Sonu Sood : ಕಲಿಯುಗ ಕರ್ಣ ಮಾಡಿದ ತಪ್ಪಾದರೂ ಏನು? ಬಿಎಂಸಿ ಪೊಲೀಸ್ ಕೇಸ್ ಹಾಕಿದ್ದೇಕೆ..?
ಬೃಹತ್ ಮುಂಬಯಿ ನಗರಪಾಲಿಕೆ – ಬಿಎಂಸಿ ಸೋನು ಸೂದ್ ವಿರುದ್ದ ಪೊಲೀಸ್ ದೂರು ದಾಖಲಿಸಿದೆ.
ಮುಂಬಯಿ : ಜನಪ್ರಿಯ ಬಾಲಿವುಡ್ ನಟ ಕಲಿಯುಗ ಕರ್ಣ ಸೋನು ಸೂದ್ (Sonu Sood)ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೃಹತ್ ಮುಂಬಯಿ ನಗರಪಾಲಿಕೆ – ಬಿಎಂಸಿ ಸೋನು ಸೂದ್ ವಿರುದ್ದ ಪೊಲೀಸ್ ದೂರು ದಾಖಲಿಸಿದೆ.
ಅಷ್ಟಕ್ಕೂ ಸೋನು ಸೂದ್ ಮಾಡಿದ ತಪ್ಪಾದರೂ ಏನು..?
6 ಅಂತಸ್ತಿನ ಕಟ್ಟಡವನ್ನು ಸೋನು ಸೂದ್ (Sonu Sood) ಹೊಟೇಲ್ ಆಗಿ ಪರಿವರ್ತಿಸಿದ್ದಾರೆ. ಹೀಗೆ ಮಾಡುವ ಮೊದಲು ಸೋನು ಸೂದ್ ಅಗತ್ಯ ಇರುವ ಯಾವುದೇ ಅನುಮತಿ ಪಡೆದುಕೊಂಡಿಲ್ಲ ಎಂಬುದು ಬಿಎಂಸಿ (BMC) ಹೊರಿಸಿರುವ ಆರೋಪ. ಸೋನು ಸೂದ್ ಅನುಮತಿ ಇಲ್ಲದೆ ಕಟ್ಟಡವನ್ನು ಬದಲಾಯಿಸಿದ್ದಾರೆ. ವಸತಿ ಪ್ರದೇಶದಲ್ಲಿರುವ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಅದು ತಪ್ಪು ಅವರ ವಿರುದ್ಧ ಮಹಾರಾಷ್ಟ್ರ ಟೌನ್ ಪ್ಲಾನಿಂಗ್ (MaharastraTOwn Planning) ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂಬುದು ಬಿಎಂಸಿ ಆಗ್ರಹ. ಈ ಸಂಬಂಧ ಬಿಎಂಸಿ ನೀಡಿರುವ ನೊಟೀಸನ್ನು ಸೋನು ಸೂದ್ ಕಡೆಗಣಿಸಿದ್ದಾರೆ. ನೊಟೀಸ್ ಸಿಕ್ಕ ಬಳಿಕವೂ ಅನಧಿಕೃತ ನಿರ್ಮಾಣವನ್ನು ಮುಂದುವರಿಸಿದ್ದಾರೆ. ಇದು ದಂಡನೀಯ ಅಪರಾಧ ಎಂದು ಬಿಎಂಸಿ ದೂರಿನಲ್ಲಿ ಹೇಳಿದೆ.
ಇದನ್ನೂ ಓದಿ : ನಾರ್ವೆ ಬಾಲಿವುಡ್ ಫಿಲ್ಮ್ ಫೆಸ್ಟಿವಲ್ ನಲ್ಲಿ Sonu Sood ಅವರಿಗೆ Humanitarian Award 2020 ಗೌರವ
ಕಲಿಯುಗ ಕರ್ಣ ಹೇಳಿದ್ದೇನು..?
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋನು ಸೂದ್, ಈ ಕಟ್ಟಡ ನಿರ್ಮಾಣ ಕುರಿತಂತೆ ಯೂಸರ್ ಚೇಂಜ್ ಗಾಗಿ ಬಿಎಂಸಿಯಿಂದ ಅನುಮತಿ ಪಡೆದುಕೊಂಡಿದ್ದೇನೆ. ಮಹಾರಾಷ್ಟ್ರ ಕರಾವಳಿ ವಲಯ ನಿರ್ಮಾಣ ಪ್ರಾಧಿಕಾರದ ಅನುಮತಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಅರ್ಜಿ ದಾಖಲಿಸಿದ್ದ ಸೋನು ಸೂದ್..?
ಅಧಿಕಾರಿಗಳ ಮಾಹಿತಿ ಪ್ರಕಾರ ಬಿಎಂಸಿ ನೊಟೀಸ್ ವಿರುದ್ಧ ಸೋನು ಸೂದ್ ಮುಂಬಯಿ ಸಿವಿಲ್ ನ್ಯಾಯಾಲಯದಲ್ಲಿ (Mumbai Civil Court) ಅರ್ಜಿ ದಾಖಲಿಸಿದ್ದಾರೆ. ಆದರೆ, ನ್ಯಾಯಾಲಯ ಹೈಕೋರ್ಟಿನಲ್ಲಿ (High court) ಈ ಅರ್ಜಿ ದಾಖಲಿಸಲು ಸಲಹೆ ನೀಡಿತ್ತು. ಜೊತೆಗೆ ಅರ್ಜಿ ದಾಖಲಿಸಲು 3 ತಿಂಗಳ ಕಾಲಾವಕಾಶ ನೀಡಿತ್ತು. ಈ ಮೂರು ತಿಂಗಳ ಕಾಲಾವಧಿ ಈಗಾಗಲೇ ಮುಗಿದು ಹೋಗಿದೆ. ಹಾಗಾಗಿ, ಬಿಎಂಸಿ ದೂರು ದಾಖಲಿಸಿದೆ.
ಇದನ್ನೂ ಓದಿ : ಎಲೆಕ್ಷನ್ ಗೆ ಸ್ಪರ್ಧಿಸಲು ಟಿಕೆಟ್ ಕೊಡಿಸಿ ಎಂದ ಬಳಕೆದಾರ, Sonu Sood ಉತ್ತರ ಕೇಳಿ ಫಿದಾ ಆದ ಅಭಿಮಾನಿಗಳು
ಸೋನು ಸೂದ್ ಗೆ ದೇಗುಲ ನಿರ್ಮಿಸಿರುವ ಅಭಿಮಾನಿಗಳು :
ನಿಮಗೆ ಗೊತ್ತಿರಲಿ.. ಸೋನು ಸೂದ್ ಈಗ ಅಭಿಮಾನಿಗಳ ಪಾಲಿಗೆ ದೇವರು. ಲಾಕ್ ಡೌನ್ (Lock Down) ಸಮಯದಲ್ಲಿ ಅವರು ಕೈಗೊಂಡ ಮಾನವೀಯ ಕಾರ್ಯಗಳಿಗಾಗಿ ಕೋಟ್ಯಂತರ ಅಭಿಮಾನಿಗಳ ಪ್ರಶಂಸೆ ಗೆ ಪಾತ್ರರಾಗಿದ್ದಾರೆ. ಇಡೀ ಭಾರತವೇ ಅವರ ಕಾರ್ಯವನ್ನು ಕೊಂಡಾಡಿದೆ. ಜನ ಅವರನ್ನು ಎಷ್ಟು ಪ್ರೀತಿಸುತ್ತಿದ್ದಾರೆ ಎಂದರೆ ತೆಲಂಗಾಣದಲ್ಲಿ ಅವರಿಗಾಗಿ ಒಂದು ದೇವಾಲಯವೇ ನಿರ್ಮಾಣವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.