೇ ಹೇಳಿಕೆಯ ಮೇಲೆ ಭರವಸೆ ಹೊಂದಿಲ್ಲ. ನಮ್ಮ ಭದ್ರತಾಪಡೆಗಳ ಮನೋಬಲ ಕುಗ್ಗಿಸಲು ಕಾಂಗ್ರೆಸ್ ನಿರಂತರವಾಗಿ ಕೆಲಸ ಮಾಡುತ್ತಿದೆ. ಇನ್ನೊಂದೆಡೆ ಇಡೀ ಭಾರತ ದೇಶ ಪ್ರಧಾನಿ ಮೋದಿ ಅವರ ಮೇಲೆ ಸಂಪೂರ್ಣ ಭರವಸೆ ಹೊಂದಿದೆ" ಎಂದು ನಡ್ದಾ ಹೇಳಿದ್ದಾರೆ.