CBSE Term 2 Result Latest Update: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಶೀಘ್ರದಲ್ಲೇ CBSE 10 ನೇ 12 ನೇ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ಮಂಡಳಿಯು ಜುಲೈ 10 ರೊಳಗೆ ಫಲಿತಾಂಶವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಕೆಲವು ಮಾಧ್ಯಮ ವರದಿಗಳ ಪ್ರಕಾರ,  ಜುಲೈ 4 ರಂದು 10 ನೇ ತರಗತಿಯ ಫಲಿತಾಂಶ ಮತ್ತು ಜುಲೈ 10 ರೊಳಗೆ 12 ನೇ ತರಗತಿಯ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿದೆ. ಆದರೆ, ಫಲಿತಾಂಶ ಪ್ರಕಟದ ಕುರಿತು ಮಂಡಳಿಯು ಇನ್ನೂ ಯಾವುದೇ ದಿನಾಂಕವನ್ನು ದೃಢಪಡಿಸಿಲ್ಲ.  CBSE ಫಲಿತಾಂಶದ ಕುರಿತು ಹೆಚ್ಚಿನ ವಿವರಗಳು ಅಪ್‌ಡೇಟ್‌ಗಳನ್ನು ತಿಳಿಯಲು ಅಧಿಕೃತ ವೆಬ್‌ಸೈಟ್‌ ಮೇಲೆ ನಿಗಾ ಇಡುವಂತೆ ವಿದ್ಯಾರ್ಥಿಗಳಿಗೆ  ಸೂಚಿಸಲಾಗಿದೆ. 


ಇದನ್ನೂ ಓದಿ : ಉದಯಪುರ ಪ್ರಕರಣ: ಕನ್ಹಯ್ಯಾ ಲಾಲ್ ಹತ್ಯೆ ಮಾಡಿದ್ದು ಇಬ್ಬರಲ್ಲ, 10 ಮಂದಿ!


CBSE ಪರೀಕ್ಷೆಯನ್ನು ಎರಡು ಭಾಗಗಳಾಗಿ ವಿಂಗಡಿಸಲು ನಿರ್ಧರಿಸಲಾಗಿದೆ. ಪ್ರೀ ಮತ್ತು ಪ್ರಾಕ್ಟಿಕಲ್ ಎಂಬ ಎರಡು ವಿಭಾಗಗಲ್ಲಿ ವಿಂಗಡಿಸಲಾಗಿದೆ. ಮಂಡಳಿಯು ಟರ್ಮ್ 1 ಪರೀಕ್ಷೆಯನ್ನು ನವೆಂಬರ್-ಡಿಸೆಂಬರ್ 2021 ರಲ್ಲಿ ನಡೆಸಿತ್ತು. ಪರೀಕ್ಷೆಯ ಮೂರು ತಿಂಗಳ ನಂತರ ಮಂಡಳಿಯು ಫಲಿತಾಂಶಗಳನ್ನು ಪ್ರಕಟಿಸಿದೆ. ಫಲಿತಾಂಶದ ಪ್ರಕಾರ, ಹಲವಾರು ವಿದ್ಯಾರ್ಥಿಗಳು ವಿವಿಧ ಶಾಲೆಗಳು ಸಮಾನ ಅಂಕಗಳನ್ನು ಪಡೆದಿರುವುದು ಗಮನಕ್ಕೆ ಬಂದಿತ್ತು. 


CBSE ಟರ್ಮ್ 2 ಮಾರ್ಕ್‌ಶೀಟ್ ಮತ್ತು ಸ್ಕೋರ್‌ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ? :


1. CBSE ಬೋರ್ಡ್ 10 ನೇ 12 ನೇ ಫಲಿತಾಂಶವನ್ನು ಪರಿಶೀಲಿಸಲು, ಮೊದಲು ಅಧಿಕೃತ ವೆಬ್‌ಸೈಟ್ cbse.gov.in ಗೆ ಹೋಗಿ.
2.ಇದರ ನಂತರ, ವೆಬ್‌ಸೈಟ್‌ನ ಮುಖಪುಟದಲ್ಲಿ, “CBSE ಟರ್ಮ್ 2 ಕ್ಲಾಸ್ 12 ಫಲಿತಾಂಶ, ಅಥವಾ CBSE ಟರ್ಮ್ 2 ಕ್ಲಾಸ್ 10 ಫಲಿತಾಂಶ 2022.” ಲಿಂಕ್ ಕ್ಲಿಕ್ ಮಾಡಿ.
3. ಈಗ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಅಗತ್ಯವಿರುವ ವಿವರಗಳನ್ನು ನಮೂದಿಸುವ ಮೂಲಕ ಲಾಗಿನ್ ಆಗಬೇಕು. 
4. ಲಾಗಿನ್ ಆದ ನಂತರ, CBSE ಟರ್ಮ್ 2 ಫಲಿತಾಂಶ  ಸ್ಕ್ರೀನ್ ಮೇಲೆ ಕಾಣಿಸುತ್ತದೆ. 
5. ಈಗ ಅದನ್ನು ಡೌನ್‌ಲೋಡ್  ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು. 


ಇದನ್ನೂ ಓದಿ : ಇಂದು ಇಡಿ ಮುಂದೆ ಹಾಜರಾಗಲಿರುವ ಸಂಜಯ್ ರಾವತ್ .!


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.