Budget 2022: ಕಾವೇರಿ-ಪೆನ್ನಾರ್ ಸೇರಿ 5 ನದಿ ಜೋಡಣೆ ಯೋಜನೆಗಳ ಘೋಷಣೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಕಾವೇರಿ-ಪೆನ್ನಾರ್ ಸೇರಿ 5 ನದಿ ಜೋಡಣೆ ಯೋಜನೆಯನ್ನು ಘೋಷಿಸಿದ್ದಾರೆ.

Written by - Zee Kannada News Desk | Last Updated : Feb 1, 2022, 01:17 PM IST
  • 2022-23ನೇ ಸಾಲಿನ ಬಜೆಟ್ ನಲ್ಲಿ ನದಿ ಯೋಜನೆಗಳ ಬಗ್ಗೆ ಹಲವು ಪ್ರಮುಖ ಘೋಷಣೆ
  • ಕಾವೇರಿ-ಪೆನ್ನಾರ್ ಸೇರಿ 5 ಪ್ರಮುಖ ನದಿ ಜೋಡಣೆ ಯೋಜನೆಗಳ ಘೋಷಣೆ
  • ಮಧ್ಯಪ್ರದೇಶದ ಕೆನ್-ಬಾತ್ವಾ ನದಿ ಜೋಡಣೆಗೆ ಕೇಂದ್ರ ಸರ್ಕಾರದಿಂದ 44,605 ಕೋಟಿ ರೂ. ನೆರವು
Budget 2022: ಕಾವೇರಿ-ಪೆನ್ನಾರ್ ಸೇರಿ 5 ನದಿ ಜೋಡಣೆ ಯೋಜನೆಗಳ ಘೋಷಣೆ title=
5 ಪ್ರಮುಖ ನದಿ ಜೋಡಣೆ ಯೋಜನೆಗಳ ಘೋಷಣೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman)ಅವರು ಇಂದು ಸಂಸತ್ತಿನಲ್ಲಿ 2022-23ನೇ ಸಾಲಿನ ಬಜೆಟ್(Budget 2022) ಮಂಡಿಸಿದ್ದಾರೆ. ಇದರಲ್ಲಿ ಅವರು ನದಿ ಯೋಜನೆಗಳ ಬಗ್ಗೆ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.  

ಕಾವೇರಿ-ಪೆನ್ನಾರ್ ಸೇರಿ 5 ನದಿ ಜೋಡಣೆ ಯೋಜನೆ 

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣ(Union Budget 2022)ದಲ್ಲಿ ಕಾವೇರಿ-ಪೆನ್ನಾರ್ ಸೇರಿ 5 ನದಿ ಜೋಡಣೆ ಯೋಜನೆಯನ್ನು ಘೋಷಿಸಿದ್ದಾರೆ. ಕಾವೇರಿ-ಪೆನ್ನಾರ್(Cauvery-Pennar Link Project), ಧಮನ್ ಗಂಗಾ-ಪಿಂಜಾಲ್, ಪರ್ ತಾಪಿ-ನರ್ಮದಾ, ಗೋದಾವರಿ-ಕೃಷ್ಣ ಹಾಗೂ ಕೃಷ್ಣಾ-ಪೆನ್ನಾರ್ ಈ 5 ನದಿ ಜೋಡಣೆ ಯೋಜನೆಗಳಿಗೆ ಡಿಪಿಆರ್ ಗೆ ಸಮ್ಮತಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.  ಈ ನದಿಗಳನ್ನು ಜೋಡಿಸಲಾಗುತ್ತದೆ ಎಂದು ಹೇಳಿರುವ ಅವರು, ಫಲಾನುಭವಿ ರಾಜ್ಯಗಳ ಒಪ್ಪಿಗೆ ಬಳಿಕ ಅವುಗಳ ಜಾರಿಗೆ ನೆರವು ನೀಡಲಾಗುವುದು ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: Budget 2022 ಮಂಡನೆಗೂ ಮುನ್ನ ಸಂತಸದ ಸುದ್ದಿ ಪ್ರಕಟಿಸಿದ ಬ್ಯಾಂಕ್ ಗಳು, Fixed Deposit ಬಡ್ಡಿ ದರ ಹೆಚ್ಚಳ

ಕೆನ್-ಬಾತ್ವಾ ಜೋಡಣೆಗೆ 44,605 ಕೋಟಿ ರೂ.

ಮಧ್ಯಪ್ರದೇಶದ ಕೆನ್-ಬಾತ್ವಾ ನದಿ ಜೋಡಣೆ(Ken-Betwa River Interlinking Project)ಗೆ ಕೇಂದ್ರ ಸರ್ಕಾರವು ಬರೋಬ್ಬರಿ 44,605 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದೆ. ಇದರಿಂದ 9 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ನೀರು ಸಿಗಲಿದೆ.

ಇದನ್ನೂ ಓದಿ: Budget 2022: ಈ ಬಜೆಟ್ ಅಧಿವೇಶನದಲ್ಲಿ ತೆರಿಗೆ ಪಾವತಿದಾರರಿಗೆ ಸಿಗಲಿದೆ ಈ ಸಂತಸದ ಸುದ್ದಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News