ನವದೆಹಲಿ: ಸಾಮಾನ್ಯ ಬಜೆಟ್ 2020 ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. 21ನೇ ಶತಮಾನದ ಮೊದಲ ಬಜೆಟ್ ಆಗಿರುವ ಇದರಲ್ಲಿ ವಿಜನ್ ಕೂಡ ಇದೆ ಮತ್ತು ಆಕ್ಷನ್ ಕೂಡ ಇದೆ ಎಂದು ಹೇಳಿದ್ದಾರೆ. ಸರ್ಕಾರಿ ನೌಕರಿ ಪಡೆಯಲು ಇದಕ್ಕೂ ಮೊದಲು ವಿವಿಧ ಪರೀಕ್ಷೆಗಳನ್ನು ಬರೆಯಬೇಕಾಗುತ್ತಿತ್ತು. ಆದರೆ, ಇದೀಗ ಈ ವ್ಯವಸ್ಥೆಯನ್ನು ಇನ್ನಷ್ಟು ಸುಲಭಗೊಳಿಸಲಾಗಿದ್ದು, ಇನ್ಮುಂದೆ ನ್ಯಾಷನಲ್ ರೆಕ್ರೂಟ್ಮೆಂಟ್ ಏಜೆನ್ಸಿ ಮೂಲಕ ಆನ್ಲೈನ್ ಕಾಮನ್ ಎಕ್ಸಾಮ್ ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದಿದ್ದಾರೆ. ದೇಶದ ಎಲ್ಲಾ ವರ್ಗಗಳಿಗೆ ಅನುಕೂಲಕರ ಬಜೆಟ್ ಮಂಡಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಮನ್ ಹಾಗೂ ಅವರ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಬಜೆಟ್ ಕುರಿತು ಪ್ರಧಾನಿ ಮೋದಿ ಹೇಳಿದ ಪ್ರಮುಖ 10 ಅಂಶಗಳು


  • ರೈತರ ಆದಾಯ ದ್ವಿಗುಣಗೊಳಿಸಲು 16 ಸೂತ್ರಗಳ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದ್ದು, ಗ್ರಾಮೀಣ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಇದು ಸಹಕರಿಸಲಿದೆ.

  • ಕೃಷಿ ಕ್ಷೇತ್ರಕ್ಕೆ ಇಂಟಿಗ್ರೇಟೆಡ್ ಅಪ್ರೋಚ್ ವಿಧಾನ ಅನುಸರಿಸಲಾಗುತ್ತಿದ್ದು, ಇದರಿಂದ ಪಾರಂಪರಿಕ ಪದ್ಧತಿಯ ಕೃಷಿ ಜೊತೆಗೆ ಹರ್ಟಿಕಲ್ಚರ್, ಮತ್ಸ್ಯೋದ್ಯಮ, ಪಶು ಸಂಗೋಪನೆಗಳಲ್ಲಿ ಮೌಲ್ಯವರ್ಧನೆ ಹೆಚ್ಚಾಗಲಿದ್ದು, ಇದರಲ್ಲೂ ಕೂಡ ಉದ್ಯೋಗ ಸೃಷ್ಟಿಯಾಗಲಿದೆ ಎಂದಿದ್ದಾರೆ.

  • ಜವಳಿ ಉದ್ಯಮಕ್ಕೆ ತಾತ್ರಿಕ ಟಚ್ ನೀಡಲು ಯೋಜನೆ ಘೋಷಣೆ ಪ್ರಕಟಿಸಲಾಗಿದೆ.

  • ಆಯುಷ್ಮಾನ್ ಭಾರತ ಯೋಜನೆ ದೇಶದ ಆರೋಗ್ಯ ಕ್ಷೇತ್ರಕ್ಕೆ ಹೊಸ ವಿಸ್ತಾರ ನೀಡಿದೆ.  ಇದರಲ್ಲಿ ಮಾನವ ಸಂಪನ್ಮೂಲಗಳಾಗಿರುವ ಡಾಕ್ಟರ್, ನರ್ಸ್, ಅಟೆಂಡೆಂಟ್ ಗಳ ಜೊತೆಗೆ ಮೆಡಿಕಲ್ ಉಪಕರಣ ತಯಾರಿಕೆಗೆ ಹೆಚ್ಚಿನ ಸ್ಕೋಪ್ ಇದೆ. ಇದಕ್ಕೆ ಉತ್ತೇಜನ ನೀಡಲು ಸರ್ಕಾರ ಹೊಸ ನಿರ್ಣಯಗಳನ್ನು ಘೋಷಿಸಿದೆ.

  • ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲು ಈ ಬಾರಿಯ ಬಜೆಟ್ ನಲ್ಲಿ ಪ್ರಯತ್ನ ನಡೆಸಲಾಗಿದೆ.

  • ನೂತನ ಸ್ಮಾರ್ಟ್ ಸಿಟಿಗಳ ನಿರ್ಮಾಣ, ಇಲೆಕ್ಟ್ರಾನಿಕ್ ಮ್ಯಾನುಫ್ಯಾಕ್ಸ್ಚರಿಂಗ್, ಡೇಟಾ ಸೆಂಟರ್ ಪಾರ್ಕ್, ಬಯೋ ಟೆಕ್ನಾಲಜಿ ಕ್ಷೇತ್ರಗಳಿಗಾಗಿ ಹೊಸ ಪಾಲಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

  • ನೂತನ ಸ್ಟಾರ್ಟ್ ಆಪ್ ಹಾಗೂ ರಿಯಲ್ ಎಸ್ಟೇಟ್ ಗಳಿಗಾಗಿಯೂ ಕೂಡ ತೆರಿಗೆ ಲಾಭ ಪ್ರಕಟಿಸಲಾಗಿದೆ. ಈ ಎಲ್ಲ ನಿರ್ಣಯಗಳಿಂದ ಅರ್ಥ ವ್ಯವಸ್ಥೆಗೆ ಗತಿ ಸಿಗಲಿದೆ.

  • ಆದಾಯ ತೆರಿಗೆ ವ್ಯವಸ್ಥೆಯಲ್ಲಿ 'ವಿವಾದದಿಂದ ವಿಶ್ವಾಸ'ದೆಡೆಗೆ ಸಾಗುತ್ತಿದ್ದೇವೆ.

  • ಸರ್ಕಾರಿ ನೌಕರಿ ಪಡೆಯಲು ಇದಕ್ಕೂ ಮೊದಲು ವಿವಿಧ ಪರೀಕ್ಷೆಗಳನ್ನು ಬರೆಯಬೇಕಾಗುತ್ತಿತ್ತು. ಆದರೆ, ಇದೀಗ ಈ ವ್ಯವಸ್ಥೆಯನ್ನು ಇನ್ನಷ್ಟು ಸುಲಭಗೊಳಿಸಲಾಗಿದ್ದು, ಇನ್ಮುಂದೆ ನ್ಯಾಷನಲ್ ರೆಕ್ರೂಟ್ಮೆಂಟ್ ಏಜೆನ್ಸಿ ಮೂಲಕ ಆನ್ಲೈನ್ ಕಾಮನ್ ಎಕ್ಸಾಮ್ ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.

  • ಈ ಬಾರಿಯ ಬಜೆಟ್ ಆದಾಯದ ಜೊತೆಗೆ ಬಂಡವಾಳ ಕೂಡ ತರಲಿದೆ. ಡಿಮಾಂಡ್ ಮತ್ತು ಕಂಸಂಶನ್ ವೃದ್ಧಿಯಾಗಲಿದೆ. ಈ ಬಾರಿಯ ಬಜೆಟ್ ದೇಶದ ವರ್ತಮಾನದ ಅವಶ್ಯಕತೆಗಳ ಜೊತೆಗೆ ಭವಿಷ್ಯದ ಅಪೇಕ್ಷೆಗಳನ್ನೂ ಕೂಡ ಪೂರ್ಣಗೊಳಿಸಲಿದೆ.