ಲಕ್ನೋ: ಬುಲಂದ್ ಶಹರ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಯುವಮೋರ್ಚಾ ಮುಖಂಡ ಶಿಖರ್ ಅಗರ್ ವಾಲ್ ಅವರನ್ನು ಪೊಲೀಸರು ಹರ್ ಪುರ್ ನಲ್ಲಿ ಗುರುವಾರ ಬಂಧಿಸಿದ್ದಾರೆ. 


COMMERCIAL BREAK
SCROLL TO CONTINUE READING

ಕಳೆದ ವರ್ಷ ಡಿಸೆಂಬರ್ 3ರಂದು ಗೋಹತ್ಯೆಗೆ ಸಂಬಂಧಿಸಿ ಬುಲಂದ್‌ಶಹರ್‌ನಲ್ಲಿ ಭುಗಿಲೆದ್ದಿದ್ದ ಗಲಭೆಯಲ್ಲಿ  ಪೊಲೀಸ್‌ ಇನ್ಸ್‌ಪೆಕ್ಟರ್‌ ಸುಬೋಧ್‌ ಕುಮಾರ್​​ ಸಿಂಗ್‌(44) ಮತ್ತು ಸುಮಿತ್‌ ಕುಮಾರ್‌(20) ಎಂಬುವರನ್ನು ಜನಸಮೂಹ ಹತ್ಯೆ ಮಾಡಿತ್ತು. ಇದಕ್ಕೆ ಶಿಖರ್‌ ಅಗರ್‌ವಾಲ್‌ ಕುಮ್ಮಕ್ಕು ನೀಡಿದ್ದ ಎನ್ನಲಾಗಿದೆ. 


ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧ 30ಕ್ಕೂ ಹೆಚ್ಚು ಜನರ ವಿರುದ್ಧ ಸಿಯಾನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಭಜರಂಗದಳದ ನಾಯಕ ಯೋಗೇಶ್​ ರಾಜ್ ಎಂಬಾತನನ್ನು ಜನವರಿ 3ರಂದು ಬಂಧಿಸಲಾಗಿತ್ತು.