ನವದೆಹಲಿ: ಕೇಂದ್ರ ಸರ್ಕಾರವು ಆಂಧ್ರಪ್ರದೇಶವನ್ನು ಮುಗಿಸುವ ಸಂಚು ರೂಪಿಸಿದೆ,  ಒಂದುವೇಳೆ ರಾಜ್ಯದ ನಾಯಕರ ಮೇಲೆ ತೆರಿಗೆ ದಾಳಿ ಮಾಡುವುದನ್ನು ನಿಲ್ಲಿಸದಿದ್ದಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ" ಎಂದು ಆಂದ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಎಚ್ಚರಿಸಿದರು.


COMMERCIAL BREAK
SCROLL TO CONTINUE READING

ಅಮರಾವತಿಯಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚಂದ್ರಬಾಬು ನಾಯ್ಡು ಮಾತನಾಡುತ್ತ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. "ನನ್ನ ವಿರುದ್ದ ಎನ್ಡಿಎ ಸರ್ಕಾರದ್ದು ಏನಿದೆ? ವೈಯಕ್ತಿಕ ಪ್ರತಿಕಾರ... ಏಕೆಂದರೆ ನಾನು ಅವರಿಗೆ ಶರಣಾಗಲಿಲ್ಲ..ಇದಕ್ಕೆಲ್ಲ ಅವರು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ನಾಯ್ಡು ಎಚ್ಚರಿಸಿದರು. 


ಇತ್ತೀಚೆಗಿನ ತಿರುಪತಿ ದೇವಸ್ತಾನದ ವಿವಾದವನ್ನು ಪ್ರಸ್ತಾಪಿಸಿದ ನಾಯ್ಡು "ಅವರ ಪ್ರಯತ್ನ ನಮ್ಮ ಇಮೇಜ್ ನ್ನು ಹಾಳುಮಾಡುವುದಾಗಿದೆ.ಆ ಮೂಲಕ ಸಾರ್ವಜನಿಕರ ಭಾವನೆಗಳನ್ನು ಕೆರಳಿಸಿ ಇಡೀ ಹಿಂದುಗಳು ತಮ್ಮ ಸರ್ಕಾರಕ್ಕೆ ತಿರುಗಿ ಬಿಳುವುದಲ್ಲವೇ? ಅವರ ಪ್ರಯತ್ನ ಎಂದು ನಾಯ್ಡು ಪ್ರಶ್ನಿಸಿದರು.


ತಿರುಪತಿ ದೇವಸ್ತಾನದಲ್ಲಿ ಆಭರಣಗಳು ನಾಪತ್ತೆಯಾಗಿರುವ ವಿಚಾರವಾಗಿ ಇತ್ತೀಚಿಗೆ ಬಿಜೆಪಿ ಮತ್ತು ಚಂದ್ರಬಾಬು ನಾಯ್ಡು ನಡುವೆ ಆರೋಪ  ಪ್ರತ್ಯಾರೋಪಗಳು ಉಂಟಾಗಿದ್ದವು.ಇದಕ್ಕೆ ಪ್ರತಿಕ್ರಿಯಿಸಿದ ನಾಯ್ಡು ಈ ಪೂರ್ಣ ಎಪಿಸೋಡ್ ಎಲ್ಲವು ಕೂಡ ತಿರುಚಿರುವಂತದ್ದು ಎಂದು ತಿಳಿಸಿದರು.


"