ನವದೆಹಲಿ: ಜಗತ್ತು 2022ರ ಹೊಸ ವರ್ಷಕ್ಕೆ ಕಾಲಿಟ್ಟರೂ ಹಳೆಯ ಪ್ರವೃತ್ತಿಗಳು ಇನ್ನೂ ಸಾವಿರಾರು ಜನರ ಹೃದಯವನ್ನು ಆಳುತ್ತಿವೆ. ಮದುವೆಯೊಂದರಲ್ಲಿ ಇಬ್ಬರು ಮಹಿಳೆಯರು ಸುಂದರವಾಗಿ ನೃತ್ಯ ಮಾಡುತ್ತಿರುವ ವಿಡಿಯೋ(Viral Video)ವನ್ನು ವೀಕ್ಷಿಸಿದ ನೆಟಿಜನ್‌ಗಳು ಸಂಪೂರ್ಣವಾಗಿ ಮೂಕವಿಸ್ಮಿತರಾಗಿದ್ದಾರೆ.  


COMMERCIAL BREAK
SCROLL TO CONTINUE READING

ಹೌದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಸೌಂಡ್ ಮಾಡುತ್ತಿರುವ ಈ ವಿಡಿಯೋ ಲಕ್ಷಾಂತರ ಜನರ ಹೃದಯ ಗೆದ್ದಿದೆ. ಅಷ್ಟಕ್ಕೂ ಅಂತರ್ಜಾಲದಲ್ಲಿ ಕ್ರೇಜಿ ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ ಅಂತೀರಾ..? ತನ್ನ ಸಹೋದರಿ ಜೊತೆಗೆ ವಧುವೊಬ್ಬಳು ಸಖತ್ ಆಗಿ ವೆಡ್ಡಿಂಗ್ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾಳೆ. ಬಾಲಿವುಡ್ ಖ್ಯಾತ ನಟಿ ಸಾರಾ ಅಲಿ ಖಾನ್ ಅಭಿನಯದ ‘ಅತ್ರಾಂಗಿ ರೇ’(Atrangi Re) ಸಿನಿಮಾದ ಎ.ಆರ್.ರೆಹಮಾನ್ ಮತ್ತು ಶ್ರೇಯಾ ಘೋಷಾಲ್ ಅವರ ಇತ್ತೀಚಿನ ಸೂಪರ್ ಹಿಟ್ ‘ಚಕಾ ಚಕ್’(Chaka Chak)ಗೆ ಹಾಡಿಗೆ ಮಸ್ತ್ ಮಸ್ತ್ ನೃತ್ಯ ಮಾಡಿ ನೋಡುಗರ ಗಮನ ಸೆಳೆದಿದ್ದಾರೆ.


ಇದನ್ನೂ ಓದಿ: Bank Holiday : ಬ್ಯಾಂಕ್ ಗ್ರಾಹಕರ ಗಮನಕ್ಕೆ! ಮುಂದಿನ ವಾರ 4 ದಿನ ಬ್ಯಾಂಕ್ ಬಂದ್ - ಸಂಪೂರ್ಣ ಲಿಸ್ಟ್ ಇಲ್ಲಿದೆ



ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಮನಸಾರೆ ಇಷ್ಟಪಟ್ಟಿದ್ದಾರೆ. ತನ್ನ ಸಹೋದರಿ ಜೊತೆಗೆ ನವವಧು ಮದುವೆ ಮನೆಯಲ್ಲಿ ಆಕರ್ಷಕ ನೃತ್ಯಪ್ರದರ್ಶನ(wedding Dance) ನೀಡಿರುವುದು ನೆಟಿಜನ್ಸ್ ಗಳನ್ನು ಮೋಡಿ ಮಾಡಿದೆ. ಅನೇಕರು ಈ ವಿಡಿಯೋ ನೋಡಿ ವಾವ್ಹ್..! ಅದ್ಭುತ ನೃತ್ಯ..! ವೆಂದು ಕಾಮೆಂಟ್ ಮಾಡಿದ್ದಾರೆ. ರಂಗುರಂಗಿನ ಬೆಳಕಿನ ಚಿತ್ತಾರದಲ್ಲಿ ಇಬ್ಬರು ಸಹೋದರಿಯರು ಮಾಡಿರುವ ಡ್ಯಾನ್ಸ್ ಗೆ ನೆರೆದಿದ್ದ ಜನರು ಸಿಳ್ಳೆ, ಚಪ್ಪಾಳೆ ಬಾರಿಸುವ ಮೂಲಕ ಹುರಿದುಂಬಿಸಿದ್ದಾರೆ. ಇವರಿಬ್ಬರ ನೃತ್ಯದ ಮೋಡಿಗೆ ಅನೇಕರು ಬೆರಗಾಗಿದ್ದಾರೆ.


ಈ ಡ್ಯಾನ್ಸ್ ವಿಡಿಯೋ ಕ್ಲಿಪ್ ಅನ್ನು 'theweddingministry' ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಸಾವಿರಾರು ಜನರು ಲೈಕ್ ಮಾಡಿರುವ ಈ ವಿಡಿಯೋವನ್ನು ನೂರಾರು ಜನರು ಶೇರ್ ಮಾಡಿದ್ದಾರೆ. ‘ಚಕಾ ಚಕ್’ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ ಅಂತಾ ಅನೇಕರು ಕಾಮೆಂಟ್ ಮಾಡಿದ್ದಾರೆ.


ಇದನ್ನೂ ಓದಿ: Vaccine Certificate: ಕರೋನಾ ಲಸಿಕೆ ಪ್ರಮಾಣಪತ್ರದಲ್ಲಿ ಕಾಣಿಸುವುದಿಲ್ಲ ಪ್ರಧಾನಿ ಮೋದಿಯವರ ಚಿತ್ರ, ಕಾರಣ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.