Mansukh Mandaviya rides Bicycle: ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದ್ದು, ಇಡೀ ದೇಶದ ಕಣ್ಣು ಪ್ರಜಾಪ್ರಭುತ್ವದ ಮಂದಿರದ ಮೇಲೆ ನೆಟ್ಟಿದೆ. ಈ ಸಂದರ್ಭದಲ್ಲಿ ರಾಜಕಾರಣಿಗಳು ತಮ್ಮದೇ ಆದ ರೀತಿಯಲ್ಲಿ ಜನರಿಗೆ ತಮ್ಮ ಸಂದೇಶವನ್ನು ತಿಳಿಸುತ್ತಿದ್ದಾರೆ. ಈ ಸಂಚಿಕೆಯಲ್ಲಿ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ  (Union Health Minister Mansukh Mandaviya) ಅವರು ಬುಧವಾರ ಸೈಕಲ್ ಮೂಲಕ ಸಂಸತ್ತಿಗೆ ತಲುಪಿದರು. ಇದು ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಂದೇಶ ಎಂಬುದು ಸ್ಪಷ್ಟವಾಗಿದೆ. 


COMMERCIAL BREAK
SCROLL TO CONTINUE READING

ಕೇಂದ್ರ ಸಚಿವರು ಏಕಾಏಕಿ ಸೈಕಲ್ ನಲ್ಲಿ ಪಾರ್ಲಿಮೆಂಟ್  (Rides Bicycle to Parliament)  ಕ್ಯಾಂಪಸ್ ಪ್ರವೇಶಿಸಿದ್ದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಸುದ್ದಿ ಸಂಸ್ಥೆ ಎಎನ್‌ಐ ಕೂಡ ಕೇಂದ್ರ ಸಚಿವರು ಸೈಕಲ್ ಸವಾರಿ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿದೆ.  


PM Narendra Modi : 3 ಕೋಟಿ ಬಡವರನ್ನು ಲಕ್ಷಪತಿಗಳನ್ನಾಗಿ ಮಾಡಲಾಗಿದೆ : ಪ್ರಧಾನಿ ಮೋದಿ 


ಕೇಂದ್ರ ಆರೋಗ್ಯ ಸಚಿವ  ಮನ್ಸುಖ್ ಮಾಂಡವೀಯ  (Union Health Minister Mansukh Mandaviya) ಅವರು ಬೈಸಿಕಲ್ನಲ್ಲಿ ಸಂಸತ್ತಿಗೆ ಬಂದಿರುವುದು ಇದೇ ಮೊದಲೇನಲ್ಲ. ಅವರು ಈ ಹಿಂದೆಯೂ ಹಲವು ಬಾರಿ ಸೈಕಲ್ ಸವಾರಿ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಅವರು ಸೈಕಲ್‌ನಲ್ಲಿ ರಾಷ್ಟ್ರಪತಿ ಭವನಕ್ಕೆ ಬಂದಿದ್ದರು. ಅವರನ್ನು ಸಂಸತ್ತಿನಲ್ಲಿ ಬೈಸಿಕಲ್ ಎಂಪಿ ಎಂದೂ ಕರೆಯುತ್ತಾರೆ.


ಇದನ್ನೂ ಓದಿ- WATCH: ಫೋಟೋ ತೆಗೆಯುತ್ತಿದ್ದವರ ಮೇಲೆ ಅಟ್ಯಾಕ್ ಮಾಡಿದ ಘೇಂಡಾಮೃಗ


ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31 ರಿಂದ ಆರಂಭವಾಗಿದೆ. ಕೊರೊನಾ ಸೋಂಕಿನಿಂದಾಗಿ ಸಂಸತ್ತು, ಲೋಕಸಭೆ ಮತ್ತು ರಾಜ್ಯಸಭೆಯ ಉಭಯ ಸದನಗಳ ಸಭೆಗಳ ಸಮಯವನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ. ಉಭಯ ಸದನಗಳಲ್ಲಿ ಪ್ರತಿದಿನ ಐದು ಗಂಟೆ ಕಲಾಪ ಇರುತ್ತದೆ. ಸಂಸತ್ತಿನ ಮೊದಲ ಭಾಗದ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭವಾಗಲಿದ್ದು, ಫೆಬ್ರವರಿ 11ರವರೆಗೆ ನಡೆಯಲಿದೆ. ಅದೇ ಸಮಯದಲ್ಲಿ, ಎರಡನೇ ಭಾಗದ ಬಜೆಟ್ ಅಧಿವೇಶನವು ಮಾರ್ಚ್ 14 ರಿಂದ ಪ್ರಾರಂಭವಾಗಲಿದ್ದು, ಏಪ್ರಿಲ್ 8 ರವರೆಗೆ ನಡೆಯಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.