Bob-Cut Sengamalam: ತಮಿಳುನಾಡಿನ ಆನೆಯೊಂದು ತನ್ನ ಡಿಫರೆಂಟ್‌ ಹೇರ್‌ ಸ್ಟೈಲ್‌ʼನಿಂದಲೇ ಸುದ್ದಿಯಾಗುತ್ತಿರುವುದು ನಿಮಗೆ ತಿಳಿದಿದೆಯೇ? ಈ ಆನೆಯನ್ನು ವಿಶ್ವದ ಅತ್ಯಂತ ಸುಂದರ ಆನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ರಾಹುಲ್‌ ಗಾಂಧಿ ಜೊತೆ ಡೇಟಿಂಗ್‌ ಮಾಡುವ ಮನಸ್ಸಾಗಿದೆ: ನಟಿ ಕರೀನಾ ಕಪೂರ್‌ ಸೆನ್ಸೇಷನಲ್‌ ಹೇಳಿಕೆ


ಈ ಆನೆ ಹೆಸರು ಬಾಬ್‌ ಕಟ್‌ ಸೆಂಗಮಲಂ. ಮನ್ನಾರ್ಗುಡಿ ಪಟ್ಟಣದ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿರುವ ಈ ಆನೆಯ ಬಾಬ್ ಕಟ್ ಹೇರ್‌ ಸ್ಟೈಲ್ʼಗೆ ದೇಶಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ. "ಬಾಬ್-ಕಟ್ ಸೆಂಗಮಲಂ" ಎಂದು ಕರೆಯಲ್ಪಡುವ ಆನೆಯ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ವೈರಲ್‌ ಆಗುತ್ತಲೇ ಇರುತ್ತವೆ.


ಮನ್ನಾಯ್ ಆನ್‌ಲೈನ್‌ ಪ್ರಕಾರ, 2003 ರಲ್ಲಿ ಕೇರಳದಿಂದ ರಾಜಗೋಪಾಲಸ್ವಾಮಿ ದೇವಸ್ಥಾನಕ್ಕೆ ಸೆಂಗಮಲಮ್ ಆನೆಯನ್ನು ಕರೆತರಲಾಯಿತು. ಇನ್ನು ಈ ಆನೆಯ ಹೇರ್‌ ಸ್ಟೈಲ್‌ ನೋಡಿಕೊಳ್ಳುವುದು ಮಾವುತ ಎಸ್ ರಾಜಗೋಪಾಲ್. ಈ ಹೇರ್‌ ಸ್ಟೈಲ್‌ʼಗೆ ಸಾಕಷ್ಟು ನಿರ್ವಹಣೆ ಮತ್ತು ಕಾಳಜಿಯ ಅಗತ್ಯವಿದೆ ಎಂದು ಮಾವುತ ಹೇಳುತ್ತರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


ಆಗ ಆಫರ್ ಬಂದಾಗ ಬೇಡ ಅಂದ್ರು... ಈಗ ಅದೇ ನಿರ್ದೇಶಕ ಅವಕಾಶ ನೀಡಲಿ ಎಂದು ಕಾಯುತ್ತಿದ್ದಾನೆ ಈ ಹೀರೋ


ಮಾವುತ ರಾಜಗೋಪಾಲ್ ಹೇಳುವಂತೆ, "ಸೆಂಗಮಲಂ ನನ್ನ ಮಗುವಿನಂತೆ. ಆಕೆ ಇತರ ಆನೆಗಳಿಗಿಂತ ವಿಶೇಷವಾಗಿ ಕಾಣಬೇಕೆಂಬುದು ನನ್ನ ಆಸೆ. ಒಂದೊಮ್ಮೆ ನಾನು ಇಂಟರ್ನೆಟ್‌ʼನಲ್ಲಿ ವಿಡಿಯೋ ನೋಡುವಾಗ ಬಾಬ್‌ ಕಟ್‌ ಮಾಡಿರುವ ಆನೆಯನ್ನು ನೋಡಿದೆ. ಅದಾದ ನಂತರ ಸೆಂಗಮಲಂಗೆ ಕೂಡ ಕೂದಲು ಬೆಳೆಸಿ, ಆ ರೀತಿ ಹೇರ್‌ ಕಟ್‌ ಮಾಡಿಸಿದೆ"  2018 ರಲ್ಲಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ