ಬೆಂಗಳೂರು: ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ' ಬಿಜೆಪಿಯ ಬೆಂಬಲವನ್ನು ಪಡೆಯುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ನಂತರ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಿತ್ರವನ್ನು ಹೊಗಳಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ‘ಈ ಚಿತ್ರ ‘ವಿಷಕಾರಿ ಭಯೋತ್ಪಾದನೆ’ಯನ್ನು ಬಯಲಿಗೆಳೆಯುತ್ತದೆ’ ಎಂದು ಹೇಳಿದ್ದಾರೆ. ಚುನಾವಣಾ ಪ್ರಚಾರದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು ಗರುಡಾ ಮಾಲ್‌ನಲ್ಲಿ ಭಾನುವಾರ ನಡೆದ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು.  


COMMERCIAL BREAK
SCROLL TO CONTINUE READING

'ದಿ ಕೇರಳ ಸ್ಟೋರಿ' ಚಿತ್ರವನ್ನು ವೀಕ್ಷಿಸಿದೆ. ಮದ್ದುಗುಂಡುಗಳಿಲ್ಲದ ಹೊಸ ರೀತಿಯ ಭಯೋತ್ಪಾದನೆ ಇದೆ. ಆ ವಿಷಕಾರಿ ಭಯೋತ್ಪಾದನೆಯನ್ನು 'ದಿ ಕೇರಳ ಸ್ಟೋರಿ' ಬಯಲು ಮಾಡಿದೆ. ಈ ರೀತಿಯ ಭಯೋತ್ಪಾದನೆ ಯಾವುದೇ ರಾಜ್ಯ ಅಥವಾ ಧರ್ಮಕ್ಕೆ ಸಂಬಂಧಿಸಿಲ್ಲ’ ಎಂದು ನಡ್ಡಾ ಹೇಳಿದ್ದಾರೆ.


ಇದನ್ನೂ ಓದಿ: ಸುಂದರ್ ಪಿಚೈ, ಮಸ್ಕ್ ಸೇರಿ ಟಾಪ್‌ ಕಂಪನಿಗಳ ಸಿಇಒ ಸಂಬಳ ತಿಳಿದರೆ ಶಾಕ್ ಆಗುತ್ತೀರಿ..!


‘ದಿ ಕೇರಳ ಸ್ಟೋರಿ’ ಹೊಗಳಿದ ಪ್ರಧಾನಿ ಮೋದಿ  


ಇದಕ್ಕೂ ಮುನ್ನ ಪ್ರಧಾನಿ ಕೂಡ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಹೊಗಳಿದ್ದಾರೆ. ಕರ್ನಾಟಕದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ದಿ ಕೇರಳ ಸ್ಟೋರಿ’ ಸಿನಿಮಾ ಭಯೋತ್ಪಾದಕರ ಕಥಾವಸ್ತುವನ್ನು ಆಧರಿಸಿದೆ. ಇದು ಭಯೋತ್ಪಾದನೆಯ ಕೊಳಕು ಸತ್ಯವನ್ನು ತೋರಿಸುತ್ತದೆ ಮತ್ತು ಭಯೋತ್ಪಾದಕರ ವಿಧ್ವಂಸಕ ಕೃತ್ಯಗಳನ್ನು ಬಹಿರಂಗಪಡಿಸುತ್ತದೆ ಎಂದು ಹೇಳೀದ್ದಾರೆ.


ಈ ಚಿತ್ರವನ್ನು ಶ್ಲಾಘಿಸುವುದರ ಜೊತೆಗೆ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಯೋತ್ಪಾದನೆ ಕುರಿತ ಸಿನಿಮಾ ಪ್ರದರ್ಶನವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಮತ್ತು ಭಯೋತ್ಪಾದನೆಯೊಂದಿಗೆ ನಿಂತಿದೆ. ಕಾಂಗ್ರೆಸ್ ಮತಬ್ಯಾಂಕ್‌ಗಾಗಿ ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿದೆ’ ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ: Boat Tragedy in Kerala: ಕೇರಳದಲ್ಲಿ ದೋಣಿ ಮುಳುಗಡೆ, ಮಕ್ಕಳು ಸೇರಿ 22 ಮಂದಿ ಸಾವು!


ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತ


ಏತನ್ಮಧ್ಯೆ ‘ದಿ ಕೇರಳ ಸ್ಟೋರಿ’ ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ, 'ದಿ ಕೇರಳ ಸ್ಟೋರಿ' ಲವ್ ಜಿಹಾದ್ ಮತ್ತು ಧಾರ್ಮಿಕ ಮತಾಂತರದ ಕುರಿತಾಗಿದೆ. ಇದು ಭಯೋತ್ಪಾದನೆಯ ಪಿತೂರಿಯನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.


ಚಿತ್ರವನ್ನು ಟೀಕಿಸಿದ ಪಿಣರಾಯಿ ವಿಜಯನ್


ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ‘ದಿ ಕೇರಳ ಸ್ಟೋರಿ’ಯನ್ನು ಟೀಕಿಸಿದ್ದಾರೆ. ಕೋಮು ಧ್ರುವೀಕರಣ ಮತ್ತು ಕೇರಳದ ವಿರುದ್ಧ ದ್ವೇಷವನ್ನು ಹರಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಈ ಚಿತ್ರ ನಿರ್ಮಿಸಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.