ನವದೆಹಲಿ: ಮುಂದಿನ ವರ್ಷದ ನಡೆಯಲಿರುವ 10 ಮತ್ತು 12 ನೇ ತರಗತಿಗಳ  ಪರೀಕ್ಷೆಗಳಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ CBSE ಮಂಡಳಿ (CBSE BOARD) ಚಾಲನೆ ನೀಡಿದೆ. 10 ಮತ್ತು 12 ನೇ ಬೋರ್ಡ್ ಪರೀಕ್ಷೆಗಳಿಗೆ ಈ ಫಾರ್ಮ್ ಅನ್ನು ಭರ್ತಿ ಮಾಡಲಾಗುತ್ತದೆ.


COMMERCIAL BREAK
SCROLL TO CONTINUE READING

CBSE ಮಂಡಳಿ ಜೋಆರಿಗೊಲಿಸಿರುವ ನೋಟೀಸ್ ಪ್ರಕಾರ 10ನೇ ಮತ್ತು 12 ನೇ ತರಗತಿಗಳಿಗಾಗಿ 2021 ರಲ್ಲಿ ನಡೆಯಬೇಕಿರುವ ಪರೀಕ್ಷೆಗಳಿಗಾಗಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಸೆಪ್ಟೆಂಬರ್ 7 ರಿಂದ ಅಕ್ಟೋಬರ್ 15ರವರೆಗೆ ನಡೆಯಲಿದೆ. ಒಂದು ವೇಳೆ ಅಕ್ಟೋಬರ್ 15 ರವರೆಗೆ ಫಾರ್ಮ್ ದಾಖಲಿಸಲು ವಿಫಲವಾಗುವ ವಿದ್ಯಾರ್ಥಿಗಳು ಲೇಟ್ ಫೀ ಜೊತೆಗೆ 16 ರಿಂದ 31 ಅಕ್ಟೋಬರ್ ವರೆಗೆ ಫಾರ್ಮ್ ಸಲ್ಲಿಸಬಹುದಾಗಿದೆ.


ಪ್ರಾಕ್ಟಿಕಲ್ ಪೇಪರ್ ಗಾಗಿ 12 ತರಗತಿಯ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯಕ್ಕೆ ರೂ.150 ಪ್ರತ್ಯೇಕ ಪಾವತಿಸಬೇಕು. 10ನೇ ತರಗತಿಯ ವಿದ್ಯಾರ್ಥಿಗಳು ಹೆಚ್ಚುವರಿ ವಿಷಯಕ್ಕೆ ರೂ.300 ಹೆಚ್ಚೂವರಿ ಪಾವತಿಸಬೇಕು. ವಿದ್ಯಾರ್ಥಿಗಳು ಮೈಗ್ರೇಶನ್ ಸರ್ಟಿಫಿಕೆಟ್ ಕೂಡ ಪಡೆಯಬಹುದಾಗಿದೆ. ಇದಕ್ಕಾಗಿ ರೂ.350 ಪಾವತಿಸಬೇಕು.


10 ಮತ್ತು 12ನೇ ತರಗತಿಗಳ ಪರೀಕ್ಷೆಗೆ ಫಾರ್ಮ್ ಭರ್ತಿ ಮಾಡುವ ಪ್ರಕ್ರಿಯೆಗೆ ಸಂಬಂದಿಸಿದಂತೆ ನೋಟಿಸ್ ಹೊರಡಿಸಿರುವ CBSE, 9 ನೇ ಮತ್ತು 11 ನೇ ತರಗತಿಗಳ ನೋಂದಣಿಗಾಗಿ ದಿನಾಂಕಗಳನ್ನು ಕೂಡ ಬಿಡುಗಡೆ ಮಾಡಿದೆ. ಇದರ ಸುತ್ತೋಲೆಯನ್ನು ಪ್ರತ್ಯೇಕ ಶಾಲೆಗಳಿಗೆ ಕಳುಹಿಸಲಾಗಿದ್ದು , ಸೆಪ್ಟೆಂಬರ್ 7 ರಂದು ಈ ಪ್ರಕ್ರಿಯೆ ಆರಂಭಗೊಳ್ಳಲಿದೆ. ಯಾವುದೇ ರೀತಿಯ ಲೇಟ್ ಶುಲ್ಕವಿಲ್ಲದೆ ನವೆಂಬರ್ 4ರವರೆಗೆ ರಿಜಿಸ್ಟ್ರೇಶನ್ ಮಾಡಬಹುದಾಗಿದೆ. ನವೆಂಬರ್ 5 ರಿಂದ ನವೆಂಬರ್ 13ರವರೆಗೆ ವಿಳಂಭ ಶುಲ್ಕ ರೂ.300 ಒಳಗೊಂಡಂತೆ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.


ಕೊರೊನಾ ವೈರ ಪ್ರಕೋಪದ ಹಿನ್ನೆಲೆ ಈ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ರಾಷ್ಟ್ರವಾದ, ಸ್ಥಳೀಯ ಸರ್ಕಾರ, ಸಂಘವಾದ ಗಳಂತಹ 3 ರಿಂದ 4 ವಿಷಯಗಳನ್ನು ಸಿಲೆಬಸ್ ನಿಂದ ಹೊರಗಿಡಲಾಗಿದೆ.