ಸಂಗಾತಿಯನ್ನು ಭೂತ, ಪಿಶಾಚಿ ಎಂದು ಕರೆಯುವುದು ಕಿರುಕುಳವಲ್ಲ!: ಹೈಕೋರ್ಟ್
ಈ ವಾದವನ್ನು ತಿರಸ್ಕರಿಸಿದ ಪೀಠವು, ʼವೈವಾಹಿಕ ಸಂಬಂಧ ಸರಿಯಿಲ್ಲದ ಸಂದರ್ಭದಲ್ಲಿ ಪತಿ ಹಾಗೂ ಪತ್ನಿ ಇಂತಹ ಬೈಗುಳದ ಭಾಷೆ ಬಳಸಿರುವ ಉದಾಹರಣೆಗಳಿವೆ. ಆದರೆ ಇಂತಹ ಬೈಗುಳಗಳು ಹಾಗೂ ಕೀಳು ಭಾಷೆ ಕಿರುಕುಳ ವ್ಯಾಪ್ತಿಗೆ ಬರುವುದಿಲ್ಲವೆಂದು ಅಭಿಪ್ರಾಯಪಟ್ಟಿದೆ.
ನವದೆಹಲಿ: ಸಂಗಾತಿಗೆ ಭೂತ, ಪಿಶಾಚಿ ಎಂಬ ಭಾಷೆ ಬಳಸುವುದು ಕಿರುಕುಳಕ್ಕೆ ಸಮವಲ್ಲವೆಂದು ಪಾಟ್ನಾ ಹೈಕೋರ್ಟ್ ಹೇಳಿದೆ. ಪರಸ್ಪರ ದೂರವಾದ ನಂತರ ಸಂಗಾತಿಗೆ ಈ ರೀತಿಯ ಕೀಳು ಭಾಷೆ ಬಳಸುವುದು ಕಿರುಕುಳವಾಗುವುದಿಲ್ಲವೆಂದು ಅಭಿಪ್ರಾಯಪಟ್ಟಿದೆ.
ಮಹಿಳೆಯೊಬ್ಬರು ತನ್ನ ವಿಚ್ಛೇಧಿತ ವ್ಯಕ್ತಿ ಹಾಗೂ ಆತನ ತಂದೆ ವಿರುದ್ಧ ಇಂತಹ ಕೀಳು ಭಾಷೆ ಬಳಸಿದ್ದಕ್ಕೆ 1994ರಲ್ಲಿ ದೂರು ದಾಖಲಿಸಿದ್ದರು. ವರದಕ್ಷಿಣೆ ರೂಪದಲ್ಲಿ ಕಾರು ನೀಡದ ಕಾರಣ ದೈಹಿಕ ಹಿಂಸೆ ನೀಡುವುದರ ಜೊತೆಗೆ ಕೆಟ್ಟದಾಗಿ ಮಾತನಾಡಿದ್ದರು ಅಂತಾ ದೂರಿದ್ದರು. ಮಹಿಳೆಯ ವಾದವನ್ನು ಆಲಿಸಿದ ಬಿಹಾರದ ನಳಂದಾ ಜಿಲ್ಲಾ ನ್ಯಾಯಾಲಯವು 2008ರಲ್ಲಿ ತಂದೆ ಹಾಗೂ ಮಗನನ್ನು ತಪ್ಪಿತಸ್ಥ ಎಂದು ಹೇಳಿತ್ತು. ಜೊತೆಗೆ ಕಠಿಣ ಕಾರಾಗೃಹ ಶಿಕ್ಷೆಯನ್ನೂ ವಿಧಿಸಿತ್ತು.
ಇದನ್ನೂ ಓದಿ: ನನ್ನದು ಗರ್ವ ಅಲ್ಲ, ಕನ್ನಡಿಗನ ಸ್ವಾಭಿಮಾನ: ದೇವೇಗೌಡರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!
ಇದನ್ನು ಪ್ರಶ್ನಿಸಿ ಮಗ ಮತ್ತು ತಂದೆ ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಪಾಟ್ನಾದ ಏಕ ಸದಸ್ಯ ಪೀಠದ ಎದುರು ಮಹಿಳೆ ಪರ ವಾದ ಮಂಡಿಸಿದ ವಕೀಲರು, ʼ21ನೇ ಶತಮಾನದಲ್ಲಿ ಮಹಿಳೆಯನ್ನು ಭೂತ, ಪಿಶಾಚಿ ಎಂದು ಕರೆದಿರುವುದು ಕ್ರೌರ್ಯಕ್ಕೆ ಸಮವೆಂದು ವಾದ ಮಂಡಿಸಿದ್ದರು.
ಈ ವಾದವನ್ನು ತಿರಸ್ಕರಿಸಿದ ಪೀಠವು, ʼವೈವಾಹಿಕ ಸಂಬಂಧ ಸರಿಯಿಲ್ಲದ ಸಂದರ್ಭದಲ್ಲಿ ಪತಿ ಹಾಗೂ ಪತ್ನಿ ಇಂತಹ ಬೈಗುಳದ ಭಾಷೆ ಬಳಸಿರುವ ಉದಾಹರಣೆಗಳಿವೆ. ಆದರೆ ಇಂತಹ ಬೈಗುಳಗಳು ಹಾಗೂ ಕೀಳು ಭಾಷೆ ಕಿರುಕುಳ ವ್ಯಾಪ್ತಿಗೆ ಬರುವುದಿಲ್ಲ'ವೆಂದಿದೆ.
ಇದನ್ನೂ ಓದಿ: ಬೀದರ್‌ನಲ್ಲಿ ರಂಗೇರಿದ ಲೋಕಸಭೆ ಚುನಾವಣೆ ಅಖಾಡ
ಆರೋಪಿತರಿಂದ ಮಹಿಳೆಯು ದೌರ್ಜನ್ಯಕ್ಕೆ ಹಾಗೂ ಕ್ರೂರವಾದ ಹಿಂಸೆಗೆ ಒಳಗಾಗಿದ್ದಾರೆ ಅಂತಾ ಅರ್ಜಿಯಲ್ಲಿ ನಿರ್ದಿಷ್ಟ ಆರೋಪ ಮಾಡಿಲ್ಲವೆಂದು ಹೈಕೋರ್ಟ್ ಪೀಠವು, ಕೆಳ ಹಂತದ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ ಎಂದು ವರದಿಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.