ಚಂಡೀಗಢ: ಗ್ರಾಹಕರಿಂದ ಕ್ಯಾರಿ ಬ್ಯಾಗ್‌ಗೆ ಪ್ರತ್ಯೇಕ ಹಣವನ್ನು ವಿಧಿಸಿದ್ದಕ್ಕಾಗಿ ಗ್ರಾಹಕ ವೇದಿಕೆ ಬಿಗ್ ಬಜಾರ್‌ಗೆ(Big Bazaar) ದಂಡ ವಿಧಿಸಿದೆ. ಕ್ಯಾರಿ ಬ್ಯಾಗ್‍ಗೆ ಗ್ರಾಹಕರಿಂದ 18 ರೂ. ವಸೂಲಿ ಮಾಡಿದ್ದ  Big Bazaarಗೆ 11,500ರೂ. ದಂಡ ಪಾವತಿಸುವಂತೆ ತಿಳಿಸಿದೆ.


COMMERCIAL BREAK
SCROLL TO CONTINUE READING

ಪಂಚಕುಲ ನಿವಾಸಿ ಬಲದೇವ್ ರಾಜ್  ಅವರು 2019 ರ ಮಾರ್ಚ್ 20 ರಂದು ಬಿಗ್ ಬಜಾರ್‌ನಲ್ಲಿ ಶಾಪಿಂಗ್‌ಗೆ ಹೋಗಿದ್ದರು ಎಂದು ವೇದಿಕೆಯಲ್ಲಿ ದೂರಿನಲ್ಲಿ ತಿಳಿಸಿದ್ದಾರೆ. ಬಿಲ್ಲಿಂಗ್ ಕೌಂಟರ್ ಉದ್ಯೋಗಿ ಅವರಿಂದ ಕ್ಯಾರಿ ಬ್ಯಾಗ್‍ಗಾಗಿ ಪ್ರತ್ಯೇಕವಾಗಿ 18 ರೂ. ನೀಡುವಂತೆ ಕೇಳಿದ್ದರು. ಇದು ಕಾನೂನುಬಾಹಿರ ಎಂದು ತಿಳಿಹೇಳಿದ್ದ ಬಾಲ್ದೇವ್ ಇದನ್ನು ನಿರಾಕರಿಸಿದರು. ಆದರೆ ಗ್ರಾಹಕರಿಗೆ ಸಹಕರಿಸದ Big Bazaar ಉದ್ಯೋಗಿ  ಕ್ಯಾರಿ ಬ್ಯಾಗ್‌ಗೆ ಪ್ರತ್ಯೇಕ ಹಣ ನೀಡಲೇ ಬೇಕು ಎಂದು ಪಟ್ಟು ಹಿಡಿದಿದ್ದನು.


ಇದರಿಂದಾಗಿ ತೊಂದರೆಗೀಡಾದ ಬಾಲ್ದೇವ್ ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿದರು. ಅದೇ ಸಮಯದಲ್ಲಿ, ಬಿಗ್ ಬಜಾರ್ ಕ್ಯಾರಿ ಬ್ಯಾಗ್ ಶುಲ್ಕಗಳ ಬಗ್ಗೆ ಅಂಗಡಿಯಲ್ಲಿ ಪ್ರದರ್ಶಿಸಿದ್ದಾರೆ ಮತ್ತು ಅದರ ಬಗ್ಗೆ ಗ್ರಾಹಕರಿಗೆ ತಿಳಿಸಲಾಗಿದೆ ಎಂದು ತಮ್ಮ ಪರವಾಗಿ ವಾದಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಗ್ರಾಹಕ ವೇದಿಕೆ ತನ್ನ ನಿರ್ಧಾರವನ್ನು ನೀಡಿದೆ.


ಗ್ರಾಹಕ ಕಾನೂನು ನೆರವು ಖಾತೆಯಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಠೇವಣಿ ಇರಿಸುವಂತೆಯೂ ಮತ್ತು 500 ರೂ.ಗಳನ್ನು ಕೇಸಿಗೆ ಖರ್ಚು ಮಾಡಿದ್ದಕ್ಕಾಗಿಯೂ, ಹಾಗೂ ಇದರೊಂದಿಗೆ ಮಾನಸಿಕ ತೊಂದರೆ ನೀಡಿದ್ದಕ್ಕೆ ಒಂದು ಸಾವಿರ ರೂಪಾಯಿ ಮತ್ತು ಕ್ಯಾರಿ ಬ್ಯಾಗ್‌ಗಳಿಗಾಗಿ ವಸೂಲಿ ಮಾಡಲಾಗಿದ್ದ 18 ರೂಪಾಯಿಗಳನ್ನು ದೂರುದಾರರಿಗೆ ಹಿಂದಿರುಗಿಸಲು ಗ್ರಾಹಕ ವೇದಿಕೆ ಬಿಗ್ ಬಜಾರ್‌ಗೆ ತಿಳಿಸಿದೆ.