ನವದೆಹಲಿ : 12 ನೇ ತರಗತಿಯ ಅರ್ಥಶಾಸ್ತ್ರ ಮತ್ತು 10ನೇ ತರಗತಿಯ ಗಣಿತ ವಿಷಯಗಳಿಗೆ  ಸಿಬಿಎಸ್ಇ ಮರುಪರೀಕ್ಷೆ ನಡೆಸಲು ನಿರ್ಧರಿಸಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಸಿಬಿಎಸ್ಇ, ಪರೀಕ್ಷೆ ಸಂದರ್ಭದಲ್ಲಿ ನಡೆದಿರುವ ಕೆಲವು ಘಟನೆಗಳನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ. ಮರು ಪರೀಕ್ಷೆಯ ದಿನಾಂಕ ಮತ್ತು ಇತರ ವಿವರಗಳನ್ನು CBSE ವೆಬ್'ಸೈಟ್ನಲ್ಲಿ ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ. 


ಈ ಬಾರಿಯ CBSE ಪರೀಕ್ಷೆಗೆ 28 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. 10ನೇ ತರಗತಿಗೆ ಒಟ್ಟು 10,16,428 ಅಭ್ಯರ್ಥಿಗಳು ಮತ್ತು 12ನೇ ತರಗತಿಗೆ 11,86,306 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ.