CBSE 10th Result 2022: CBSE ಬೋರ್ಡ್ 10 ನೇ ತರಗತಿ ಫಲಿತಾಂಶ ಪ್ರಕಟವಾಗಿದೆ.  CBSE 10 ನೇ ಪರೀಕ್ಷೆಯನ್ನು ನೀಡಿದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್  www.cbse.gov.in , cbseresults.nic.in, cbse.nic.in, digilocker.gov.in ನಲ್ಲಿ ಪರಿಶೀಲಿಸಬಹುದು. ಫಲಿತಾಂಶದ ಜೊತೆಗೆ  ಶೇಕಡಾವಾರು ಪ್ರಮಾಣ ಕೂಡ ಬಿಡುಗಡೆಯಾಗಿದೆ. ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕನಿಷ್ಠ 33% ಅಂಕಗಳನ್ನು ಪಡೆಯಬೇಕು. 10 ನೇ ಫಲಿತಾಂಶವನ್ನು ಪರಿಶೀಲಿಸಲು, ವಿದ್ಯಾರ್ಥಿಗಳಿಗೆ ಅವರ ಶಾಲೆಯ ಕೋಡ್ ಮತ್ತು ರೋಲ್ ನಂಬರ್ ಅಗತ್ಯವಿರುತ್ತದೆ.


COMMERCIAL BREAK
SCROLL TO CONTINUE READING

UMANG ಅಪ್ಲಿಕೇಶನ್ ಅನ್ನು CBSE ಫಲಿತಾಂಶ 2022 ಮತ್ತು ಅಧಿಕೃತ ವೆಬ್‌ಸೈಟ್‌ಗಳು ಮತ್ತು ಡಿಜಿಲಾಕರ್‌ನಲ್ಲಿ ಪರಿಶೀಲಿಸಲು ಅಕ್ಸೆಸ್ ಪಡೆದುಕೊಳ್ಳ ಬಹುದು. ಫಲಿತಾಂಶ ಪ್ರಕಟವಾದಾಗ ವೆಬ್‌ಸೈಟ್‌ಗಳು ಓವರ್‌ಲೋಡ್ ಆಗುವ ಸಾಧ್ಯತೆ ಇರುವುದರಿಂದ ಅಭ್ಯರ್ಥಿಗಳು ಈ ಅಪ್ಲಿಕೇಶನ್ ಮೂಲಕ ಕೂಡಾ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. IOS Apple Store ಮತ್ತು Google Play Store ನಿಂದ UMANG ಅಪ್ಲಿಕೇಶನ್ ಅನ್ನು  ಇನ್ಸ್ಟಾಲ್ ಮಾಡಿಕೊಳ್ಳಬಹುದು.  


ಇದನ್ನೂ ಓದಿ : CBSE ಬೋರ್ಡ್ 12ನೇ ತರಗತಿ ಫಲಿತಾಂಶ: ರಿಸಲ್ಟ್‌ ಪರಿಶೀಲಿಸಲು ಈ ಮಾರ್ಗ ಅನುಸರಿಸಿ


CBSE 10ನೇ ಮಾರ್ಕ್‌ಶೀಟ್ ಡೌನ್‌ಲೋಡ್ ಮಾಡುವುದು ಹೇಗೆ ? 
ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಮಾರ್ಕ್ ಶೀಟ್ ಮತ್ತು ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬೇಕಾದರೆ ತಮ್ಮ ಶಾಲೆಗಳನ್ನು ಸಂಪರ್ಕಿಸಬೇಕು. ಅಲ್ಲಿಂದ  ಮತ್ತು ಡಿಜಿಲಾಕರ್ ಪಿನ್ ಕೇಳಬೇಕು. ಈ ಪಿನ್ ಸಂಖ್ಯೆಯನ್ನು ಭದ್ರತಾ ಕ್ರಮವಾಗಿ CBSE ಪರಿಚಯಿಸಿದೆ.


CBSE ಫಲಿತಾಂಶಗಳು 2022 ಅನ್ನು SMS ಮೂಲಕ ಪರಿಶೀಲಿಸಿ :


-ವಿದ್ಯಾರ್ಥಿಗಳು ತಮ್ಮ ಫೋನ್‌ನ ಸಂದೇಶ ಬಾಕ್ಸ್‌ಗೆ ಹೋಗಿ ತಮ್ಮ CBSE 10ನೇ ರೋಲ್ ನಂಬರ್ ಟೈಪ್ ಮಾಡಬೇಕು. 
-ಈಗ ಈ ಸಂದೇಶವನ್ನು 7738299899 ಗೆ ಕಳುಹಿಸಿ. 
-ಕೆಲವೇ ಸಮಯದಲ್ಲಿ ನಿಮ್ಮ ಫಲಿತಾಂಶವು SMS ಮೂಲಕ ಅದೇ ಸಂಖ್ಯೆಗೆ ಬರುತ್ತದೆ.


ಇದನ್ನೂ ಓದಿ : JEE Main 2022 admit Card ಬಿಡುಗಡೆ: ಡೌನ್‌ಲೋಡ್ ಮಾಡಲು ಈ ಲಿಂಕ್ ಬಳಸಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ