Richa Chadha Controversy: ಬಾಲಿವುಡ್ ನಟಿ ರಿಚಾ ಚಡ್ಡಾ 2020ರ ಗಾಲ್ವಾನ್ ಘರ್ಷಣೆಯ ಕುರಿತು ಟ್ವೀಟ್ ಮಾಡಿದ್ದು, ಆಕೆಯನ್ನು ಪೇಚಿಗೆ ಸಿಲುಕುವಂತೆ ಮಾಡಿದೆ. ಗಾಲ್ವಾನ್ ಘರ್ಷಣೆಯಲ್ಲಿ ಹಲವಾರು ಭಾರತೀಯ ಸೇನೆಯ ಸೈನಿಕರು ಹುತಾತ್ಮರಾಗಿದ್ದರು. ಭಾರತೀಯ ಸೇನೆ ಮತ್ತು ಗಾಲ್ವಾನ್ ಕಣಿವೆಯ ಘಟನೆಯಲ್ಲಿ ಹುತಾತ್ಮರನ್ನು 'ಅಪಹಾಸ್ಯ' ಮಾಡಿದ ನಟಿಗೆ ತೀವ್ರ ಹಿನ್ನಡೆಯಾಗಿದೆ. ಈ ಬಳಿಕ ನಟಿ ಪೋಸ್ಟ್ ಅಳಿಸಿದ್ದರೂ ಸಹ ಆಕೆಯನ್ನು ನೆಟ್ಟಿಗರು, ಟ್ರೋಲಿಗರು ಬೆನ್ನುಬಿಡುತ್ತಿಲ್ಲ.


COMMERCIAL BREAK
SCROLL TO CONTINUE READING

ಅಷ್ಟೇ ಅಲ್ಲದೆ, ಆಕೆಯ ಮುಂಬರುವ ಚಿತ್ರ 'ಫುಕ್ರೆ 3' ಅನ್ನು ಬಹಿಷ್ಕರಿಸುವಂತೆ ನೆಟಿಜನ್‌ಗಳು ಒತ್ತಾಯಿಸಲು ಪ್ರಾರಂಭಿಸಿದ್ದಾರೆ. ‘#BoycottFukrey3’ ಟ್ರೆಂಡಿಂಗ್ ಈಗಾಗಲೇ ಟ್ವಿಟರ್‌ನಲ್ಲಿ ಆರಂಭವಾಗಿದೆ.


ಇದನ್ನೂ ಓದಿ:ಕಾಂಗ್ರೆಸ್ ಗೆ ಮತ್ತೆ ವಾಪಸ್ ಆಗ್ತಾರಾ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ?


ರಿಚಾ ಮಾಡಿದ್ದ ಟ್ವೀಟ್‌ನಲ್ಲಿ, "ಗಾಲ್ವಾನ್ ಹಾಯ್ ಹೇಳುತ್ತದೆ" ಎಂದು ಬರೆಯಲಾಗಿತ್ತು. ಈ ರೀತಿ ಟ್ವೀಟ್ ಮಾಡುವ ಮೂಲಕ ಭಾರತ ಮತ್ತು ಚೀನಾ ನಡುವಿನ 2020 ಘರ್ಷಣೆಯ ಬಗ್ಗೆ ಮಾತನಾಡಿದ್ದು, ಅವಮಾನಿಸಿದ್ದಾರೆ ಎಂದು ನೆಟಿಜನ್‌ಗಳು ದೂಷಿಸಲು ಪ್ರಾರಂಭಿಸಿದ್ದಾರೆ.


“ಪಾಕಿಸ್ತಾನದಿಂದ ಪಿಒಕೆಯನ್ನು ಹಿಂಪಡೆಯಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ನಾವು ಸರ್ಕಾರದ ಆದೇಶಗಳಿಗಾಗಿ ಕಾಯುತ್ತಿದ್ದೇವೆ. ನಾವು ಕಾರ್ಯಾಚರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುತ್ತೇವೆ. ಅದಕ್ಕೂ ಮೊದಲು ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿದರೆ, ಉತ್ತರವು ವಿಭಿನ್ನವಾಗಿರುತ್ತದೆ, ಅವರು ಊಹಿಸಲೂ ಸಾಧ್ಯವಿಲ್ಲ" ಎಂದು ಭಾರತೀಯ ಸೇನೆಯ ನಾರ್ಥ್ ಕಮಾಂಡ್ ನ ಕಮಾಂಡಿಂಗ್-ಇನ್-ಚೀಫ್ ಹೇಳಿಕೆ ನೀಡಿದ್ದರು. ಇದನ್ನು ಬಾಬಾ ಬನಾರಸ್ ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಗೆ ರಿಚಾ “ಗಾಲ್ವಾನ್ ಹಾಯ್ ಎಂದು ಹೇಳುತ್ತದೆ” ಎಂದು ರಿಪೋಸ್ಟ್ ಮಾಡಿದ್ದರು.


ವಿವಾಹಿತ ಮಹಿಳೆ ಅನೈತಿಕ ಸಂಬಂಧದ ನಂತರ ಅತ್ಯಾಚಾರ ಎಂದು ದೂರು ದಾಖಲಿಸಿದ್ದಕ್ಕೆ ಕೋರ್ಟ್ ಹೇಳಿದ್ದೇನು?


"ಒಬ್ಬ ಯೋಧ ಹುತಾತ್ಮರಾದಾಗ ಅಥವಾ ಗಾಯಗೊಂಡಾಗ ಅದು ಅವರ ಇಡೀ ಕುಟುಂಬದ ಪರಿಣಾಮ ಬೀರುತ್ತದೆ. ರಾಷ್ಟ್ರವನ್ನು ಉಳಿಸುವ ಸಮಯದಲ್ಲಿ ಹೇಗೆ ಭಾವಿಸುತ್ತದೆ ಎಂದು ನನಗೆ ವೈಯಕ್ತಿಕವಾಗಿ ತಿಳಿದಿದೆ. ಇದು ನನಗೆ ಭಾವನಾತ್ಮಕ ವಿಷಯವಾಗಿದೆ" ಎಂದು ಹೇಳಿಕೆ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.