ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ, ನಿರ್ಮಲಾ ಸೀತಾರಾಮನ್ ಅನೇಕ ದೊಡ್ಡ ಘೋಷಣೆಗಳನ್ನು ಮಾಡಿದರು. ಇದು ಬ್ಯಾಲೆನ್ಸ್ ಬಜೆಟ್ ಎಂದು ತಜ್ಞರು ಕರೆದಿದ್ದಾರೆ. ಬಗ್ಗೆ ಪ್ರತಿಕ್ರಿಯೆ ನೀಡಿರುವ  ಪ್ರಧಾನಿ ಮೋದಿ(PM Modi), ಈ ಬಜೆಟ್ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಬಜೆಟ್‌ನ ಪ್ರಮುಖ ಅಂಶವೆಂದರೆ ಬಡವರ ಕಲ್ಯಾಣ. 100 ವರ್ಷಗಳ ತೀವ್ರ ದುರಂತದ ನಡುವೆಯೂ ಈ ಬಜೆಟ್ ಅಭಿವೃದ್ಧಿಯ ಹೊಸ ವಿಶ್ವಾಸವನ್ನು ತಂದಿದೆ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಮ್ಮ ಸೇವೆಯ ಉತ್ಸಾಹವು ಅನೇಕ ಪಟ್ಟು ಹೆಚ್ಚಾಯಿತು


ಈ ಬಜೆಟ್(Budget 2022) ಹೆಚ್ಚಿನ ಮೂಲಸೌಕರ್ಯ, ಹೆಚ್ಚಿನ ಹೂಡಿಕೆ, ಹೆಚ್ಚಿನ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗಗಳ ಹೊಸ ಸಾಧ್ಯತೆಗಳಿಂದ ತುಂಬಿದೆ. ಇದರಿಂದ ಗ್ರೀನ್ ಜಾಬ್ಸ್ ಕ್ಷೇತ್ರವೂ ತೆರೆದುಕೊಳ್ಳುತ್ತದೆ. ಕಳೆದ ಕೆಲವು ಗಂಟೆಗಳಿಂದ ನಾನು ನೋಡುತ್ತಿದ್ದೇನೆ, ಈ ಬಜೆಟ್ ಅನ್ನು ಪ್ರತಿ ಕ್ಷೇತ್ರದಲ್ಲೂ ಸ್ವಾಗತಿಸುತ್ತಿರುವ ರೀತಿ, ಜನಸಾಮಾನ್ಯರಿಂದ ಬಂದ ಸಕಾರಾತ್ಮಕ ಪ್ರತಿಕ್ರಿಯೆಯು ಜನರ ಸೇವೆ ಮಾಡುವ ಉತ್ಸಾಹವನ್ನು ಹೆಚ್ಚಿಸಿದೆ.


ಇದನ್ನೂ ಓದಿ : Union Budget 2022: ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ಅವಧಿ ಎಷ್ಟು..?


ಪ್ರತಿ ಬಡವನಿಗೂ ಪಕ್ಕಾ ಮನೆ


ಪ್ರತಿಯೊಬ್ಬ ಬಡವರಿಗೂ ಪಕ್ಕಾ ಮನೆ ಇರಬೇಕು, ನಲ್ಲಿಯಲ್ಲಿ ನೀರು(Water) ಬರಬೇಕು, ಶೌಚಾಲಯ, ಗ್ಯಾಸ್ ಸೌಲಭ್ಯ ಇರಬೇಕು, ಇವೆಲ್ಲಕ್ಕೂ ವಿಶೇಷ ಗಮನ ಹರಿಸಲಾಗಿದೆ ಎಂದರು. ಇದರೊಂದಿಗೆ ಆಧುನಿಕ ಇಂಟರ್ನೆಟ್ ಸಂಪರ್ಕಕ್ಕೂ ಅಷ್ಟೇ ಒತ್ತು ನೀಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಹಿಮಾಚಲ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮುಂತಾದ ಪ್ರದೇಶಗಳಿಗೆ ಪರ್ವತಮಾಲಾ ಯೋಜನೆಯನ್ನು ಆರಂಭಿಸಲಾಗುತ್ತಿದೆ.


ಪರ್ವತಗಳ ಮೇಲೆ ಆಧುನಿಕ ಸಾರಿಗೆ ವ್ಯವಸ್ಥೆ


ಈ ಯೋಜನೆಯು ಪರ್ವತಗಳಲ್ಲಿ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ರಚಿಸುತ್ತದೆ. ಈ ಬಾರಿಯ ಬಜೆಟ್(Union Budget 2022) ನಲ್ಲಿ ಸಾಲದ ಗ್ಯಾರಂಟಿಯಲ್ಲಿ ದಾಖಲೆಯ ಹೆಚ್ಚಳದ ಜತೆಗೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಭಾರತದ MSME ವಲಯವು ರಕ್ಷಣಾ ಬಂಡವಾಳದ ಬಜೆಟ್‌ನ 68% ಅನ್ನು ದೇಶೀಯ ಉದ್ಯಮಕ್ಕೆ ಕಾಯ್ದಿರಿಸುವ ದೊಡ್ಡ ಲಾಭವನ್ನು ಪಡೆಯುತ್ತದೆ.


ಇದನ್ನೂ ಓದಿ : Budget 2022: ಕಾವೇರಿ-ಪೆನ್ನಾರ್ ಸೇರಿ 5 ನದಿ ಜೋಡಣೆ ಯೋಜನೆಗಳ ಘೋಷಣೆ


ಪಿಎಂ ಮೋದಿ ಬುಧವಾರ ಬಜೆಟ್ ಕುರಿತು ಭಾಷಣ


ನಾಳೆ ಅಂದರೆ ಬುಧವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮತ್ತು ಸ್ವಾವಲಂಬಿ ಭಾರತ ವಿಷಯದ ಕುರಿತು ಮಾತನಾಡಲು ಬಿಜೆಪಿ ನನ್ನನ್ನು ಆಹ್ವಾನಿಸಿದೆ ಎಂದು ಹೇಳಿದರು. ಬುಧವಾರ ಬಜೆಟ್ ಮೇಲೆ ವಿವರವಾಗಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.