ಸಾಮಾಜಿಕ ಜಾಲತಾಣಗಳಲ್ಲಿ ಜಂಗಲ್ ಸಫಾರಿಯ ಹಲವು ವಿಡಿಯೋಗಳನ್ನು ನೀವು ನೋಡಿರಬೇಕು. ಈ ವಿಡಿಯೋಗಳಲ್ಲಿ ನೀವು ಅನೇಕ ಬಾರಿ ಕಾಡಿಗೆ ಭೇಟಿ ನೀಡಲು ಬಂದವರ ಮೇಲೆ ಕಾಡು ಪ್ರಾಣಿಗಳು ದಾಳಿ ಮಾಡುವುದನ್ನು ನೋಡಿರಬೇಕು. ಇಂದು ನಾವು ನಿಮಗೆ ಅಂತಹ ಒಂದು ವಿಡಿಯೋವನ್ನು (Rhino Attack Video) ತೋರಿಸಲಿದ್ದೇವೆ. ಈ ದೃಶ್ಯ ಮೈ ನವಿರೇಳಿಸುವಂತಿದೆ.
ಇದನ್ನೂ ಓದಿ: ನಿಮ್ಮ ಫೋನ್‌ನಲ್ಲಿ pre-installed ಅಪ್ಲಿಕೇಶನ್‌ಗಳಿಂದ ಬೇಸತ್ತಿದ್ದೀರಾ? delete ಮಾಡುವ ಸುಲಭ ಮಾರ್ಗ ಇಲ್ಲಿದೆ
ಕುಟುಂಬದ ಸದಸ್ಯರು ಜಂಗಲ್ ಸಫಾರಿಗೆ ತೆರಳಿದ್ದಾರೆ. ಈ ಸಮಯದಲ್ಲಿ, ಅವರು ಘೇಂಡಾಮೃಗವನ್ನು ನೋಡಿ ಸಂತೋಷಗೊಂಡಿದ್ದಾರೆ. ಅದರ ಫೋಟೋ ತೆಗೆಯಲು ಮತ್ತು ವಿಡಿಯೋ (Viral Video) ಮಾಡಲು ಪ್ರಾರಂಭಿಸುತ್ತಾರೆ. ಈ ವೇಳೆ ಕುಟುಂಬಸ್ಥರು ಸಖತ್ ಎಂಜಾಯ್ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಕುಟುಂಬಸ್ಥರು ಮಾಡುತ್ತಿರುವ ವಿಡಿಯೋದಿಂದ ಘೇಂಡಾಮೃಗ (Rhino) ಸಿಟ್ಟಿಗೆದ್ದಿರುವುದನ್ನು ಕಾಣಬಹುದು. ಬಳಿಕ ಕುಟುಂಬಸ್ಥರ ಮೇಲೆ ದಾಳಿ ಮಾಡಲು ಯತ್ನಿಸಿದೆ. ಇದರಿಂದ ಪ್ರವಾಸಿಗರು ಭಯಗೊಂಡಿದ್ದು, ಕಾರನ್ನು ಚಾಲಕ ವೇಗವಾಗಿ ಓಡಿಸಿ ರಕ್ಷಿಸಿದ್ದಾರೆ.
Watch: Tourists narrowly escape attack by rhino🦏at Kaziranga National Park Assam.Tourist jeep chased by a full-grown adult rhino for 2km🦏,
Driver Moved jeep skillfully to avoid getting caught by rhino, who can flip it easily with its horn,keep distance
pic.twitter.com/xUxn7BSM20— @PotholeWarriors Foundation #RoadSafety🇮🇳🚙🛵🛣 (@PotholeWarriors) January 24, 2022
ಘೇಂಡಾಮೃಗವು ಜೀಪನ್ನು ಎರಡು ಕಿಲೋಮೀಟರ್‌ಗಳಷ್ಟು ಹಿಂಬಾಲಿಸಿದೆ. ಈ ವೇಳೆ ಕುಟುಂಬಸ್ಥರು ಭಯಭೀತರಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕುಟುಂಬ ಸದಸ್ಯರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ವಿಡಿಯೋವನ್ನು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ (National Park) ಕುರಿತು ಹೇಳಲಾಗುತ್ತಿದೆ. @PotholeWarriors ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಸಂವಿಧಾನದ ಬಗ್ಗೆ ತೆಲಂಗಾಣ ಮುಖ್ಯಮತ್ರಿಯ ವಿವಾದಾತ್ಮಕ ಹೇಳಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.