Bullet Stunt Video: ಸಾಮಾನ್ಯವಾಗಿ ಕೆಲ ಜನರು ರಸ್ತೆಗಳಲ್ಲಿ ಮೂರ್ಖತನದ ಕೆಲಸಗಳನ್ನು ಮಾಡುವುದನ್ನು ನೀವು ಗಮನಿಸಿರಬಹುದು. ಉದಾಹರಣೆಗಾಗಿ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುತ್ತಿರುವಾಗ ಹಾರ್ನ್ ಹೊಡೆಯುವುದು ಅಥವಾ ಚಾಲನೆ ಮಾಡುವಾಗ ಹೆಡ್‌ಫೋನ್‌ಗಳನ್ನು ಬಳಸುವುದು. ಅಷ್ಟೇ ಅಲ್ಲ ಬೈಕ್ ಹಿಂದೆ ಅಜಾಗರೂಕತೆಯಿಂದ ಕುಳಿತು ಚಾಲಕನನ್ನು ವೇಗವಾಗಿ ಓಡಿಸಲು ಪ್ರೇರೇಪಿಸುವುದು ಇತ್ಯಾದಿಗಳು. ಆದರೆ, ಇಂತಹ ಮೂರ್ಖತನ ಕೆಲವೊಮ್ಮೆ ಅಪಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಅಂತಹ ಸಾಹಸಗಳನ್ನು ಮಾಡುವುದು ಯಾರಿಗಾದರೂ ದುಬಾರಿಯಾಗಿ ಪರಿಣಮಿಸಬಹುದು. ಬುಲೆಟ್‌ನ ಹಿಂಬದಿಯ ಸೀಟಿನಲ್ಲಿ ಪತ್ನಿ ಕೆಂಪು ಸೀರೆಯುಟ್ಟು ಕುಳಿತಿರುವಾಗ ಬೈಕ್ ಸವಾರನೊಬ್ಬ ಹಿಂದೆ ಮುಂದೆ ಯೋಚಿಸದೆ ಸ್ಟಂಟ್ ಮಾಡುತ್ತಿರುವ ವಿಡಿಯೋ ಪ್ರಸ್ತುತ್ಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸ್ಟಂಟ್ ಮ್ಯಾನ್ ಬಿಟ್ಹಾಕಿ ಆತನ ಹೆಂಡತಿಯ ಮುಖದಲ್ಲಿಯೂ ಕೂಡ ಯಾವುದೇ ಭಯ ಕಾಣಿಸದಿರುವುದು ಇಲ್ಲಿ ಆಶ್ಚರ್ಯಕರ ಸಂಗತಿಯಾಗಿದೆ.
ಇದನ್ನೂ ಓದಿ-Anaconda Video : ಇಷ್ಟು ದೊಡ್ಡ ಹಾವನ್ನು ನೀವು ಜೀವನದಲ್ಲೇ ನೋಡಿರಲು ಸಾಧ್ಯವಿಲ್ಲ!
ಬುಲೆಟ್ ನಲ್ಲಿ ಸ್ಟಂಟ್ ವಿಡಿಯೋ ವೈರಲ್
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಇಲ್ಲದೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಓಡಿಸುತ್ತಿರುವುದನ್ನು ನೀವು ನೋಡಬಹುದು. ಹಿಂದೆ ಕುಳಿತಿರುವ ಆತನ ಪತ್ನಿ ಮೌನವಾಗಿದ್ದುಕೊಂಡು ಎದುರಿಗೆ ನೋಡುತ್ತಿದ್ದಾಳೆ. ರೈಡರ್ ಶೀಘ್ರದಲ್ಲೇ ಕೆಲವು ಅವಿವೇಕಿ ಕೆಲಸಗಳನ್ನು ಮಾಡಲು ಆರಂಭಿಸುತ್ತಾನೆ. ಅವನು ಮೊದಲು ತನ್ನ ಎರಡೂ ಪಾದಗಳನ್ನು ಬೈಕಿನ ಸೀಟಿನ ಮೇಲೆ ಇರಿಸಿ ನಂತರ ಹ್ಯಾಂಡಲ್ ಬಿಟ್ಟು ಎದ್ದು ನಿಲ್ಲಲು ಪ್ರಯತ್ನಿಸುತ್ತಾನೆ. ತುಂಬಾ ಪ್ರೊಫೆಷನಲ್ ಆಗಿ ಬ್ಯಾಲೆನ್ಸ್ ಮಾಡಿಕೊಂಡು ಚಲಿಸುವ ಬೈಕ್ ಮೇಲೆ ಆತ ಎದ್ದು ನಿಲ್ಲುತ್ತಾನೆ. ಇನ್ನೊಬ್ಬ ವ್ಯಕ್ತಿ ಆತನ ಪಕ್ಕದಲ್ಲಿ ಬೈಕ್ ಓಡಿಸುತ್ತ ಸಂಪೂರ್ಣ ಸಾಹಸವನ್ನು ಶೂಟ್ ಮಾಡುತ್ತಿದ್ದಾನೆ. ಅವನು ಬಹುಶಃ ಬೈಕ್ ಸವಾರನ ಸ್ನೇಹಿತನಾಗಿರಬಹುದು. ಅಪಾಯಕಾರಿ ಸ್ಟಂಟ್‌ಗಳಲ್ಲಿ ಸ್ಟಂಟ್‌ಮ್ಯಾನ್ ಮಾತ್ರವಲ್ಲದೆ ಅವನ ಹಿಂದೆ ಕುಳಿತಿರುವ ಅವನ ಪತ್ನಿಯ ಪ್ರಾಣಕ್ಕೂ ಅಪಾಯವಿದೆ.
ಇದನ್ನೂ ಓದಿ-ಮದುವೆಯಲ್ಲಿ ಮಾಜಿ ಗೆಳೆಯನಿಗೆ ಹಾಡು ಹೇಳಿದ ವಧು! ದಂಗಾದ ವರ ಮಾಡಿದ್ದೇನು ನೋಡಿ
ಹಿಂದೆ ಕುಳಿತ ಹೆಂಡತಿಯೂ ಹೆದರುತ್ತಿಲ್ಲ
ಅವನು ಸೀಟಿನ ಮೇಲೆ ಎದ್ದು ನಿಂತಾಗ, ಬೈಕ್ ಸವಾರನ ಪತ್ನಿ ಸ್ಟಂಟ್ ನಿಂದ ತನಗೆ ತೊಂದರೆಯಾಗದಂತೆ ಎಚ್ಚರಿಕೆವಹಿಸುತ್ತಿದ್ದಾಳೆ. ಅವಳು ಬೈಕನ್ನು ನಿಯಂತ್ರಿಸಲು ಪ್ರಯತ್ನಿಸುವುದಿಲ್ಲ ಅಥವಾ ಸೀಟಿನಲ್ಲಿದ್ದುಕೊಂಡು ತನ್ನ ಪತಿಯನ್ನು ತಡೆಯಲು ಯತ್ನಿಸುತ್ತಿಲ್ಲ. ಆದರೆ, ಸ್ಟಂಟ್ನ ಕೊನೆಯಲ್ಲಿ ಏನಾಯಿತು ಎಂಬುದು ಮಾತ್ರ ತಿಳಿದಿಲ್ಲ. ಬೈಕ್ ಸವಾರನು ಸೀಟಿನ ಮೇಲೆ ನಿಂತ ಕೆಲವೇ ಕ್ಷಣಗಳಲ್ಲಿ ವೀಡಿಯೊ ಕೊನೆಗೊಳ್ಳುತ್ತದೆ. ಆದಾಗ್ಯೂ, ಕ್ಲಿಪ್ನ ಅಂತ್ಯದ ವೇಳೆಗೆ, ಆತ ಒಂದು ಬದಿಗೆ ವಾಲುತ್ತಿದ್ದಾನೆ ಎಂಬಂತೆ ತೋರುತ್ತಿದೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದು ಚಾಲಕರು/ರೈಡರ್‌ಗಳು ಮತ್ತು ರಸ್ತೆಯಲ್ಲಿರುವ ಇತರರಿಗೆ ಮಾರಕ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ 'ಘಂಟಾ' ಹೆಸರಿನ ಮೆಮೆ ಪೇಜ್ ಮೂಲಕ ಹಂಚಿಕೊಳ್ಳಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.