ಈ ಯೋಜನೆಯಲ್ಲಿ 500 GB ಡೇಟಾ ನೀಡುತ್ತಿದೆ BSNL; ಅದರ ಬೆಲೆ, ಸಿಂಧುತ್ವದ ಬಗ್ಗೆ ಇಲ್ಲಿದೆ ಮಾಹಿತಿ
BSNL offer recharge plan: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ನ ಈ ವಿಶೇಷ ಯೋಜನೆಯ ಹೊರತಾಗಿ, ಅನೇಕ ಹೊಸ ಟ್ಯಾರಿಫ್ ಪ್ಲಾನ್ ಗಳನ್ನೂ ಸಹ ಪ್ರಾರಂಭಿಸಲಾಗಿದೆ.
ನವದೆಹಲಿ: ದೇಶದ ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ವಿಶೇಷ ಯೋಜನೆಯಡಿ 500 ಜಿಬಿ ಡೇಟಾವನ್ನು ಒದಗಿಸುತ್ತಿದೆ. ವಾಸ್ತವವಾಗಿ, ಬಿಎಸ್ಎನ್ಎಲ್ ಎರಡು ಹೊಸ ವಿಶೇಷ ಟ್ಯಾರಿಫ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಟ್ಯಾರಿಫ್ ಪ್ಲಾನ್ಗಳು ಉಳಿದವುಗಳಿಗಿಂತ ಭಿನ್ನವಾಗಿದ್ದು ಇವು ಡೇಟಾದ ಪ್ರಯೋಜನವನ್ನು ಮಾತ್ರ ನೀಡುತ್ತದೆ. ಕಂಪನಿಯು 693 ರೂ.ಗಳ ಟ್ಯಾರಿಫ್ ವೋಚರ್ ಮತ್ತು 1212 ರೂ.ಗಳ ಟ್ಯಾರಿಫ್ ವೋಚರ್ ಅನ್ನು ಲಾಂಚ್ ಮಾಡಿದೆ.
ಈ ಯೋಜನೆಯಲ್ಲಿ ಸಿಗಲಿದೆ 500 GB ಡಾಟಾ:
ಬಿಎಸ್‌ಎನ್‌ಎಲ್‌ನ ಹೊಸ 1212 ರೂ. ಗಳ ಟ್ಯಾರಿಫ್ ವೋಚರ್ ಗ್ರಾಹಕರಿಗೆ 500 ಜಿಬಿ ಡೇಟಾ ಸಿಗಲಿದೆ. ಟೆಲಿಕಾಂಟಾಕ್ ಪ್ರಕಾರ, ಈ ಯೋಜನೆಯ ಸಿಂಧುತ್ವವು 365 ದಿನಗಳವರೆಗೆ ಇರುತ್ತದೆ. ಇದಲ್ಲದೆ 693 ರೂ.ಗಳ ಯೋಜನೆಯಲ್ಲಿ ಗ್ರಾಹಕರಿಗೆ 300 GB ಡೇಟಾ ಲಾಭ ಸಿಗಲಿದೆ. ಈ ಸುಂಕದ ಸಿಂಧುತ್ವವು ಸಹ 365 ದಿನಗಳು. ಲಭ್ಯವಾದ ಮಾಹಿತಿ ಪ್ರಕಾರ, ಈ ಎರಡು ಯೋಜನೆಗಳಲ್ಲಿ ಗ್ರಾಹಕರು ಕರೆ ಮತ್ತು ಎಸ್‌ಎಂಎಂ ಪ್ರಯೋಜನಗಳನ್ನು ಸಹ ಪಡೆಯುತ್ತಿದ್ದಾರೆ.
ಮಲೆನಾಡು ಪ್ರದೇಶಗಳಲ್ಲಿ BSNL ಟವರ್ ಸಿಗ್ನಲ್ ಸಮಸ್ಯೆ ಕುರಿತು ಸಂಸತ್ತಿನಲ್ಲಿ ದನಿ ಎತ್ತಿದ ಸಂಸದ ಬಿವೈಆರ್
ಆದರೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharat Sanchar Nigam Limited) ಈಗ ಈ ಯೋಜನೆಗಳನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ವಲಯದಲ್ಲಿ ಮಾತ್ರ ಪ್ರಾರಂಭಿಸಿದೆ. ಇದಕ್ಕಾಗಿ ಬಿಎಸ್‌ಎನ್‌ಎಲ್ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಯೋಜನೆಗಳಲ್ಲದೆ, ಬಿಎಸ್‌ಎನ್‌ಎಲ್ ಇನ್ನೂ ಮೂರು ಯೋಜನೆಗಳನ್ನು ಪ್ರಾರಂಭಿಸಿದೆ:
ಬಿಎಸ್‌ಎನ್‌ಎಲ್‌ನ ಇನ್ನೂ ಮೂರು ಹೊಸ ಯೋಜನೆಗಳನ್ನು 98, 298 ಮತ್ತು 1999 ರೂ.ಗಳಿಗೆ ಪರಿಚಯಿಸಲಾಗಿದೆ. ಸುದ್ದಿಗಳ ಪ್ರಕಾರ, ಈ ಯೋಜನೆಗಳ ಸಿಂಧುತ್ವವು ಕ್ರಮವಾಗಿ 24 ದಿನಗಳು, 54 ದಿನಗಳು ಮತ್ತು 365 ದಿನಗಳು. ಇದರೊಂದಿಗೆ 551 ರೂ.ಗಳ ಇನ್ನೊಂದು ಯೋಜನೆಯನ್ನೂ ಪರಿಚಯಿಸಲಾಗಿದ್ದು, ಇದರಲ್ಲಿ 90 ದಿನಗಳವರೆಗೆ 2 ಜಿ ಮತ್ತು 3 ಜಿ ಡೇಟಾ ಲಭ್ಯವಿರುತ್ತದೆ. ಅಂದರೆ, ಈ ಯೋಜನೆಯಲ್ಲಿ ಒಟ್ಟು 450 ಜಿಬಿ ಡೇಟಾ ಲಭ್ಯವಿರುತ್ತದೆ. ಇದು ಕರೆ ಮತ್ತು ಎಸ್‌ಎಂಎಸ್ ಸೇವೆಯನ್ನೂ ಒಳಗೊಂಡಿದೆ.