Supreme Court Rejects To Give Stay To Citizenship Amendment Act: ಪೌರತ್ವ ತಿದ್ದುಪಡಿ ಕಾಯ್ದೆ 2019 (ಸಿಎಎ) ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಇಂದು ವಿಚಾರಣೆ ನಡೆದಿದೆ, ಕೇಂದ್ರದ ಪರವಾಗಿ ವಾದ ಮಂಡಿಸಿದ  ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ,  ಈ ವಿಷಯದಲ್ಲಿ ಸರ್ಕಾರದ ಉತ್ತರವನ್ನು ಸಲ್ಲಿಸಲು ಸಮಯ ಕೋರಿದ್ದಾರೆ. ಈ ಕುರಿತು ಅರ್ಜಿದಾರರ ಪರವಾಗಿ ವಾದ ಮಂಡಿಸಿದಇಂದಿರಾ ಜೈಸಿಂಗ್ ಅವರು, ಈ ಕಾನೂನನ್ನು ನಿಷೇಧಿಸಬೇಕು ಮತ್ತು ವಿಷಯವನ್ನು ವಿಸ್ತೃತ ಪೀಠಕ್ಕೆ ಕಳುಹಿಸಬೇಕು ನ್ಯಾಯಪೀಠಕ್ಕೆ ಕೋರಿದ್ದಾರೆ (National News In Kannada). ಉಭಯ ಪಕ್ಷಗಳ ವಾದ ಆಲಿಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ (Central Government) ಬಿಗ್ ರಿಲೀಫ್ ನೀಡಿದೆ. ಸದ್ಯಕ್ಕೆ ಸಿಎಎ ಅಧಿಸೂಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಏಪ್ರಿಲ್ 9 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲಿಯವರೆಗೆ ಕೇಂದ್ರ ಸರ್ಕಾರ 3 ವಾರಗಳಲ್ಲಿ ತನ್ನ ಪ್ರತಿಕ್ರಿಯೆಯನ್ನು ದಾಖಲಿಸಬೇಕು ಎಂದಿದ್ದಾರೆ.(CAA Hearing Update)


COMMERCIAL BREAK
SCROLL TO CONTINUE READING

ಈ ಕುರಿತಾಗಿ ಬಂದ 236 ಅರ್ಜಿಗಳ ಪೈಕಿ ನಾವು ಎಷ್ಟು ಪ್ರಕರಣಗಳಲ್ಲಿ ನೋಟಿಸ್ ನೀಡಿದ್ದೇವೆ ಎಂದು ಪ್ರಶ್ನಿಸಿದ ಸುಪ್ರೀಂ ಉಳಿದ ಅರ್ಜಿಗಳಿಗೂ ಕೂಡ ನೋಟಿಸ್ ಜಾರಿ ಮಾಡಿ ದಿನಾಂಕ ನೀಡುತ್ತೇವೆ ಎಂದಿದೆ. ಇದರ ಜೊತೆಗೆ ಅಧಿಸೂಚನೆ ಜಾರಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಕಾಲಾವಕಾಶ ಕೋರಿದ್ದು, ಅವರಿಗೆ ಕಾಲಾವಕಾಶ ನೀಡಲಾಗುವುದು ಎಂದು ಪೀಠ ಹೇಳಿದೆ. ಈ ಸಂದರ್ಭದಲ್ಲಿ ಅಲ್ಲಿಯ ವರೆಗೆ  ಅಧಿಸೂಚನೆ ಜಾರಿಯನ್ನು ನಿಷೇಧಿಸಬೇಕು ಎಂದು ನ್ಯಾಯಾಲಕಕ್ಕೆ ಕೋರಿದ್ದಾರೆ. (Supreme Court CAA Hearing)


ವಾದ ಪ್ರತಿವಾದದ ಸಂದರ್ಭದಲ್ಲಿ ನ್ಯಾಯ ಪೀಠ ಕೇಂದ್ರ ಸರ್ಕಾರ ಯಾವಾಗ ತನ್ನ ಉತ್ತರವನ್ನು ದಾಖಲಿಸಲಿದೆ ಎಂದು ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದೆ. ಈ ಬಗ್ಗೆ ನಾಲ್ಕು ವಾರಗಳಲ್ಲಿ ಉತ್ತರವನ್ನು ಸಲ್ಲಿಸುವುದಾಗಿ ಸಾಲಿಸಿಟರ್ ಜನರಲ್ ಹೇಳಿದ್ದಾರೆ. 4 ವರ್ಷ 3 ತಿಂಗಳ ಬಳಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದಾರೆ.  ಪೌರತ್ವ ನೀಡುವುದನ್ನು ಪ್ರಾರಂಭಿಸಿದರೆ, ಅದನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅಧಿಸೂಚನೆಗಳನ್ನು ನಿಷೇಧಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ.


ಇದನ್ನೂ ಓದಿ-Lok Sabha Election 2024: 4600 ಕೋಟಿಗೂ ಅಧಿಕ ದಾನ! ಇಲೆಕ್ಟೋರಲ್ ಬಾಂಡ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಚುನಾವಣಾ ಆಯೋಗ


ಅಧಿಸೂಚನೆಗಳನ್ನು ನಿಷೇಧಿಸಬೇಕು ಮತ್ತು ಈಗಾಗಲೇ ಕೆಲವರಿಗೆ ಪೌರತ್ವ ನೀಡಲಾಗಿದೆ ಎಂದು ಸಿಬಲ್ ಹೇಳಿದ್ದಾರೆ. ನಿಷೇಧ ಹೇರದಿದ್ದರೆ ಈ ಅರ್ಜಿಗಳಿಗೆ ಅರ್ಥವೇ ಉಳಿಯುವುದಿಲ್ಲ. ಯಾರಾದರೂ ಪೌರತ್ವ ಪಡೆದರೂ ಪಡೆಯದಿದ್ದರೂ ಅರ್ಜಿದಾರರಿಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ಈ ಕುರಿತು ಇಂದಿರಾ ಜೈ ಸಿಂಗ್ ಅವರು, ಇದು ಸಾಂವಿಧಾನಿಕ ತನಿಖೆಯ ವಿಷಯವಾಗಿದೆ ಎಂದಿದಾರೆ.(Supreme Court CAA Notificatin Hearing)


ಇದನ್ನೂ ಓದಿ-Lok Sabha Election 2024: ಇಲೇಕ್ಟೊರಲ್ ಬಾಂಡ್ ಮೂಲಕ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಬಂದಿದೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್


ಬಲೂಚಿಸ್ತಾನದ ವ್ಯಕ್ತಿಯ ಪರವಾಗಿ ವಾದ ಮಂಡಿಸಿದ ರಂಜಿತ್ ಕುಮಾರ್, ನಮಗೆ ಪೌರತ್ವ ಸಿಕ್ಕರೆ ಯಾರಿಗೆ ಏನು ತೊಂದರೆ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಇಂದಿರಾ ಜೈ ಸಿಂಗ್ ಮತದಾನದ ಹಕ್ಕು ಸಿಗುತ್ತದೆ ಎಂದಿದ್ದಾರೆ. ಆದರೆ ಪ್ರಸ್ತುತ ಎನ್‌ಆರ್‌ಸಿ ನ್ಯಾಯಾಲಯದ ಮುಂದಿರುವ ವಿಷಯವಲ್ಲ, ಸಿಎಎ ಮಾತ್ರ ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ತಿಳಿಯಪಡಿಸಿದ್ದಾರೆ.  ಸುಪ್ರೀಂ ಕೋರ್ಟ್ ಏಪ್ರಿಲ್ 8 ರೊಳಗೆ ಕೇಂದ್ರ ಸರ್ಕಾರದಿಂದ ಉತ್ತರವನ್ನು ಕೋರಿದ್ದು, ಮುಂದಿನ ವಿಚಾರಣೆ ಏಪ್ರಿಲ್ 9 ರಂದು ನಡೆಯಲಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ