Bride Viral Video: ಸಾಮಾಜಿಕ ಜಾಲತಾಣದಲ್ಲಿ ಹಲವು ಬಗೆಯ ವಿಡಿಯೋಗಳನ್ನು ನೋಡಬಹುದು. ಇಂಟರ್ನೆಟ್ ಜಗತ್ತು ಒಂದು ಮೋಜಿನ ಜಗತ್ತು. ನಾವು ಪ್ರತಿದಿನ ಇಲ್ಲಿ ಹಲವಾರು ವಿಭಿನ್ನ ವೀಡಿಯೊಗಳನ್ನು ನೋಡುತ್ತೇವೆ. ಇಂಟರ್‌ನೆಟ್‌ನಲ್ಲಿ ನಾವು ನೋಡುವ ವೀಡಿಯೋಗಳಲ್ಲಿನ ಅನೇಕ ವಿಷಯಗಳು ಕೆಲವೊಮ್ಮೆ ನಮ್ಮನ್ನು ನಗುವಂತೆ ಮಾಡುತ್ತದೆ, ಕೆಲವೊಮ್ಮೆ ಯೋಚಿಸುವಂತೆ ಮಾಡುತ್ತದೆ, ಕೆಲವೊಮ್ಮೆ ಆಶ್ಚರ್ಯವನ್ನುಂಟು ಮಾಡುತ್ತದೆ.


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನ ಪ್ರೀ ವೆಡ್ಡಿಂಗ್ ಶೂಟ್ ಹೆಚ್ಚು ಜನಪ್ರಿಯವಾಗುತ್ತಿದೆ. ಅದರಲ್ಲಿ ಕೆಲವು ಅಚ್ಚರಿಯನ್ನುಂಟು ಮಾಡಿದರೆ, ಇನ್ನೂ ಕೆಲವು ಆಘಾತವನ್ನು ಉಂಟು ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮದುವೆಯ ವಿಡಿಯೋಗಳು ಇಂಟರ್ನೆಟ್ ಅನ್ನು ರಾಕ್ ಮಾಡುತ್ತಿವೆ . ಆ ನಿಟ್ಟಿನಲ್ಲಿ ಸದ್ಯ ವಧುವಿನ ವಿಡಿಯೋವೊಂದು ವೈರಲ್ ಆಗಿದೆ. 


ಇದನ್ನೂ ಓದಿ- ಮುದ್ದು ಕಂದಮ್ಮನಿಗೆ ನಡಿಗೆ ಕಲಿಸಿದ ನಾಯಿಮರಿ, ನೋಡಿದರೆ ನೋಡುತ್ತಲೇ ಇರಬೇಕೆನಿಸುವ ವಿಡಿಯೋ


ಪ್ರಕೃತಿಯ ಮಧ್ಯೆ, ಜಗತ್ತಿನ ಪ್ರಸಿದ್ಧ ಸ್ಥಳಗಳಲ್ಲಿ ಲಕ್ಷ ಲಕ್ಷ ವೆಚ್ಚ ಮಾಡಿ ಪ್ರೀ ವೆಡ್ಡಿಂಗ್ ಶೂಟಿಂಗ್ (Pre Wedding Shoot) ಮಾಡಿಸುತ್ತಾರೆ. ಆದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿದಿಯೋವೊಂದು ಸಖತ್ ಸದ್ದು ಮಾಡುತ್ತಿದೆ. ಇದು ಪ್ರೀ ವೆಡ್ಡಿಂಗ್ ಶೂಟ್ ವಿಡಿಯೋ ಆಗಿದೆ. ಪ್ರೀ ವೆಡ್ಡಿಂಗ್ ಶೂಟ್‌ಗಾಗಿ ವಧು ಜಿಮ್‌ಗೆ ಹೋಗಿದ್ದಾರೆ. ಹೌದು! ಇದು ವಿಚಿತ್ರವಾದರೂ ಸತ್ಯ. 


ಮದುವೆಗೆ ಮುಂಚಿನ, ಪ್ರೀ ವೆಡ್ಡಿಂಗ್ ಶೂಟ್‌ಗಾಗಿ ವಧು-ವರರು ಗುಡ್ಡಗಾಡು ಪ್ರದೇಶಗಳು, ಉದ್ಯಾನವನಗಳು, ಬೀಚ್‌ಗಳಂತಹ ಸುಂದರವಾದ ಸ್ಥಳಗಳಿಗೆ ಹೋಗಲು ಬಯಸುತ್ತಾರೆ. ಆದರೆ, ಇಲ್ಲೊಬ್ಬ ವಧು ಪ್ರೀ ವೆಡ್ಡಿಂಗ್ ಶೂಟ್ ಮಾಡಲು ಜಿಮ್ ಆಯ್ಕೆ ಮಾಡಿಕೊಂಡಿದ್ದಾಳೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ 


ಪ್ರೀ ವೆಡ್ಡಿಂಗ್ ಶೂಟ್‌ಗಾಗಿ ಜನರು ಸುಂದರ ಸ್ಥಳಗಳಿಗೆ ಹೋಗುವುದು ಸಹಜ. ಆದರೆ ಇಲ್ಲಿ ಒಂದು ಮದುವೆ ಹುಡುಗಿ ಜಿಮ್‌ಗೆ ಹೋಗಿದ್ದಾಳೆ. ಈ ವೀಡಿಯೊವನ್ನು ಪ್ರಸ್ತುತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೀಕ್ಷಿಸಲಾಗುತ್ತಿದೆ. ಈ ವಿಡಿಯೋವನ್ನು ಐಪಿಎಸ್ ರೂಬಿನ್ ಶರ್ಮಾ ತಮ್ಮ ಟ್ವಿಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಹಂಚಿಕೊಂಡ ಅವರು, 'ಪ್ರೀ ವೆಡ್ಡಿಂಗ್ ಶೂಟ್.. ಇಂದು ಅವರ ಧೈರ್ಯದ ಗುಟ್ಟು ಗೊತ್ತಾಗಿದೆ' ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ- Viral Video: ಗಡ್ಡದಿಂದ 63 ಕೆಜಿ ಮಹಿಳೆ ಎತ್ತಿ ಗಿನ್ನಿಸ್ ರೆಕಾರ್ಡ್ ಮಾಡಿದ ಭೂಪ..!


ಪ್ರೀ ವೆಡ್ಡಿಂಗ್ ಶೂಟ್‌ನ ಈ ತಮಾಷೆಯ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ ಮತ್ತು ಬಹಳಷ್ಟು ನೆಟಿಜನ್‌ಗಳು ತಮ್ಮ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 


ಸುಮಾರು ಅರ್ಧ ನಿಮಿಷದ ಈ ವಿಡಿಯೋ ವೈರಲ್ (Wedding Viral Video) ಆಗುತ್ತಿದೆ. ಅದರಲ್ಲಿ ಮದುಮಗಳು ಪ್ರೀ ವೆಡ್ಡಿಂಗ್ ಶೂಟ್‌ಗಾಗಿ ಸುಂದರವಾಗಿ ತಯಾರಾಗಿದ್ದು ಜಿಮ್‌ ಸಲಕರಣೆಗಳು ಹಿಡಿದು ಫೋಟೋ ಶೂಟ್ ನಡೆಸಿದ್ದಾರೆ. ವಧುವಿನ ಅಲಂಕಾರದಲ್ಲಿ ಜಿಮ್‌ನಲ್ಲಿ ಭಾರವಾದ ಡಂಬ್ಬೆಲ್‌ಗಳನ್ನು ಎತ್ತುತ್ತಾ, ತನ್ನ ತೋಳ್ಬಲವನ್ನು ತೋರಿಸುತ್ತಿರುವ ವಧುವಿನ ವಿಡಿಯೋ ಕಂಡು ನಿಮಗೂ ಆಶ್ಚರ್ಯವಾಗಬಹುದು. ಈ ವೇಳೆ ಕ್ಯಾಮರಾಮನ್ ಅವರ ಛಾಯಾಗ್ರಹಣದಲ್ಲಿ ನಿರತರಾಗಿದ್ದಾರೆ.


ವೀಡಿಯೊದ ಎರಡನೇ ಫ್ರೇಮ್‌ನಲ್ಲಿ, ವಧು ಮತ್ತೆ ವ್ಯಾಯಾಮ ಮಾಡುವುದನ್ನು ಕಾಣಬಹುದು. ಮೂರನೇ ಚೌಕಟ್ಟಿನಲ್ಲಿ, ವಧು ವ್ಯಾಯಾಮವನ್ನು ನೋಡುವುದು ತುಂಬಾ ವಿನೋದ ಮತ್ತು ಆಶ್ಚರ್ಯಕರವಾಗಿದೆ.


ನೀವು ಆ ವೀಡಿಯೊವನ್ನು ಇಲ್ಲಿ ವೀಕ್ಷಿಸಬಹುದು:


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.