ನವದೆಹಲಿ: ಪೂರ್ವ ಲಡಾಕ್ ನಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಸೈನಿಕರ ಘರ್ಷಣೆಯ ಬಳಿಕ ಭಾರತದಲ್ಲಿ ಆರಂಭವಾಗಿರುವ 'ಬಾಯ್ಕಾಟ್ ಚೀನಾ' ಅಭಿಯಾನ ತನ್ನ ಪ್ರಭಾವ ತೋರಿಸಲು ಆರಂಭಿಸಿದೆ. ಹೌದು, ಸದ್ಯ ಖುದ್ದು ಚೀನಾ ಇದನ್ನು ಒಪ್ಪಿಕೊಂಡಿದ್ದು, ಇದರಿಂದ ಚೀನಾಗೆ ಭಾರಿ ಹಾನಿ ತಲುಪಲಿದ್ದು ಭಾರತದೊಂದಿಗಿನ ವ್ಯಾಪಾರದಲ್ಲಿ ಇದೆ ವರ್ಷ ಶೇ.30 ರಿಂದ ಶೇ.50 ರಷ್ಟು ಕುಸಿತ ದಾಖಲಿಸುವ ಸಾಧ್ಯತೆ ಇದೆ ಎಂದಿದೆ. ಏಕೆಂದರೆ ಸದ್ಯ ಭಾರತದ ಜೊತೆಗಿನ ವ್ಯಾಪಾರದಲ್ಲಿ ಚೀನಾ ಟ್ರೇಡ್ ಬೆನಿಫಿಟ್ ನಲ್ಲಿದೆ (ಅಂದರೆ ಭಾರತಕ್ಕೆ ರಫ್ತು ಹೆಚ್ಚು, ಆಮದು ಕಡಿಮೆ). ಹೀಗಾಗಿ ಈ ವ್ಯಾಪಾರ ಕುಸಿತದಿಂದ ಚೀನಾಗೆ ಭಾರಿ ಹೊಡೆತ ಬೀಳಲಿದೆ.


COMMERCIAL BREAK
SCROLL TO CONTINUE READING

ಚೀನಾದ ಕಮ್ಯೂನಿಸ್ಟ್ ಪಕ್ಷದ ಮುಖಪತ್ರ ಎಂದೇ ಬಿಂಬಿಸಲಾಗುವ ಗ್ಲೋಬಲ್ ಟೈಮ್ಸ್ ನಲ್ಲಿ ವರದಿಯೊಂದು ಪ್ರಕಟಗೊಂಡಿದ್ದು, "ಚೀನಾ ವಿರುದ್ಧ ಭಾರತದಲ್ಲಿ ಹೆಚ್ಚಾಗುತ್ತಿರುವ ರಾಷ್ಟ್ರೀಯತೆಯ ಪ್ರಭಾವ ಆರ್ಥಿಕ ಸ್ಥಿತಿಯ ಮೇಲೆ ಉಂಟಾಗಿದೆ. ಇದನ್ನು ಕೊವಿಡ್ 19 ಜೊತೆಗೆ ಜೋಡಿಸಿ ನೋಡಿದರೆ ದ್ವಿಪಕ್ಷೀಯ ವ್ಯಾಪಾರ ಈ ವರ್ಷ ಶೇ.30 ರಷ್ಟು ಕಡಿಮೆಯಾಗಲಿದ್ದು, ಈ ಕುಸಿತ ಶೇ.50 ರಷ್ಟು ಮುಂದುವರೆಯಲಿದೆ" ಎನ್ನಲಾಗಿದೆ.


ಗ್ಲೋಬಲ್ ಟೈಮ್ಸ್ ನಲ್ಲಿ ಪ್ರಕಟಗೊಂಡ ಲೇಖನದ ಪ್ರಕಾರ ಶೆನ್ಜೆನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಬೇ ಆಫ್ ಬಂಗಾಳ ಅಧ್ಯಯನ ನಿರ್ದೇಶಕ ಡೈ ಯೋಂಗ್ಹಾಂಗ್ ಈ ಕುರಿತು ವಿಶ್ಲೇಷಿಸಿದ್ದು, "ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆಗಳ ನಂತರ ಕೆಲವು ರಾಜಕಾರಣಿಗಳು ಮತ್ತು ಮಾಧ್ಯಮಗಳು ರಾಷ್ಟ್ರೀಯತೆಗೆ ಉತ್ತೇಜನೆ ನೀಡಲಾಗುತ್ತಿದೆ.  ಚೀನಾದ ಸರಕುಗಳ ಬಹಿಷ್ಕಾರದ ಜೊತೆಗೆ, ದೇಶದ ಬಂದರುಗಳಲ್ಲಿ ಸರಕು ತಪಾಸಣೆ ಹೆಚ್ಚಿಸಲಾಗಿದೆ. ಘರ್ಷಣೆಗೆ ಮುನ್ನ ಚೀನಾದ ಕಂಪನಿಗಳ ಸ್ವಾಧೀನ ಪ್ರಕ್ರಿಯೆ ತಡೆಯಲು ವಿದೇಶಿ ಹೂಡಿಕೆಯ ಮೇಲಿನ ತನಿಖೆಯನ್ನು ಹೆಚ್ಚಿಸಲಾಗಿದೆ' ಎಂದಿದ್ದಾರೆ.


ಕಳೆದ ಹಲವು ವರ್ಷಗಳಿಂದ ಭಾರತ ಮತ್ತು ಚೀನಾ ದೇಶಗಳ ಸಂಬಂಧಗಳಲ್ಲಿ ಭಾರಿ ವೃದ್ಧಿಯಾಗಿದೆ ಎಂದೂ ಕೂಡ ಲೇಖನದಲ್ಲಿ ಅವರು ಹೇಳಿದ್ದಾರೆ. ಆಟೋ ಮ್ಯಾನುಫ್ಯಾಕ್ಚರಿಂಗ್, ಟೆಲಿಕಮ್ಯುನಿಕೇಷನ್ ಕ್ಷೇತ್ರದಲ್ಲಿ ಉಭಯ ದೇಶಗಳಿಗೆ ಲಾಭ ಸಿಗುತ್ತಿದೆ. ಹಲವು ಭಾರತೀಯ ಉದ್ಯೋಗಗಳು boycott china ಅಭಿಯಾನ ಸಹಿಸಲು ಶಕ್ತವಾಗಿಲ್ಲ. ಅಲ್ಲದೆ ಭಾರತಕ್ಕೆ ವಿಕಲ್ಪ ಕಂಡುಕೊಳ್ಳಲು ಸಾಕಷ್ಟು ಪರಿಶ್ರಮ ಪದಬೇಕಾಗಲಿದೆ. ಹೊಸ ಉದ್ಯಮಗಳನ್ನು ಸೃಷ್ಟಿಸಬೇಕಾಗಲಿದೆ ಅಥವಾ ಬೇರೆ ದೇಶಗಳಿಂದ ಹೂಡಿಕೆ ಪಡೆಯಬೇಕಾಗಲಿದೆ ಎನ್ನಲಾಗಿದೆ. ಇನ್ನೊಂದೆಡೆ ಗಡಿಭಾಗದಲ್ಲಿ ಶಾಂತಿ ಸ್ಥಾಪನೆಯ ಮೂಲಕ ಉಭಯ ದೇಶಗಳ ಆರ್ಥಿಕ ಸಂಬಂಧಗಳು ಮತ್ತೆ ಸುದಾರಣೆಯಾಗಲಿವೆ ಎಂಬ ಭರವಸೆಯನ್ನೂ ಕೂಡ ಲೇಖನದಲ್ಲಿ ವ್ಯಕ್ತಪಡಿಸಲಾಗಿದೆ.


ಪೂರ್ವ ಲಡಾಕ್‌ನ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಯಲ್ಲಿ ಜೂನ್ 15 ರಂದು ಚೀನಾದ ಸೈನಿಕರು ವಂಚನೆ ಮತ್ತು ಪಿತೂರಿ ನಡೆಸುವ ಮೂಲಕ ಭಾರತೀಯ ಸೈನಿಕರ ಮೇಲೆ ಹಲ್ಲೆ ನಡೆಸಿದ್ದರು. ಇದರಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ವೇಳೆ ಭಾರತೀಯ ಯೋಧರು ಕೂಡ ಚೀನಾಕ್ಕೆ ತಕ್ಕ ಉತ್ತರವನ್ನು ನೀಡಿ ಹಲವಾರು ಸೈನಿಕರನ್ನು ಮಟ್ಟಹಾಕಿದ್ದಾರೆ. ಆದರೆ,ಇದುವರೆಗೆ ಚೀನಾ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಏತನ್ಮಧ್ಯೆ, ಆರ್ಥಿಕಮಟ್ಟದಲ್ಲಿ ಚೀನಾಗೆ ಭಾರಿ ಪಟ್ಟು ನೀಡಲು ನಿರ್ಧರಿಸಿರುವ ಭಾರತದಲ್ಲಿ 'ಬಾಯ್ ಕಾಟ್ ಚೀನಾ ' ಅಭಿಯಾನ ಆರಂಭಗೊಂಡಿದೆ. ಜನರು ಚೀನಾದ ವಸ್ತುಗಳನ್ನು ಖರೀದಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅನೇಕ ರಾಜ್ಯ ಸರ್ಕಾರಗಳು ಚೀನಾದ ಕಂಪನಿಗಳಿಗೆ ನೀಡಿರುವ ಒಪ್ಪಂದಗಳನ್ನು ಸಹ ರದ್ದುಗೊಳಿಸುತ್ತಿವೆ.