ನವದೆಹಲಿ: Cabinet Decision - ಮೋದಿ ಸರ್ಕಾರ ಇಂದು ರೈತರಿಗೆ ಹಾಗೂ ಜವಳಿ ಕ್ಷೇತ್ರಕ್ಕೆ ಮಹತ್ವದ  ಘೋಷಣೆಗಳನ್ನು ಮೊಳಗಿಸಿದೆ. ಜವಳಿ ಕ್ಷೇತ್ರಕ್ಕೆ 10683 ಕೋಟಿ ರೂ.ಗಳ ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ಸ್ (PLI Scheme) ಯೋಜನೆಗೆ ಕೇಂದ್ರ ಸಚಿವ ಸಂಪುಟ (Cabinet) ಅನುಮೋದನೆ ನೀಡಿದೆ. ಈ ಪ್ರೋತ್ಸಾಹವನ್ನು ಜವಳಿ ಕ್ಷೇತ್ರಕ್ಕೆ (Textile Sector) 5 ವರ್ಷಗಳ ಅವಧಿಯಲ್ಲಿ ನೀಡಲಾಗುವುದು. ಇದಲ್ಲದೇ, ಕ್ಯಾಬಿನೆಟ್ ರೈತರಿಗಾಗಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದೆ. ರಬ್ಬಿ ಬೆಳೆಗಳ  ಎಂಎಸ್‌ಪಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ದೇಶಾದ್ಯಂತ ರೈತರಿಗೆ ಇದರಿಂದ ಲಾಭ ಸಿಗಲಿದೆ.


COMMERCIAL BREAK
SCROLL TO CONTINUE READING

ಜವಳಿ ಕ್ಷೇತ್ರಕ್ಕೆ 10683 ಕೋಟಿ ರೂ.
ಕೇಂದ್ರ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ವಾಣಿಜ್ಯ ಸಚಿವ (Commerce Minister) ಪಿಯೂಷ್ ಗೋಯಲ್ (Piyush Goyal) ಮತ್ತು I&B ಸಚಿವ ಅನುರಾಗ್ ಠಾಕೂರ್, ಸಭೆಯ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಜವಳಿ ಕ್ಷೇತ್ರವನ್ನು ಸ್ಪರ್ಧಾತ್ಮಕವಾಗಿಸಲು PLI ಯೋಜನೆ ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ. ಈ ಯೋಜನೆಯಿಂದ 7.5 ಲಕ್ಷ ಜನರಿಗೆ ನೇರವಾಗಿ ಲಾಭ ಸಿಗಲಿದೆ ಎಂದು ಅವರು ಹೇಳಿದ್ದಾರೆ.


ಜವಳಿ ಉದ್ಯಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕ್ರಮಗಳನ್ನು ಹಿಂದೆಂದೂ ತೆಗೆದುಕೊಂಡಿಲ್ಲ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತವು ತನ್ನ ಪ್ರಾಬಲ್ಯವನ್ನು ತೋರಿಸಲಿದೆ ಎಂಬುದು ನನಗೆ ಖಾತ್ರಿಯಿದೆ. ಉತ್ಪಾದನೆಗೆ ಪ್ರೋತ್ಸಾಹಕವಾಗಿ 10,683 ಕೋಟಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಇದರೊಂದಿಗೆ ನಮ್ಮ ಕಂಪನಿಗಳು ಜಾಗತಿಕ ಚಾಂಪಿಯನ್ ಆಗಲಿವೆ . ಶ್ರೇಣಿ 3 ಅಥವಾ ಶ್ರೇಣಿ 4 ನಗರಗಳ ಹತ್ತಿರ ಇರುವ ಕಂಪನಿಗಳಿಗೆ  ಹೆಚ್ಚಿನ ಆದ್ಯತೆ ಸಿಗಲಿದ್ದು, ಜೊತೆಗೆ ಎಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂಬುದಕ್ಕೆ ವಿಶೇಷ ಗಮನ ನೀಡಲಾಗುವುದು. ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಒಡಿಶಾದಂತಹ ರಾಜ್ಯಗಳು ಈ ಯೋಜನೆಯಿಂದ ನೇರವಾಗಿ ಪ್ರಯೋಜನ ಪಡೆಯಲಿವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Girls Permitted To Join NDA: ಸಶಸ್ತ್ರ ಪಡೆಗಳಲ್ಲಿನ ತಾರತಮ್ಯಕ್ಕೆ ತೆರೆ, NDA ಮೂಲಕ ಮಹಿಳೆಯರಿಗೆ ಎಂಟ್ರಿ


ರೈತರಿಗೆ ಸರ್ಕಾರದ ಉಡುಗೊರೆ
ಕಬ್ಬು ಬೆಳೆಗಾರ ರೈತರಿಗೆ (Cane Growing Farmers) ಪ್ರತಿ ಕ್ವಿಂಟಾಲ್‌ಗೆ 290 ರೂ.ಗಳ ಖರೀದಿ ಬೆಲೆಯನ್ನು ನೀಡಲು ಸಂಪುಟ ಅನುಮೋದನೆ ನೀಡಿದೆ. ಇದು ಇದುವರೆಗಿನ ಗರಿಷ್ಟ ಮೌಲ್ಯವಾಗಿದೆ . ಕ್ಯಾಬಿನೆಟ್ 2022-23 ರ ಮಾರ್ಕೆಟಿಂಗ್ ಸೀಸನ್‌ಗಾಗಿ ರಬ್ಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಗೋಧಿಯ ಎಂಎಸ್‌ಪಿ ರೂ.1975 ರಿಂದ ರೂ. 2015 ಕ್ಕೆ ಹೆಚ್ಚಾಗಿದೆ. ಈ ಎಂಎಸ್‌ಪಿಯಲ್ಲಿ 100% ಉತ್ಪಾದನಾ ವೆಚ್ಚವನ್ನು ರೈತರಿಗೆ ಹಿಂತಿರುಗಿಸಲಾಗುತ್ತದೆ. 2022-23 ನೇ ಸಾಲಿಗೆ ಪ್ರತಿ ಕ್ವಿಂಟಾಲ್ ಗೆ ರೂ. 5230 ಕ್ಕೆ ಹೆಚ್ಚಿಸಲಾಗಿದ್ದು, ಇದು ಮೊದಲು 5100 ರೂ. ಗಳಷ್ಟಿತ್ತು. ದ್ವಿದಳ ಧಾನ್ಯದ ಎಮ್‌ಎಸ್‌ಪಿಯನ್ನು ರೂ 5100 ರಿಂದ 5500 ಕ್ಕೆ ಹೆಚ್ಚಿಸಲಾಗಿದೆ. ಸಾಸಿವೆಯ ಎಮ್‌ಎಸ್‌ಪಿಯನ್ನು ರೂ 4650 ರಿಂದ ರೂ 5050 ಕ್ಕೆ ಹೆಚ್ಚಿಸಲಾಗಿದೆ. ಕುಸುಬಿ ಬೆಳೆಯ ಎಮ್‌ಎಸ್‌ಪಿಯನ್ನು 114 ರೂ. ವರೆಗೆ ಹೆಚ್ಚಿಸಲಾಗಿದೆ. ಈಗ ಅದು ರೂ 5327 ರಿಂದ ರೂ 5441 ಕ್ಕೆ ಏರಿಕೆಯಾಗಿದೆ.


ಇದನ್ನೂ ಓದಿ-Facebook ನಿಮ್ಮ ಖಾಸಗಿ WhatsApp ಸಂದೇಶಗಳನ್ನು ಓದುತ್ತಂತೆ! ಹೊಸ ವರದಿಯಲ್ಲಿ ಅಂಶ ಬಹಿರಂಗ


ಹೆಚ್ಚಿಸಲಾಗಿರುವ ಎಂಎಸ್‌ಪಿ ಬೆಳೆ ವೈವಿಧ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ರೈತರಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-ndonesia ಜೈಲಿನಲ್ಲಿ ಭೀಕರ ಅಗ್ನಿ ಆಕಸ್ಮಿಕ, 40 ಕೈದಿಗಳ ದಾರುಣ ಸಾವು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.