ನವದೆಹಲಿ: ಶೀನಾ ಬೋರಾ ಹತ್ಯೆಯ ತನಿಖೆಯನ್ನು ಸಿಬಿಐ ಮುಚ್ಚಲು ನಿರ್ಧರಿಸಿದೆ ಎನ್ನಲಾಗಿದೆ.ಈಗ ಮೂಲಗಳು ಹೇಳುವಂತೆ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದು, 2012 ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಮುಂದಿನ ತನಿಖೆಯನ್ನು ನಿಲ್ಲಿಸಲು ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಪೀಟರ್ ಮುಖರ್ಜಿಯ ಜೊತೆಗೆ ಟಿವಿ ಚಾನೆಲ್‌ನ ಮಾಜಿ ಮಾಲೀಕರಾದ ಇಂದ್ರಾಣಿ ಮುಖರ್ಜಿಯಾ ಅವರನ್ನು 2015 ರಲ್ಲಿ ಮೊದಲ ಮದುವೆಯಿಂದ ಆಕೆಯ ಮಗಳಾದ 25 ವರ್ಷದ ಶೀನಾ ಬೋರಾಳ ಕೊಲೆ (Sheena Bora Murder Case) ವಿಚಾರವಾಗಿ ಬಂಧಿಸಲಾಯಿತು.ಮೂರು ತಿಂಗಳ ನಂತರ, ಪೀಟರ್ ಮುಖರ್ಜಿಯಾರನ್ನು ಇಂದ್ರಾಣಿ ಹತ್ಯೆಗೆ ಸಹಾಯ ಮಾಡಿದ ಆರೋಪದ ಮೇಲೆ ಬಂಧಿಸಲಾಯಿತು.


ಇದನ್ನೂ ಓದಿ:ಶೀನಾ ಬೋರಾ ಹತ್ಯೆ ಪ್ರಕರಣ : ಮುಂಬೈ ಆಸ್ಪತ್ರೆಗೆ ಇಂದ್ರಾಣಿ ಮುಖರ್ಜಿ ದಾಖಲು


ಇಂದ್ರಾಣಿ ಮುಖರ್ಜಿ ಅವರ ಚಾಲಕ ಶ್ಯಾಮವರ್ ರೈ ಅವರನ್ನು ಪ್ರತ್ಯೇಕ ಪ್ರಕರಣದಲ್ಲಿ ಬಂಧಿಸಿದ ನಂತರ ಕೊಲೆ ವಿಚಾರ ಬಯಲಾಗಿತ್ತು.ಈಗ ಆತನು ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.ವಿಚಾರಣೆಯಲ್ಲಿ ಸುಮಾರು 60 ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.


ಮೊದಲ ಆರೋಪಪಟ್ಟಿ ಸಲ್ಲಿಸಿದ ನಂತರ, ಪ್ರಕರಣದ ಹೆಚ್ಚಿನ ತನಿಖೆ ನಡೆಸಲು ಸಿಬಿಐ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡಿತ್ತು.ಹೆಚ್ಚಿನ ತನಿಖೆಯ ಸಮಯದಲ್ಲಿ, ಏಜೆನ್ಸಿಯವರು ಆರೋಪಿಗಳ ವಿರುದ್ಧ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಕಂಡುಕೊಂಡರು, ಇದರ ಪರಿಣಾಮವಾಗಿ ಎರಡು ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಲಾಯಿತು.


ತನಿಖೆ ಮುಗಿದ ನಂತರ, ಕಾರ್ಯವಿಧಾನದ ಪ್ರಕಾರ, ಈ ಪ್ರಕರಣದ ಹೆಚ್ಚಿನ ತನಿಖೆಯನ್ನು ಮುಚ್ಚುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ಸಂಸ್ಥೆ ಅರ್ಜಿ ಸಲ್ಲಿಸಿದೆ.


ಇದನ್ನೂ ಓದಿ : Indian Idol 12 Winner: ಪವನ್ ದೀಪ್ ರಾಜನ್ ಮುಡಿಗೆ ಇಂಡಿಯನ್ ಐಡಲ್ 12 ಪ್ರಶಸ್ತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ