Bride And Groom Kissing Each Other: ಮದುವೆಯ ವಿಡಿಯೋವೊಂದು  ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದ್ದು, ಬಳಕೆದಾರರು ಅದಕ್ಕೆ ನೀಡುತ್ತಿರುವ ಪ್ರತಿಕ್ರಿಯೆಯನ್ನು ನೀವೂ ಒಮ್ಮೆ ನೋಡಲೇಬೇಕು. ಕೆಲವರು ಇಂತಹ ವಿಡಿಯೋಗಳನ್ನು  ಇಷ್ಟಪಡುತ್ತಾರೆ ಮತ್ತು ಕೆಲವರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ವಧು-ವರರು ತಾವು ಮಾಡಿರುವ ಒಂದು ಕೆಲಸದ ಕಾರಣ ವೈರಲ್ ಆಗಿರುವ ಅಂತಹುದೇ ಒಂದು ವಿಡಿಯೋ ಇದೀಗ ಮುನ್ನಲೆಗೆ ಬಂದಿದೆ. ಇದರಲ್ಲಿ ನೆರೆದ ಅತಿಥಿಗಳ ಮುಂದೆಯೇ ಇಬ್ಬರೂ ಪರಸ್ಪರ ರೊಮ್ಯಾಂಟಿಕ್ ಆಗಿದ್ದಾರೆ. 

COMMERCIAL BREAK
SCROLL TO CONTINUE READING

ಮಂತ್ರ ಹೇಳುತ್ತಿರುವ ಪುರೋಹಿತರು
ವಾಸ್ತವದಲ್ಲಿ, ಈ ವೀಡಿಯೊವನ್ನು Instagram ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಇದೊಂದು ಕಂಪ್ಲೀಟ್ ಲವ್ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಮದುವೆಗೆ ಸಿದ್ಧತೆ ನಡೆಯುತ್ತಿದ್ದು, ಪುದ್ರೋಹಿತರು ಮಂತ್ರಗಳನ್ನು ಪಠಿಸುತ್ತಿರುವುದು ವಿಡಿಯೋದಲ್ಲಿ ನೀವು ನೋಡಬಹುದು. ಅವರ ಸಮ್ಮುಖದಲ್ಲಿರುವ ಯಜ್ಞಕುಂಡದಲ್ಲಿ ಬೆಂಕಿ ಉರಿಯುತ್ತಿದೆ ಮತ್ತು ವಧು-ವರರು ಕೂಡ ಮುಂದೆ ಕುಳಿತಿರುವುದನ್ನು ನೀವು ಕಾಣಬಹುದು. ಇದೇ ವೇಳೆ ಕೆಲವು ಮಹಿಳೆಯರೂ ವಧುವನ್ನು ಹಿಂಬಾಲಿಸುತ್ತಾರೆ.


ಇದನ್ನೂ ಓದಿ-Dangerous Stunt: ಪತ್ನಿಯನ್ನು ಬೈಕ್ ಮೇಲೆ ಕೂರಿಸಿ ಅಪಾಯಕಾರಿ ಸ್ಟಂಟ್ ಗಿಳಿದ ಭೂಪ... ವಿಡಿಯೋ ನೋಡಿ


ವಧುವರರು ಪರಸ್ಪರ ತುಂಬಾ ಕ್ಲೋಸ್ ಬರುತ್ತಾರೆ...
ಈ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ನಿಂತ ಮಹಿಳೆಯರು ವಧುವಿನ ಹಾರ ಅಥವಾ ಸೀರೆಯ ಮೇಲಿನ ಭಾಗದಲ್ಲಿ ಏನಾದರು ಸರಿಪಡಿಸುವುದನ್ನು ನೀವು ನೋಡಬಹುದು. ಇದನ್ನು ನೋಡಿದ ವರ ಕೂಡ ಅದಕ್ಕೆ ತನ್ನ ಕೈಜೋಡಿಸುತ್ತಾನೆ. ವರನು ಈ ರೀತಿ ಮಾಡುವುದನ್ನು ನೋಡಿದ ವಧು ನಾಚಿ ನೀರಾಗುತ್ತಾಳೆ. ಈ ಸಮಯದಲ್ಲಿ, ಇಬ್ಬರೂ ತುಂಬಾ ಹತ್ತಿರಕ್ಕೆ ಬಂದ ಕಾರಣ ರೊಮ್ಯಾಂಟಿಕ್ ಮೂಡ್ ಗೆ ಜಾರಿದ್ದಾರೆ. ನಂತರ ವಧು ವರನನ್ನು ಚುಂಬಿಸಲು ಮುಂದಾಗಿದ್ದಾಳೆ, ವರನು ಕೂಡ ಆಕೆಗೆ ಸಾಥ್ ನೀಡುತ್ತಿರುವುದನ್ನು ನೀವು ಗಮನಿಸಬಹುದು. 


ಇದನ್ನೂ ಓದಿ-Viral Video: ಹೆಬ್ಬಾವನ್ನು ಸೆರೆಹಿಡಿಯಲು ಚಿಕನ್ ಆಮೀಷ, ಮುಂದೇನಾಯ್ತು? ವಿಡಿಯೋ ನೋಡಿ


ಇಬ್ಬರೂ ಪರಸ್ಪರ ಚುಂಬಿಸುವುದನ್ನು ನೋಡಿ ಅಲ್ಲಿದ್ದವರೂ ಕೂಡ ನಗುತ್ತಿರುವುದನ್ನು ನೀವು ಕಾಣಬಹುದು. ಈ ವೇಳೆ ವಧುವರರ ಮುಖದಲ್ಲಿ ಮಂದಹಾಸ ಮೂಡಿತ್ತು. ಇದು ತುಂಬಾ ಸಾಮಾನ್ಯ ವಿಷಯ, ಆದರೆ ಅದರ ವೀಡಿಯೊ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಅದರ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 



ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.