Breaking: ರೈಲಿನ ಶೌಚಾಲಯದಲ್ಲಿ ಬಾಂಬ್ ಸ್ಫೋಟ!
ಬರ್ರಾಜ್ಪುರ ನಿಲ್ದಾಣದ ಸಮೀಪದ ಬುಧವಾರ ಸಂಜೆ 7.10ರ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ನವದೆಹಲಿ: ಕಾನ್ಪುರ್-ಭಿವಾನಿ ಕಾಳಿಂದಿ ಎಕ್ಸ್ ಪ್ರೆಸ್ ರೈಲಿನ ಶೌಚಾಲಯದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಬರ್ರಾಜ್ಪುರ ನಿಲ್ದಾಣದ ಸಮೀಪದ ಬುಧವಾರ ಸಂಜೆ 7.10ರ ಸಮಯದಲ್ಲಿ ರೈಲು ಸಂಖ್ಯೆ 11449 ಕಾನ್ಪುರ್-ಭಿವಾನಿ ಕಾಳಿಂದಿ ಎಕ್ಸ್ ಪ್ರೆಸ್ ರೈಲಿನ ಎರಡನೇ ಕೋಚ್ನಲ್ಲಿ ಶೌಚಾಲಯದಲ್ಲಿ ಸ್ಫೋಟ ಸಂಭವಿಸಿದೆ. ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ಇಲಾಖೆ, ಬಾಂಬ್ ಕಡಿಮೆ ತೀವ್ರತೆಯದ್ದಾಗಿದ್ದರೂ ಸಹ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.