ನವದೆಹಲಿ: ಐಪಿಸಿ ಸೆಕ್ಷನ್ 497 ರ ಪ್ರಕಾರ ವ್ಯಭಿಚಾರದ ವಿಷಯವಾಗಿ ಮಹಿಳೆ ಮತ್ತು ಪುರುಷನು ಸಮಾನ ಜವಾಬ್ದಾರರು ಎಂದು ವ್ಯಭಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯಲ್ಲಿ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಸುಪ್ರೀಂಕೋರ್ಟ್ ಬುಧವಾರದಂದು ಮಹಿಳೆಯರು ಅಪರಾಧಿ ಎಂದು ಬಿಂಬಿಸುವ ಕಾನೂನನ್ನು ಮುಟ್ಟುವುದಿಲ್ಲ ಎಂದು ಎಂದು ಹೇಳಿತ್ತು.ನ್ಯಾಯಮೂರ್ತಿ ಆರ್.ಎಫ್ ನಾರಿಮನ್, ಎಎಂ ಖಾನ್ವಿಲ್ಕರ್, ಡಿ.ವೈ.ಚಂದ್ರಚುಡ್ ಮತ್ತು ಇಂಧು ಮಲ್ಹೋತ್ರಾ  ಒಳಗೊಂಡ  ಪೀಠವು ಇಂದು ಅರ್ಜಿ ವಿಚಾರಣೆ ಸಂದರ್ಭದಲ್ಲಿ "ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 147 (ಕಾನೂನಿಗೆ ಮುಂಚೆ ಸಮಾನತೆ) ವಿಧಿ14 ರ ಆಧಾರದ ಮೇಲೆ ಎಲ್ಲರನ್ನು ಸೆಕ್ಷನ್ 497 ಕ್ರಿಮಿನಲ್ ಅಪರಾಧಿ ಎಂದು ಪರಿಗಣಿಸುವ ವಿಚಾರವನ್ನು ಪರಿಶಿಲಿಸುತ್ತೇವೆ ಎಂದು ತಿಳಿಸಿದರು.


ಸುಪ್ರಿಂಕೋರ್ಟ್ ಇತ್ತೀಚಿಗೆ ಸೆಕ್ಷನ್ 497 ವಿವಾಹಿತ ಪುರುಷನು ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದರೆ ಪುರುಷನನ್ನು ಮಾತ್ರ ಶಿಕ್ಷೆಗೆ ಒಳಪಡಿಸುತ್ತದೆ.ಈಗ ಇದನ್ನು ಪುರುಷ ಮತ್ತು  ಮಹಿಳೆಯನ್ನು ಸಮಾನ ಜವಾಬ್ದಾರದಾರರು ಎಂದು ಪರಿಶೀಲಿಸಬೇಕಂದು ಅರ್ಜಿಸಲ್ಲಿಸಲಾಗಿತ್ತು.


158 ವರ್ಷಕ್ಕೂ ಹಳೆಯ ಕಾನೂನಾಗಿರುವ ಸೆಕ್ಷನ್ 497' ವ್ಯಕ್ತಿಯೋಬ್ಬನು ಒಪ್ಪಿಗೆ ಅಥವಾ ಒಪ್ಪಿಗೆ ಇಲ್ಲದೆ ಯಾವುದೇ ವಿವಾಹಿತ ಮಹಿಳೆಯ ಜೊತೆ ಅನೈತಿಕ ಸಂಬಂಧವು ಅದು ಅತ್ಯಾಚಾರದ ಅಪರಾಧವಲ್ಲ ಬದಲಾಗಿ ಅದು ವ್ಯಭಿಚಾರದ ಕಾನೂನಿನ ಉಲ್ಲಂಘನೆ ಎಂದು ಅವರು ತಿಳಿಸಿದರು. 


ಇದನ್ನು ಉಲ್ಲಂಘಿಸಿದ ವ್ಯಕ್ತಿ  ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಎರಡನ್ನು ವಿಧಿಸಬಹುದು ಎಂದು ಹೇಳುತ್ತದೆ.ಆದರೆ ಈ ಶಿಕ್ಷೆ ಹೆಂಡತಿಗೆ ಒಳಪಡುವುದಿಲ್ಲ ಎಂದು ಹೇಳುತ್ತದೆ.ಅರ್ಜಿದಾರ ಜೋಸೆಪ್ ಶೈನ್ ಪರವಾಗಿ ವಾದಿಸಿದ ಕಲಿಶ್ವರಂ ರಾಜ್ " ಅರ್ಜಿದಾರರ ವಾದದಂತೆ ಐಪಿಸಿ ಸೆಕ್ಷನ್ 497 ಮತ್ತು ಸಿಆರ್ಪಿಸಿ ಸೆಕ್ಷನ್ 198 (2) ರನ್ನು ತೆಗೆದುಹಾಕಬೇಕೆಂದು ವಾದಿಸಿದ್ದಾರೆ.ಏಕೆಂದರೆ ಇದು ಕೇವಲ ಮಹಿಳಾ ಪತಿಗೆ ಮಾತ್ರ ದೂರು ಸಲ್ಲಿಸಲು ಅನುಮತಿ ನೀಡುತ್ತದೆ.