Viral Video : ವಧುವನ್ನು ನೋಡಿ ಗಳಗಳನೆ ಅತ್ತ ವರ; ಮದುವೆಗೆ ಬಂದವರಿಗಂತೂ ನಗುವೋ ನಗು

ಈ ವಿಡಿಯೋ ಸಾಮಾಜಿಕ ಜಾಲತಾಣ (Social media) ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. ಇದು  ಮದುವೆಯ ವಿಧಿವಿಧಾನಗಳು ಆರಂಭವಾಗುವ ಮೊದಲ ವಿಡಿಯೋ

Written by - Ranjitha R K | Last Updated : Aug 23, 2021, 08:12 PM IST
  • ಮದುವೆಯ ಮತ್ತೊಂದು ವೀಡಿಯೋ ವೈರಲ್
  • ವಧುವನ್ನು ನೋಡಿದ ವರನಿಗೆ ಆಶ್ಚರ್ಯ, ಸಂತೋಷ
  • ವಧುವಿನ ಮುಂದೆ ಮಂಡಿಯೂರಿದ ವರ
Viral Video : ವಧುವನ್ನು ನೋಡಿ ಗಳಗಳನೆ ಅತ್ತ ವರ; ಮದುವೆಗೆ ಬಂದವರಿಗಂತೂ ನಗುವೋ ನಗು   title=
ಮದುವೆಯ ಮತ್ತೊಂದು ವೀಡಿಯೋ ವೈರಲ್ (photo instagram)

ನವದೆಹಲಿ : ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದ್ದು, ವಧುವನ್ನು ನೋಡುತ್ತಿದ್ದಂತೆ  ವರ ಅಳಲು ಆರಂಭಿಸಿದ್ದಾನೆ. ಇಲ್ಲಿ ವರನ ಅಳು ಅವನ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ವಧುವಿನ ಉಡುಪಿನಲ್ಲಿ ತನ್ನ ಗೆಳತಿಯನ್ನು ಮೊದಲ ಬಾರಿಗೆ ನೋಡಿದಾಗ ವರನ ಕಣ್ಣಲ್ಲಿ ನೀರು ತುಂಬಿದೆ. ವಧು ಮಂಟಪಕ್ಕೆ ಬರುತ್ತಿದ್ದಂತೆಯೇ ವಧುವನ್ನೇ ಆಶ್ಚರ್ಯದಿಂದ ನೋಡುತ್ತಾನೆ ವರ. 

ವಧುವನ್ನು ನೋಡಿದ ವರನಿಗೆ ಆಶ್ಚರ್ಯ, ಸಂತೋಷ : 
ಈ ವಿಡಿಯೋ ಸಾಮಾಜಿಕ ಜಾಲತಾಣ (Social media) ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. ಇದು  ಮದುವೆಯ ವಿಧಿವಿಧಾನಗಳು ಆರಂಭವಾಗುವ ಮೊದಲ ವಿಡಿಯೋ. ಈ ವೀಡಿಯೊದಲ್ಲಿ, (Video) ವಧು ವೇದಿಕೆಗೆ ಆಗಮಿಸಿದ್ದಾಳೆ. ಈ ಸಂದರ್ಭದಲ್ಲಿ ವಧುವನ್ನು ನೋಡಿ ವರ ಆಶ್ಚರ್ಯಗೊಂಡಿದ್ದಾನೆ.   

 
 
 
 

 
 
 
 
 
 
 
 
 
 
 

A post shared by WedWise.co.in (@wedwise)

 

ಇದನ್ನೂ ಓದಿ : Viral Video: ನೆಗೆನೆಗೆದು ಅಚ್ಚರಿ ಮೂಡಿಸಿದ ಪಿಂಕ್ ಡಾಲ್ಫಿನ್..!

ತನ್ನ ಗೆಳತಿಯನ್ನು ವಧುವಿನ ಶೃಂಗಾರದಲ್ಲಿ,   ಧಿರಿಸಿನಲ್ಲಿ ನೋಡಿದ ವರನಿಗೆ ತನ್ನ  ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಳುವನ್ನು ತಡೆಯುವಂತೆ ಕಂಡು ಬಂದರೂ ಕಣ್ಣಂಚಲ್ಲಿ ನೀರು ಜಿನುಗುವುದು ಕಾಣಿಸುತ್ತದೆ.   

 ವಧುವಿನ ಮುಂದೆ ಮಂಡಿಯೂರಿದ ವರ : 
ವಧುವನ್ನು ನೋಡಿದ ವರನ ಕಣ್ಣಲ್ಲಿ ನೀರು ಕಾಣಿಸುತ್ತದೆ. ಕಣ್ಣೀರನ್ನು ಒರೆಸಿದ ನಂತರ, ಅವನು ವಧುವಿನ (Bride) ಮುಂದೆ ಬಂದು ಮಂಡಿಯೂರಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ನಂತರ ಮದುವೆಯ ವಿಧಿವಿಧಾನಗಳು ನೆರೆವೇರುತ್ತವೆ. ಮದುವೆ (Marriage) ಸಮಾರಂಭದಲ್ಲಿ ಹಾಜರಿದ್ದ ಎಲ್ಲ ಅತಿಥಿಗಳು ವರ ತನ್ನ ಭಾವನೆಗಳನ್ನು ಈ ರೀತಿ ವ್ಯಕ್ತಪಡಿಸುವುದನ್ನು ನೋಡಿ ನಗಲು ಪ್ರಾರಂಭಿಸುತ್ತಾರೆ. ಈ ವಿಡಿಯೋ ತುಂಬಾ ವೈರಲ್ (Viral video) ಆಗುತ್ತಿದೆ ಮತ್ತು ಜನರು ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ.

ಇದನ್ನೂ ಓದಿ : Wedding Video : ಸ್ಕರ್ಟ್ ತೊಟ್ಟು Wedding ಫೋಟೋ ಶೂಟ್ ಮಾಡಿಸಿದ ವಧು : ಫೋಟೋ ನೋಡಿದ ನೆಟ್ಟಿಗರು ಫೈಲ್ ಫಿದಾ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News