ನವದೆಹಲಿ: ಸ್ವಯಂಘೋಷಿತ ದೇವ ಮಾನವ ದಾಟಿ ಮಹಾರಾಜ್ ಮತ್ತು ಇತರ ಮೂವರ ಮೇಲೆ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆಯ ಪ್ರಕರಣವನ್ನು ಶುಕ್ರವಾರದಂದು ಸಿಬಿಐ ದಾಖಲಿಸಿದೆ. 


COMMERCIAL BREAK
SCROLL TO CONTINUE READING

ಈ ಹಿಂದೆ ಪ್ರಕರಣದ ತನಿಖೆಯನ್ನು ದೆಹಲಿ ಪೋಲಿಸ್ ಕ್ರೈಂ ಬ್ರಾಂಚ್ ನಡೆಸಿತ್ತು ಆದರೆ ಅಕ್ಟೋಬರ್ ನ ಪ್ರಾರಂಭದಲ್ಲಿ ಈ ಪ್ರಕರಣವನ್ನು ದೆಹಲಿ ಹೈಕೋರ್ಟ್ ಸಿಬಿಐಗೆ ವರ್ಗಾವಣೆ ಮಾಡಿತ್ತು. ಆದರೆ ಸಿಬಿಐಗೆ ಪ್ರಕರಣವನ್ನು ವರ್ಗಾಯಿಸಿದ ದೆಹಲಿ ಹೈಕೋರ್ಟ್ ಕ್ರಮವನ್ನು ದಾಟಿ ಮಹಾರಾಜ್ ಸುಪ್ರಿಮ್ ಕೋರ್ಟ್ ನಲ್ಲಿ ಪ್ರಶ್ನಿಸಿ ತಮ್ಮ ಸಮಸ್ಯೆಗೆ ಹೈಕೋರ್ಟ್ ಅಡಿಯಲ್ಲಿ ಪರಿಹಾರ ನೀಡಲು  ಕೇಳಿಕೊಂಡಿದ್ದರು.ಇದಾದ ನಂತರ ಉನ್ನತ ನ್ಯಾಯಾಲಯ ದಾಟಿ ಮಹಾರಾಜ್ ಅವರಿಗೆ ಹೈಕೋರ್ಟ್ ನಲ್ಲಿ ವಿಚಾರಣೆ ಮಾಡಲು ಅವಕಾಶ ನೀಡಿತ್ತು.


ದಾಟಿ ಮಹಾರಾಜ್  ಮತ್ತು ಆತನ ಶಿಷ್ಯರು 25 ವರ್ಷ ವಯಸ್ಸಿನ ತನ್ನ ಶಿಷ್ಯೆಯನ್ನು ಅತ್ಯಾಚಾರ ಮಾಡಿದ್ದರು ಎಂದು ಅವರು ಆರೋಪಿಸಿದ್ದರು.ಒಂದು ವೇಳೆ ತನ್ನ ಜೊತೆ ಮಲಗದಿದ್ದರೆ ಇತರ ಶಿಷ್ಯರ ಜೊತೆಯೂ ಮಲಗಬೇಕಾಗುತ್ತದೆ ಎಂದು ದಾಟಿ ಮಹಾರಾಜ್ ಮಹಿಳೆಗೆ ಬೆದರಿಕೆ ಒಡ್ಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಈ ವಿಚಾರವಾಗಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಆ ಮಹಿಳೆ ದಾಟಿ ಮಹಾರಾಜ್ ರ ಮೂವರು ಸಹೋದರರನ್ನು ಬಂಧಿಸುವುದಲ್ಲದೆ ಎರಡು ಆಶ್ರಮಗಳನ್ನು ಮುಚ್ಚಬೇಕೆಂದು ಅವರು ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.ಈ ಘಟನೆ ನಡೆದ ನಂತರ ತಾವು ಆಶ್ರಮದಿಂದ ತಪ್ಪಿಸಿಕೊಂಡು ಬಂದಿದ್ದು ಈ ಘಟನೆಯ ಬಗ್ಗೆ ತನ್ನ ಪೋಷಕರಿಗೆ ವಿವರಿಸಿದಾಗ ಅವರು ಪೋಲೀಸರ ಬಲಿ ದೂರು ದಾಖಲಿಸಿದ್ದರು ಎಂದು ಆ ಮಹಿಳೆ ವಿವರಿಸಿದ್ದಾಳೆ.