ನವದೆಹಲಿ: ನೀವು ನೋಡುವ ಅತ್ಯಂತ ಸುಂದರವಾದ ಜೀವಿಗಳಲ್ಲಿ ಕಿಂಗ್ ಕೋಬ್ರಾ(King Cobra) ಕೂಡ ಒಂದು. ಇದು ಅತಿ ಉದ್ದದ ಹಾವಾಗಿದ್ದು, ಬಿಸಿಲಿನಲ್ಲಿ ಫಳಫಳನೆ ಹೊಳೆಯುತ್ತದೆ. ಸೌಂದರ್ಯದಲ್ಲಿ ಕಿಂಗ್ ಕೋಬ್ರಾವನ್ನು ಮೀರಿಸುವ ಹಾವು ಮತ್ತೊಂದಿಲ್ಲ. ತನ್ನ ಹೆಡೆಯನ್ನು ಎತ್ತಿ ನಿಂತಾಗ ಅದನ್ನು ನೋಡುವುದೇ ಅತ್ಯಂತ ಅದ್ಭುತ ಅನುಭವ ನೀಡುತ್ತದೆ. ನೀವು ಯಾವಾಗಲೂ ಒಂದು ಹಾವು ಮಾತ್ರ ಹೆಡೆ ಎತ್ತಿ ನಿಲ್ಲುವುದನ್ನು ಕಂಡಿರಬಹುದು. ಆದರೆ ಮೂರು ಹಾವುಗಳು ಒಟ್ಟೊಟ್ಟಿಗೆ ನಿಂತು ಹೆಡೆ ಎತ್ತಿ ನಿಂತಿರುವ ದೃಶ್ಯವನ್ನು ಎಂದಾದರೂ ನೋಡಿದ್ದೀರಾ..?
ಇಂತಹದ್ದೇ ಒಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರು ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ. ಈ ವೈರಲ್ ವಿಡಿಯೋದಲ್ಲಿ ಕ್ಯಾಮೆರಾದ ಒಂದೇ ಫ್ರೇಮ್‌ನಲ್ಲಿ ಮೂರು ನಾಗರಹಾವುಗಳು ಪರಸ್ಪರ ಎದುರು-ಬದುರಾಗಿ ಹೆಡೆ ಎತ್ತಿ ನಿಂತಿರುವುದು ಸೆರೆಯಾಗಿದೆ. ಇದು ನೋಡಲೇಬೇಕಾದ ದೃಶ್ಯ ವೈಭವ.
ಇದನ್ನೂ ಓದಿ: Watch:ಬೃಹತ್ ಗಾತ್ರದ ಹೆಬ್ಬಾವು ರಸ್ತೆ ದಾಟುವ ವಿಡಿಯೋ ವೈರಲ್
helicopter_yatra ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ(Viral Video)ವನ್ನು ಮೊದಲು ಹಂಚಿಕೊಳ್ಳಲಾಗಿತ್ತು. ಬಳಿಕ ಅದು ಸೋಷಿಯಲ್ ಮೀಡಿದಾದಲ್ಲಿ ಸಖತ್ ವೈರಲ್ ಆಗಿ ಲಕ್ಷಾಂತರ ಜನರಿಗೆ ಇಷ್ಟವಾಗಿದೆ. ಈ ವಿಡಿಯೋ ನೋಡಿದ ಬಹುತೇಕರು ಅದ್ಭುತ.. ಅಂತಾ ಹೇಳಿದ್ದಾರೆ. ಇಲ್ಲಿ 3 ಹಾವುಗಳು ಕಾನ್ಫರೆನ್ಸ್ ನಲ್ಲಿರುವಂತೆ ತೋರುತ್ತಿದೆ. ಇದು ವಿಡಿಯೋಗೆ ತಮಾಷೆಯ ಕಾಮೆಂಟ್ ಮಾಡಲು ನೆಟಿಜನ್‌ಗಳನ್ನು ಪ್ರೇರೇಪಿಸಿದೆ. ಒಟ್ಟೊಟ್ಟಿಗೆ ಮೂರು ಹಾವುಗಳು ಮುಖಾಮುಖಿಯಾಗಿರುವುದನ್ನು ಕಂಡು ಅನೇಕ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಒಬ್ಬ ಬಳಕೆದಾರರು ಇದನ್ನು ‘ಪ್ರೀ ವೆಡ್ಡಿಂಗ್ ಶೂಟ್’(Free Wedding Shoot) ಎಂದು ಕರೆದರೆ, ಇನ್ನೊಬ್ಬರು ‘ಇದು ರೌಂಡ್ ಟೇಬಲ್ ಕಾನ್ಫರೆನ್ಸ್’ ಅಂತಾ ನಗೆ ಚಟಾಕಿ ಹಾರಿಸಿದ್ದಾರೆ. ಎರಡು ಹಾವುಗಳು ಪರಸ್ಪರ ಎದುರುಬದಿರು ನಿಂತಾಗ ಎಂಟ್ರಿ ಕೊಟ್ಟ 3ನೇ ಹಾವು ರೆಫರಿ ವಿಜೇತರನ್ನು ನಿರ್ಧರಿಸಲು ಸಿದ್ಧವಾಗಿದೆ ಅಂತಾ ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Watch:ಪುಟ್ಟ ಮಗುವಿನಂತೆ ಹಾವಿಗೆ ಸ್ನಾನ ಮಾಡಿಸುವ ವ್ಯಕ್ತಿ, ವಿಡಿಯೋ ವೈರಲ್
ಕಿಂಗ್ ಕೋಬ್ರಾಗಳು ಹೆಚ್ಚಾಗಿ ಆಗ್ನೇಯ ಏಷ್ಯಾದ ಕಾಡುಗಳಲ್ಲಿ ಕಂಡುಬರುತ್ತವೆ ಮತ್ತು ಅವು ಸಾಮಾನ್ಯವಾಗಿ 3 ರಿಂದ 4 ಮೀಟರ್ ಉದ್ದವಿರುತ್ತವೆ. ಇವು ತುಂಬಾ ವಿಷಕಾರಿ ಆದರೆ ಅವು ಸಾಮಾನ್ಯವಾಗಿ ಜನಸಂದನಿಯಿಂದ ದೂರವಿರುತ್ತವೆ. ಹಾವುಗಳಿಗೆ ತೊಂದರೆ ಕೊಡದಿದ್ದರೆ ಅವು ಮನುಷ್ಯರಿಗೆ ತೊಂದರೆ ಕೊಡುವುದಿಲ್ಲ. ಅನೇಕ ಉರಗ ತಜ್ಞರು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಾರೆ. ಹಾವು(Snakes)ಗಳನ್ನು ರಕ್ಷಿಸಿ ಪರಿಸರ ಉಳಿಸಿ ಎಂದು ಜನರಿಗೆ ಉಪಯುಕ್ತ ಸಲಹೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.