ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನೈನ್‌ಎಕ್ಸ್ ಮಾಧ್ಯಮ ಸಮೂಹದ ಒಡತಿ ಇಂದ್ರಾಣಿ ಮುಖರ್ಜಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ರಾತ್ರಿ ಬೈಕಲ್ಲಾ ಜೈಲಿನಿಂದ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದ್ರಾಣಿ ಅವರಿಗೆ ಅಧಿಕ ಪ್ರಮಾಣದ ಔಷಧಿ ನೀಡಿದ ಹಿನ್ನೆಲೆಯಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಶಂಕಿಸಲಾಗಿದೆ. ಇದುವರೆಗೂ ವೈದ್ಯರು ಮತ್ತು ಪೋಲಿಸ್ ಅಧಿಕಾರಿಗಳು ಅವರ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ತನ್ನ ಮಗಳು ಶೀನಾಳನ್ನು 2012ರ ಏಪ್ರಿಲ್‌ನಲ್ಲಿ ಕಾರಿನಲ್ಲೇ ಕತ್ತು ಹಿಸುಕಿ ಸಾಯಿಸಿ, ನಂತರ ಮೃತದೇಹವನ್ನು ಅರಣ್ಯ ಪ್ರದೇಶವೊಂದರಲ್ಲಿ ಸುಟ್ಟು ಹಾಕಿರುವ ಆರೋಪವನ್ನು ಇಂದ್ರಾಣಿ ಎದುರಿಸುತ್ತಿದ್ದಾರೆ.