Work From Home New Rules: ವರ್ಕ್ ಫ್ರಮ್ ಹೋಮ್ ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ, ಯಾವ ನೌಕರರಿಗೆ ಇದರಿಂದ ಲಾಭ?

New Rules From Work From Home - ವರ್ಕ್ ಫ್ರಮ್ ಹೋಮ್ ಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ. ಹೊಸ ಹಿಮಯಗಳ ಪ್ರಕಾರ, ಸ್ಪೆಷಲ್ ಎಕನಾಮಿಕ್ ಯುನಿಟ್ ಝೋನ್ ನ ಶೇ.50 ರಷ್ಟು ನೌಕರರಿಗೆ ವರ್ಕ್ ಫ್ರಮ್ ಹೋಮ್ ಅನುಮತಿ ಇದೆ ಎಂದು ಕೇಂದ್ರ ವಾಣಿಜ್ಯ ಇಲಾಖೆ ಘೋಷಿಸಿದೆ. ಹಾಗಾದರೆ ಬನ್ನಿ ಇದರ ಲಾಭ ಯಾವ ನೌಕರರಿಗೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,   

Written by - Nitin Tabib | Last Updated : Jul 20, 2022, 07:17 PM IST
  • ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಮನೆಯಿಂದಲೇ ಕಚೇರಿ ಕೆಲಸ ಮಾಡುವ ಸಂಸ್ಕೃತಿ ಆರಂಭಗೊಂಡಿದೆ.
  • ಭಾರತದಲ್ಲೂ ಹೆಚ್ಚಿನ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸಿದ್ದಾರೆ.
  • ಆದರೆ ಇದೀಗ ಕಚೇರಿಯಿಂದ ಕಾರ್ಯನಿರ್ವಹಿಸಲು ಪುನಃ ಬುಲಾವ್ ಕಳುಹಿಸಲಾಗುತ್ತಿದೆ.
Work From Home New Rules: ವರ್ಕ್ ಫ್ರಮ್ ಹೋಮ್ ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ, ಯಾವ ನೌಕರರಿಗೆ ಇದರಿಂದ ಲಾಭ? title=
Work From Home New Rules

Work From Home Guidelines: ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಮನೆಯಿಂದಲೇ ಕಚೇರಿ ಕೆಲಸ ಮಾಡುವ ಸಂಸ್ಕೃತಿ ಆರಂಭಗೊಂಡಿದೆ. ಭಾರತದಲ್ಲೂ ಹೆಚ್ಚಿನ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸಿದ್ದಾರೆ. ಆದರೆ ಇದೀಗ ಕಚೇರಿಯಿಂದ ಕಾರ್ಯನಿರ್ವಹಿಸಲು ಪುನಃ ಬುಲಾವ್ ಕಳುಹಿಸಲಾಗುತ್ತಿದೆ. ಆದರೆ, ಇದೀಗ ಕೇಂದ್ರ ವಾಣಿಜ್ಯ ಸಚಿವಾಲಯವು ಮನೆಯಿಂದಲೇ ಕೆಲಸ ಮಾಡಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಇಲಾಖೆ ನೀಡಿದ ಮಾಹಿತಿ
ಮನೆಯಿಂದ ಕೆಲಸ ಮಾಡುವ ನಿಯಮಗಳನ್ನು ಪ್ರಕಟಿಸಿದ ವಾಣಿಜ್ಯ ಸಚಿವಾಲಯ, ಇದೀಗ ಉದ್ಯೋಗಿಗಳು ಗರಿಷ್ಠ ಅಂದರೆ ಒಂದು ವರ್ಷದವರೆಗೆ ಮನೆಯಿಂದ ಕೆಲಸ ಪಡೆಯಲು ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದೆ. ಹೊಸ ನಿಯಮಗಳ ಪ್ರಕಾರ, ಶೇಕಡಾ 50 ರಷ್ಟು ಉದ್ಯೋಗಿಗಳು ಮಾತ್ರ ಮನೆಯಿಂದಲೇ ಕೆಲಸದ ಪ್ರಯೋಜನವನ್ನು ಪಡೆಯಬಹುದು. ವಿಶೇಷ ಆರ್ಥಿಕ ವಲಯ ಘಟಕದ ಶೇ. 50% ರಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿದೆ. ವಿಶೇಷ ಆರ್ಥಿಕ ವಲಯದ ನಿಯಮ 43A 2006 ರ ಅಡಿ ಮನೆಯಿಂದ ಕೆಲಸ ಮಾಡಲು ಈ ನಿಯಮವನ್ನು ಸೂಚಿಸಲಾಗಿದೆ.

ಯಾವ ಉದ್ಯೋಗಿಗಳು ಪ್ರಯೋಜನ ಪಡೆಯಲಿದ್ದಾರೆ?
ನೌಕರರ ನಿರಂತರ ಮನವಿಗಳ ಹಿನ್ನೆಲೆ ಇಲಾಖೆಯು ವಿಶೇಷ ಆರ್ಥಿಕ ವಲಯಕ್ಕೆ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ. ಸಚಿವಾಲಯವು ಸೂಚಿಸಿದ ನಿಯಮಗಳಲ್ಲಿ, ಎಲ್ಲಾ SEZ ಗಳಲ್ಲಿ ಏಕರೂಪದ ರಾಷ್ಟ್ರವ್ಯಾಪಿ ಕೆಲಸದ ನೀತಿಯನ್ನು ಅನುಸರಿಸಲು ಉದ್ಯಮದ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಲಾಗಿದೆ. ಸರ್ಕಾರದ ಹೊಸ ಮಾರ್ಗಸೂಚಿಗಳು ಯಾವುವು ನೋಡೋಣ ಬನ್ನಿ,

ಹೊಸ ಮಾರ್ಗಸೂಚಿಗಳಲ್ಲಿ ಏನಿದೆ?
1. ಈ ನಿಯಮಗಳು IT/ITES SEZ ಘಟಕಗಳ ಉದ್ಯೋಗಿಗಳಿಗೆ ಅನ್ವಯಿಸಲಿವೆ.

ಇದನ್ನೂ ಓದಿ-Railway Recruitment 2022 : ICF ರೈಲ್ವೆಯಲ್ಲಿ 876  ಹುದ್ದೆಗಳಿಗೆ ಅರ್ಜಿ : ಜುಲೈ 26 ಕೊನೆ ದಿನ!

2. ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿರುವ ಅಥವಾ ಪ್ರಯಾಣಿಸುವ ಅಥವಾ ನರಂತರ ಪ್ರಯಾಣ ಕೈಗೊಳ್ಳುವ ಮತ್ತು ಆಫ್‌ಸೈಟ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಇದು ಒಳಗೊಂಡಿರುತ್ತದೆ.

ಇದನ್ನೂ ಓದಿ-Nitin Gadkari: ಕಾರ್, ಬೈಕ್ ಹಾಗೂ ಆಟೋ ಮಾಲೀಕರಿಗೆ ಎಚ್ಚರಿಕೆ ನೀಡಿದ ಗಡ್ಕರಿ ಹೇಳಿದ್ದೇನು?

3. SEZ ಘಟಕಗಳಲ್ಲಿ ಕರ್ಯನಿರ್ವಹಿಸುವವರಿಗೆ ಬೇಕಾಗುವ ಉಪಕರಣಗಳು ಮತ್ತು ಮನೆಯಿಂದ ಅಧಿಕೃತ ಕೆಲಸ ನಿರ್ವಹಿಸಲು ಸುರಕ್ಷಿತ ಸಂಪರ್ಕವನ್ನು ಒದಗಿಸಲಾಗುವುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News