Viral Video : ಮದುವೆಗೆ ಬಂದ ಕುಟುಂಬಸ್ಥರು, ಸ್ನೇಹಿತರ ಮುಂದೆಯೇ ಹೊಡೆದಾಡಿಕೊಂಡ ವಧು ಮತ್ತು ಮೈದುನ
ಈ ವಿಡಿಯೋದಲ್ಲಿ ಮದುವೆಯ ಸಂದರ್ಭದ ಆಚರಣೆಯನ್ನು ಚಿತ್ರೀಕರಿಸಲಾಗಿದೆ. ಇದರಲ್ಲಿ ಅತ್ತಿಗೆ ಮತ್ತು ಮೈದುನ ಪರಸರ ಹೊಡೆಯುವ ದೃಶ್ಯವನ್ನು ಕಾಣಬಹುದು.
ನವದೆಹಲಿ: ಅತ್ತಿಗೆ ಮೈದುನನ ಸಂಬಂಧ ಅತ್ಯಂತ ಪವಿತ್ರವಾದದ್ದು ಎಂದು ಹೇಳಲಾಗಿದೆ. ಈ ಸಂಬಂಧದಲ್ಲಿ ಪ್ರೀತಿ ಮತ್ತು ಗೌರವ ಇರುತ್ತದೆ. ಇದರ ಜೊತೆ ಜಗಳವೂ ಇರುತ್ತದೆ. ಅತ್ತಿಗೆ ಮತ್ತು ಮೈದುನನ ಇಂಥದ್ದೇ ಒಂದು ವೀಡಿಯೊ ವೈರಲ್ (Viral video) ಆಗುತ್ತಿದೆ. ಇದು ಮದುವೆ ದಿನದ ವಿಡಿಯೋ. ಮದುವೆ ಮನೆಯಲ್ಲಿ ಹಾಡು, ನೃತ್ಯ,ತಮಾಷೆ ಇವೆಲ್ಲವೂ ಸಾಮಾನ್ಯವಾಗಿರುತ್ತವೆ. ಕೆಲವೊಮ್ಮೆ ಸಣ್ಣ ಸಣ್ಣ ತುಂಟಾಟಗಳು ಕೂಡಾ ನಡೆಯುತ್ತವೆ. ಭಾರತದಲ್ಲಿ ಹಲವು ರೀತಿಯ ಆಚರಣೆಗಳನ್ನು ನಡೆಸಲಾಗುತ್ತದೆ. ನಮ್ಮದು ವೈವಿಧ್ಯತೆಗಳಿಂದ ಕೂಡಿರುವ ದೇಶವಾಗಿದೆ. ಇಲ್ಲಿ ಪ್ರತಿಯೊಂದು ಪ್ರದೇಶದ ಆಚರಣೆಗಳು ಭಿನ್ನವಾಗಿರುತ್ತವೆ.
ಅತ್ತಿಗೆ ಮೈದುನ ಜಗಳ :
ನಿರಂಜನ್ ಮಹಾಪಾತ್ರ ಎಂಬ ವ್ಯಕ್ತಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ (Social media) ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮದುವೆಯ ಸಂದರ್ಭದ ಆಚರಣೆಯನ್ನು ಚಿತ್ರೀಕರಿಸಲಾಗಿದೆ. ಇದರಲ್ಲಿ ಅತ್ತಿಗೆ ಮತ್ತು ಮೈದುನ ಪರಸರ ಹೊಡೆಯುವ ದೃಶ್ಯವನ್ನು ಕಾಣಬಹುದು. ಇದು ಉತ್ತರಭಾರತದ ಕಡೆ ಮದುವೆ ನಂತರ ನಡೆಯುವ ಆಚರಣೆ. ಈ ಆಚರಣೆ ತಮಾಷೆಯಾಗಿ ನಡೆಯುತ್ತದೆ. ಆದರೆ ಇಲ್ಲಿ ತಮಾಷೆಯಾಗಿಯೇ ಆರಂಭವಾದರೂ, ನೋಡು ನೋಡುತ್ತಿದ್ದ ಹಾಗೆ, ಮೈದುನ ಅತ್ತಿಗೆಗೆ ಅಂದರೆ ವಧುವಿಗೆ ನಿಜವಾಗಿಯೂ ಹೊಡೆಯಲು ಶುರು ಮಾಡುತ್ತಾನೆ.
ಇದನ್ನೂ ಓದಿ : Viral Video: ಸೈಕಲ್ ನಲ್ಲಿ ಸುತ್ತಾತಕ್ಕೆ ಹೊರಟ ಜೋಡಿ, ಮಧ್ಯೆ ತಪ್ಪಿಯೇ ಬಿಟ್ಟಿತ್ತು ಬ್ಯಾಲೆನ್ಸ್
ಬೆತ್ತ ಬೀಸಿದ ಅತ್ತಿಗೆ :
ಮೈದುನ ಈ ರೀತಿ ಹೊಡೆದರೆ ಅತ್ತಿಗೆ ಸುಮ್ಮನಿರುತ್ತಾಳೆಯೇ ? ಅತ್ತಿಗೆ ಕೂಡ ಮೈದುನನಿಗೆ ಸರಿಯಾಗಿಯೇ ಬಾರಿಸುತ್ತಾಳೆ. ಇದು ಮದುವೆಯ (Marriage) ಆಚರಣೆಯ ಒಂದು ಭಾಗವಾಗಿರಬಹುದು. ಆದರೆ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಇಷ್ಟಪಡುತ್ತಿದ್ದಾರೆ. ಈ ವಿಡಿಯೋ ತೀವ್ರ ವೈರಲ್ (Vial video) ಆಗುತ್ತಿದೆ.
ಈ ವಿಡಿಯೋ ವೀಕ್ಷಿದ ಜನರು ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದೊಂದು ಹುಚ್ಚುತನ ಎಂದರೆ ಇನ್ನು ಕೆಲವರು ಈ ಆಚರಣೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Viral video : ಮದುವೆಯಲ್ಲಿ ಹಾರ ಬದಲಾಯಿಸುವ ವೇಳೆ ವರ ಮಾಡಿರುವ ಕೆಲಸದಿಂದ ವಧುವಿಗೂ ಫುಲ್ ಟೆನ್ಶನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ