ನವದೆಹಲಿ: ಇದು ಡಿಜಿಟಲ್ ಯುಗ. ಮೊದಲು ಮಾರುಕಟ್ಟೆಗೆ ಹೋಗಿ ಕರೀದಿಸುತ್ತಿದ್ದ ವಸ್ತುಗಳನ್ನು ಸಹ ಆನ್ ಲೈನಿನಲ್ಲಿ ಖರೀದಿಸುವ ಟ್ರೆಂಡ್ ಈಗ ಪ್ರಾರಂಭವಾಗಿದೆ. ಆದರೆ ಎಚ್ಚರ! ನೀವು ಆನ್ ಲೈನ್ ವೆಬ್ಸೈಟಿನಲ್ಲಿ ಖರೀದಿಸಿದ ವಸ್ತು ಒಂದಾದರೆ, ನಿಮ್ಮ ಮನೆ ತಲುಪುವ ವಸ್ತು ಬೇರೆಯೇ ಆಗಿರುತ್ತದೆ. ಇತ್ತೀಚಿಗೆ ಇಂತಹದ್ದೇ ಒಂದು ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ ಆನ್ ಲೈನ್ ಮೂಲಕ 55,000 ಬೆಲೆಯ iPhone 8 ಪೋನನ್ನು ಬುಕ್ ಮಾಡಿದ್ದರು. ಅವರ ಮನೆಗೆ ಬಂದದ್ದು 50 ರೂಪಾಯಿಯ ಸೋಪ್ ಬಾಕ್ಸ್. ಇದೀಗ ಆನ್ಲೈನ್ ನಲ್ಲಿ  iPhone 8 ಖರೀದಿಸಿದ ವ್ಯಕ್ತಿ ಆನ್ಲೈನ್ ಕಂಪನಿಯ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಫ್ಲಿಪ್ ಕಾರ್ಟ್ ವಿರುದ್ಧ ಕೇಸ್ ದಾಖಲು
ಮುಂಬೈಯಲ್ಲಿ ವಾಸಿಸುತ್ತಿರುವ 26 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ iPhone 8ರ ಬದಲಿಗೆ ಸೋಪ್ ಬಾಕ್ಸ್ ವಿತರಿಸುವ ಬಗ್ಗೆ ಪ್ರಮುಖ ಆನ್ಲೈನ್ ಕಂಪನಿಯಾಗಿರುವ ಫ್ಲಿಪ್ ಕಾರ್ಟ್(flipkart) ವಿರುದ್ಧ ಮುಂಬೈಯ ಬೈಕುಲಾ ಪೊಲೀಸ್ ಠಾಣೆಯಲ್ಲಿ ಫ್ಲಿಪ್ಕಾರ್ಟ್ ವಿರುದ್ಧ ದೂರು ದಾಖಲಿಸಿದ್ದಾರೆ.