ನವದೆಹಲಿ: ಬೊಫೋರ್ಸ್ ಪ್ರಕರಣದಲ್ಲಿ ಹಿಂದೂಜಾ ಸಹೋದರರಿಗೆ ಕ್ಲೀನ್ ಚಿಟ್ ನೀಡಿದ್ದ 2005 ರ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.


COMMERCIAL BREAK
SCROLL TO CONTINUE READING

ಸುಪ್ರಿಂಕೋರ್ಟ್ ಬಳಿ ಅರ್ಜಿಯು ತಡವಾಗಿ ಬಂದಿವೆ ಎಂದು ಪ್ರಸ್ತಾಪಿಸಿ ಸಿಬಿಐ ಮನವಿಯನ್ನು ತಿರಸ್ಕರಿಸಿದೆ. ಲಂಡನ್ ಮೂಲದ ಬಿಲಿಯನೇರ್ ಹಿಂದೂಜಾ ಸಹೋದರರಿಗೆ 2005 ರ ಮೇ 31 ರಂದು ದೆಹಲಿ ಹೈಕೋರ್ಟ್ ಬೊಫೋರ್ಸ್ ಹಗರಣದಲ್ಲಿ ಕ್ಲೀನ್ ಚಿಟ್ ನೀಡಿತ್ತು.


ಶ್ರೀಚಂದ್ ಹಿಂದೂಜಾ ಮತ್ತು ಅವರ ಸಹೋದರರಾದ ಗೋಪಿಚಂದ್ ಮತ್ತು ಪ್ರಕಾಶ್ ಅವರು  8.3 ದಶಲಕ್ಷ $ ನಷ್ಟು ಲಂಚವನ್ನು ಸ್ವೀಡನ್ ಮೂಲದ ಎಬಿ ಬೋಫೋರ್ಸ್ ಕಂಪನಿಯಿಂದ  ಪಡೆದಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ 2005 ರಲ್ಲಿ  ಹಿಂದೂಜಾ ಸಹೋದರಿಗೆ ಕ್ಲೀನ್ ಚಿಟ್ ನೀಡಿತ್ತು. 


ಈಗ ಈ ತೀರ್ಪನ್ನು ಪರ್ಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರ ನೇತೃತ್ವದ ಪೀಠ ಸಿಬಿಐ ಮನವಿ ಸಲ್ಲಿಸುವಲ್ಲಿ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ವಜಾಗೊಳಿಸಿದೆ. ಭಾರತ 1986 ರಲ್ಲಿ ಸ್ವೀಡನ್ ಮೂಲದ ಎಬಿ ಬೊಫೋರ್ಸ್ ಕಂಪನಿ ಜೊತೆ  ಬಂದೂಕು ಖರೀದಿಗಾಗಿ ಒಪ್ಪಂದ ಮಾಡಿಕೊಂಡಿತ್ತು.