ನವದೆಹಲಿ: ತನಿಖಾ ಸಂಸ್ಥೆ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ದೇಶದ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ. ಕರೋನಾಗೆ ಸಂಬಂಧಿಸಿದ ನವೀಕರಣಗಳನ್ನು ತಿಳಿಯಲು ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳ ಬಗ್ಗೆ ಸಿಬಿಐ ಜನರಿಗೆ ಎಚ್ಚರಿಕೆ ನೀಡಿದೆ. ಈ ಆಪ್ ಗಳು ತನ್ನ ಬಳಕೆದಾರರಿಗೆ ನಕಲಿ ಲಿಂಕ್ ಗಳನ್ನೂ ಕಳುಹಿಸುವ ಮೂಲಕ ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಕದಿಯುವುದರಲ್ಲಿ ನಿರತವಾಗಿವೆ ಎಂದು ಈಹ್ಹರಿಕೆ ನೀಡಿದೆ.


COMMERCIAL BREAK
SCROLL TO CONTINUE READING

ಸರ್ಬೇರಸ್ ಹೆಸರಿನ ಒಂದು ಸಾಫ್ಟ್ ವೇರ್ ಅನ್ನು ಬಳಸಿ ಈ ಹ್ಯಾಕಿಂಗ್ ಮಾಡಲಾಗುತ್ತಿದೆ ಎಂದು CBI ಹೇಳಿದೆ. ಈ ಸಾಫ್ಟ್ ವೆಯರ್ ಅನ್ನು ಬಳಸಿ ಹ್ಯಾಕರ್ ಗಳು ಬಳಕೆದಾರರ ಸ್ಮಾರ್ಟ್ ಫೋನ್ ಗಳಿಂದ ಡೇಟಾ ಕದಿಯುತ್ತಿದ್ದಾರೆ. ಅಷ್ಟೇ ಅಲ್ಲ ಈ ಸಾಫ್ಟ್ ವೆಯರ್ ಬ್ಯಾಂಕಿಂಗ್ ಟ್ರೋಜನ್ ಬಳಸಿ ಬಳಕೆದಾರರಿಗೆ ಕೊರೊನಾ ಬಗ್ಗೆ ಮಾಹಿತಿ ಡೌನ್ ಲೋಡ್ ಮಾಡಿಕೊಳ್ಳಲು SMS ಲಿಂಕ್ ಕೂಡ ಕಳುಹಿಸುತ್ತದೆ ಎಂದು ಹೇಳಿದೆ. ಒಂದು ಬಾರಿ ಬಳಕೆದಾರರು ಲಿಂಕ್ ಮೇಲೆ ಕ್ಲಿಕ್ಕಿಸಿದಾಗ ಅವರ ಮೊಬೈಲ್ ನಲ್ಲಿ ಸಾಫ್ಟ್ ವೆಯರ್ ಸ್ಥಾಪನೆಯಾಗಿ, ಬಳಕೆದಾರರ ಮಾಹಿತಿ ಕಳುವು ಮಾಡಲು ಸಹಕರಿಸುತ್ತದೆ ಎಂದು ತನಿಖಾ ಸಂಸ್ಥೆ ಹೇಳಿದೆ.


ಸದ್ಯ ಕೊರೊನಾ ಪ್ರಕೋಪದ ಹಿನ್ನೆಲೆ ಲಾಕ್ ಡೌನ್ ಅವಧಿಯನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಬಳಕೆದಾರರು ಆನ್ಲೈನ್ ಪ್ಲಾಟ್ಫಾರ್ಮ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ತಜ್ಞರ ಪ್ರಕಾರ ಈ ಅವಧಿಯಲ್ಲಿ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿಯೂ ಕೂಡ ವ್ಯಾಪಕ ವೃದ್ಧಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಳಕೆದಾರರು ಜಾಗರೂಕರಾಗಿರಬೇಕು ಎಂದು ಐಟಿ ಮತ್ತು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇವಲ ಭಾರತವಷ್ಟೇ ಅಲ್ಲ ವಿಶ್ವದ ಹಲವಾರು ದೇಶಗಳಲ್ಲಿ ಈ ರೀತಿಯ ದೂರುಗಳು ಕೇಳಿಬಂದಿರುವುದು ಇನ್ನೂ ಆತಂಕ ಹೆಚ್ಚಿಸಿದೆ.


ಹ್ಯಾಕಿಂಗ್ ನಿಂದ ಪಾರಾಗಲು ಇಲ್ಲಿವೆ ಕೆಲ ಟಿಪ್ಸ್


  • ಯಾವುದೇ ನಕಲಿ ವೆಬ್‌ಸೈಟ್‌ಗಳು ಮತ್ತು ಅಜ್ಞಾತ ಎಸ್‌ಎಂಎಸ್‌ಗಳಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ಇನ್ಸ್ಟಾಲ್ ಮಾಡಬೇಡಿ.

  • ಪ್ರಬಲವಾದ ಕೃತಕ ಬುದ್ಧಿಮತ್ತೆ ಮೊಬೈಲ್ ಆಂಟಿವೈರಸ್ ಬಳಸಿ.

  • ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು (ಗೂಗಲ್ ಪ್ಲೇಸ್ಟೋರ್‌ನಿಂದಲೂ ಸಹ), ಯಾವಾಗಲೂ ಅಪ್ಲಿಕೇಶನ್ ವಿವರಗಳು, ಡೌನ್‌ಲೋಡ್‌ಗಳ ಸಂಖ್ಯೆ, ಬಳಕೆದಾರರ ವಿಮರ್ಶೆ, ಕಾಮೆಂಟ್‌ಗಳ ವಿವರಗಳನ್ನು ಪರಿಶೀಳಿಸಲು ಮರೆಯದಿರಿ.

  • ಅಸುರಕ್ಷಿತ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಸುವುದರಿಂದ ದೂರ ಉಳಿಯಿರಿ.